Krunal Pandya: ಕೃನಾಲ್‌ ಮೇಲೆ ಕೋಪಗೊಂಡ ಪೊಲಾರ್ಡ್‌: ಮಾಡಿದ್ದೇನು ನೋಡಿ

ಇನ್ನು ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ಆಟಗಾರ ಕೃನಾಲ್‌ ಪಾಂಡ್ಯ ಈ ಬಾರಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಮಿಂಚುತ್ತಿದ್ದಾರೆ. ಭಾನುವಾರವೂ ಕಿರಾನ್‌ ಪೊಲಾರ್ಡ್‌ ಅವರ ವಿಕೆಟ್‌ ಪಡೆದು ಸಂಭ್ರಮಿಸಿದ್ದು, ಕೃನಾಲ್‌ ಮುತ್ತಿಡಲು ಮುಂದಾಗಿದ್ದಾರೆ. ಈ ನಡೆಗೆ ಪೊಲಾರ್ಡ್‌ ಕೋಪಗೊಂಡಿದ್ದಾರೆ. 

Written by - Bhavishya Shetty | Last Updated : Apr 25, 2022, 01:28 PM IST
  • ಕೃನಾಲ್‌ ವಿರುದ್ಧ ಕೋಪಗೊಂಡ ಪೊಲಾರ್ಡ್‌
  • ಲಕ್ನೋ- ಮುಂಬೈ ಪಂದ್ಯದ ವೇಳೆ ಘಟನೆ
  • ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತ
Krunal Pandya: ಕೃನಾಲ್‌ ಮೇಲೆ ಕೋಪಗೊಂಡ ಪೊಲಾರ್ಡ್‌: ಮಾಡಿದ್ದೇನು ನೋಡಿ title=
Krunal Pandya

15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯ ಸದ್ಯ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಹಿಂದೆಂದೂ ನೀಡಿರದ ಕಳಪೆ ಪ್ರದರ್ಶನವನ್ನು ನೀಡುತ್ತಾ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿಯೂ ಹೀನಾಯ ಸೋಲು ಕಂಡಿರುವ ಮುಂಬೈ ಸದ್ಯ ಕಂಗೆಟ್ಟಿದೆ. ಈ ಸೋಲಿನಿಂದ ನೊಂದಿರುವ ತಂಡ ಇದೀಗ ಕೃನಾಲ್‌ ಪಾಂಡ್ಯ ಮಾಡಿರುವ ಕೆಲಸಕ್ಕೆ ಕೋಪಗೊಂಡಿದೆ. 

ಇದನ್ನು ಓದಿ: IPL : ಇಂದು ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಚೆನ್ನೈ!

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಲಕ್ನೋ ಸೂಪರ್‌ ಜೈಂಟ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯದಲ್ಲಿ ಮುಂಬೈ ತಂಡ 169 ರನ್‌ಗಳ ಗುರಿ ಬೆನ್ನತ್ತಿ 20 ಓವರ್‌ಗಳಲ್ಲಿ 132 ರನ್‌ ಗಳಿಸಲಷ್ಟೇ ಶಕ್ತವಾಯಿತು. ಗೆಲುವಿನ ನಿರೀಕ್ಷೆಯಲ್ಲಿದ್ದ ಮುಂಬೈ ತಂಡಕ್ಕೆ ಈ ಸೋಲು ನೋವನ್ನುಂಟು ಮಾಡಿದೆ. 

ಇನ್ನು ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ಆಟಗಾರ ಕೃನಾಲ್‌ ಪಾಂಡ್ಯ ಈ ಬಾರಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಮಿಂಚುತ್ತಿದ್ದಾರೆ. ಭಾನುವಾರವೂ ಕಿರಾನ್‌ ಪೊಲಾರ್ಡ್‌ ಅವರ ವಿಕೆಟ್‌ ಪಡೆದು ಸಂಭ್ರಮಿಸಿದ್ದು, ಕೃನಾಲ್‌ ಮುತ್ತಿಡಲು ಮುಂದಾಗಿದ್ದಾರೆ. ಈ ನಡೆಗೆ ಪೊಲಾರ್ಡ್‌ ಕೋಪಗೊಂಡಿದ್ದಾರೆ. 

​ಇದನ್ನು ಓದಿ: ಐಪಿಎಲ್‌ ಇತಿಹಾಸದ ಶತಕವೀರರು: ಸಾಧಕರ ಪಟ್ಟಿ ಸೇರಿದ ಕನ್ನಡಿಗ ರಾಹುಲ್‌

ಏನಿದು ಘಟನೆ: 
ಮುಂಬೈ ಇಂಡಿಯನ್ಸ್‌ ಮತ್ತು ಲಕ್ನೋ ನಡುವಣ ಪಂದ್ಯದ ಕೊನೆಯ ಓವರ್‌ನಲ್ಲಿ ಕೃನಾಲ್‌ ಪಾಂಡ್ಯ ಬೌಲಿಂಗ್‌ ಮಾಡಿದ್ದಾರೆ. ಈ ಓವರ್‌ನ ಮೊದಲ ಎಸೆತದಲ್ಲೇ ಪೊಲಾರ್ಡ್‌ ಅವರು ದೀಪಕ್‌ ಹೂಡಾಗೆ ಕ್ಯಾಚ್‌ ನೀಡಿ ಔಟಾಗಿದ್ದಾರೆ. ಮೊದಲೇ ಔಟ್‌ ಆದ ಬೇಸರದಲ್ಲದ್ದ ಪೊಲಾರ್ಡ್‌ ಪೆವಿಲಿಯನ್‌ ಕಡೆ ತೆರಳುತ್ತಿದ್ದಾಗ ಕೃನಾಲ್‌ ಆಗಮಿಸಿ ಪೊಲಾರ್ಡ್‌ ಮೇಲೆ ಹಾರಿ ಮುತ್ತಿಟ್ಟಿದ್ದಾರೆ. ಸಾಮಾನ್ಯವಾಗಿ ಎದುರಾಳಿಗಳು ಕೆಣಕಿದಾಗ ಸ್ಥಳದಲ್ಲಿಯೇ ಪ್ರತ್ಯುತ್ತರ ನೀಡುವ ಪೊಲಾರ್ಡ್‌ ಈ ಬಾರಿ ಏನೂ ಉತ್ತರ ನೀಡದೆ ತೆರಳಿದ್ದಾರೆ. ಆದರೆ ಬೇಸರ ವ್ಯಕ್ತಪಡಿಸಿದ್ದು ಮಾತ್ರ ಮುಖದ ಹಾವಭಾವದಲ್ಲಿ ಕಂಡುಬಂದಿದೆ. 

ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಕೃನಾಲ್‌ ನಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News