ಇಂದೋರ್: ಇಲ್ಲಿನ ಹೊಲ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವು ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ದುಕೊಂಡಿತು.
ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಕೋಲ್ಕತ್ತಾ ತಂಡವು ನರೈನ್ (75) ಮತ್ತು ಕಾರ್ತಿಕ್( 50) ಅರ್ಧ ಶತಕದ ನೆರವಿನಿಂದಾಗಿ 20 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಭರ್ಜರಿ 245 ರನ್ ಗಳಿಸಿತು.
That is it from the first game tonight. @KKRiders beat #KXIP by 31 runs in Indore. #KXIPvKKR #VIVOIPL
Details - https://t.co/VeNHN4VD6o pic.twitter.com/rpnLDwaqBF
— IndianPremierLeague (@IPL) May 12, 2018
ಈ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ತಂಡವು ಸಹಿತ ಉತ್ತಮ ಆರಂಭವನ್ನೇ ಪ್ರಾರಂಭಿಸಿತು. ಪಂಜಾಬ್ ಪರ ಕನ್ನಡಿಗ ಕೆ ಎಲ್ ರಾಹುಲ್ ರವರ (66) ಅರ್ಧಶತಕ ತಂಡಕ್ಕೆ ಭದ್ರ ಬುನಾದಿಯನ್ನು ಹಾಕಿತು. ಇವರ ನಂತರ ಆರ್ ಆಶ್ವಿನ್ (45) ಉತ್ತಮ ಹೋರಾಟ ನಡೆಸಿದರು.ಇದರ ಫಲವಾಗಿ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 214 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಉತ್ತಮ ಹೋರಾಟ ನೀಡುವಲ್ಲಿ ಯಶಸ್ವಿಯಾದರೂ ಸಹಿತ 31 ರನ್ ಗಳ ಸೋಲು ಅನುಭವಿಸಿತು.