7 ತಿಂಗಳು ಮೈದಾನದಿಂದ ಹೊರಗಿದ್ದು ಕ್ರಿಕೆಟ್‌ ನಿಯಮವನ್ನೇ ಮರೆತ್ರಾ ಕೆಎಲ್‌ ರಾಹುಲ್!‌ ಇದೆಂತಾ ಗೊಂದಲ... ವಿಡಿಯೋ

IND vs SL 1st ODI: ಬಹಳ ದಿನಗಳ ನಂತರ ಅವಕಾಶ ಸಿಕ್ಕಾಗ ರಾಹುಲ್ ಕ್ರಿಕೆಟ್ ನಿಯಮಗಳನ್ನು ಮರೆತಿದ್ದಾರೆ. ರಾಹುಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ನಾಯಕ ರೋಹಿತ್ ಶರ್ಮಾ ಅವರಿಗೆ ಐಪಿಎಲ್ ನಿಯಮಗಳ ಬಗ್ಗೆ ಹೇಳುತ್ತಿರುವುದು ಕಂಡುಬಂದಿದೆ.

Written by - Bhavishya Shetty | Last Updated : Aug 2, 2024, 08:46 PM IST
    • ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ
    • ಮೊದಲ ಏಕದಿನ ಪಂದ್ಯದಲ್ಲಿ ಹಲವು ಬದಲಾವಣೆಗಳು ಕಂಡುಬಂದವು
    • ಸುಮಾರು 7 ತಿಂಗಳ ಕಾಲ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಕೆ.ಎಲ್.ರಾಹುಲ್
7 ತಿಂಗಳು ಮೈದಾನದಿಂದ ಹೊರಗಿದ್ದು ಕ್ರಿಕೆಟ್‌ ನಿಯಮವನ್ನೇ ಮರೆತ್ರಾ ಕೆಎಲ್‌ ರಾಹುಲ್!‌ ಇದೆಂತಾ ಗೊಂದಲ... ವಿಡಿಯೋ title=

IND vs SL 1st ODI: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಕೊಲಂಬೊದಲ್ಲಿ ಮುಂದುವರೆದಿದೆ. ಮೊದಲ ಏಕದಿನ ಪಂದ್ಯದಲ್ಲಿ ಹಲವು ಬದಲಾವಣೆಗಳು ಕಂಡುಬಂದವು. ಸುಮಾರು 7 ತಿಂಗಳ ಕಾಲ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಕೆ.ಎಲ್.ರಾಹುಲ್ ತಂಡಕ್ಕೆ ವಾಪಾಸ್ಸಾಗಿದ್ದಾರೆ.  

ಇದನ್ನೂ ಓದಿ: ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿದ್ದ ಅರ್ಜಿ

ಇನ್ನು ಬಹಳ ದಿನಗಳ ನಂತರ ಅವಕಾಶ ಸಿಕ್ಕಾಗ ರಾಹುಲ್ ಕ್ರಿಕೆಟ್ ನಿಯಮಗಳನ್ನು ಮರೆತಿದ್ದಾರೆ. ರಾಹುಲ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ನಾಯಕ ರೋಹಿತ್ ಶರ್ಮಾ ಅವರಿಗೆ ಐಪಿಎಲ್ ನಿಯಮಗಳ ಬಗ್ಗೆ ಹೇಳುತ್ತಿರುವುದು ಕಂಡುಬಂದಿದೆ.

ವಾಷಿಂಗ್ಟನ್ ಸುಂದರ್ ಅವರ ಎಸೆತದಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್ ನಿಸ್ಸಾಂಕಾ ವಿಕೆಟ್‌ ಒಪ್ಪಿಸಿದ್ದರು. ಆದರೆ ಅದಕ್ಕೂ ಮುನ್ನ ಕೆಎಲ್‌ ರಾಹುಲ್‌ ನಿಯಮದ ವಿಚಾರದಲ್ಲಿ ಗೊಂದಲಗೊಂಡಿರುವುದು ಕಂಡುಬಂತು. ಅದರ ವಿಡಿಯೋ ಇಲ್ಲಿದೆ ನೋಡಿ.

 

ಇದನ್ನೂ ಓದಿ: ಸ್ಟಾರ್‌ ನಟನ ಪ್ರೇಯಸಿಯ ರಂಪಾಟ..! ಲೈವ್‌ ಟಿವಿ ಶೋನಲ್ಲೇ ಚಪ್ಪಲಿಯಲ್ಲಿ ಹೊಡೆದ ಯುವತಿ! ವಿಡಿಯೋ

ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ಮಾಡಿದೆ. ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು, ಆದರೆ ಆರಂಭವು ನಿರೀಕ್ಷಿತವಾಗಿ ಸಾಗಲಿಲ್ಲ. ಒಂದು ತುದಿಯಿಂದ ಆರಂಭಿಕ ಪಾಥುಮ್ ನಿಸ್ಸಾಂಕ 56 ರನ್‌ʼಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ನಂತರ ವಿಕೆಟ್‌ʼಗಳು ಬ್ಯಾಕ್‌ ಟು ಬ್ಯಾಕ್‌ ಬೀಳಲು ಆರಂಭಿಸಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News