ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 62 ರನ್ ಗಳ ಭರ್ಜರಿ ಗೆಲುವು ಸಾಧಿಸಿತು.
15ನೇ ಆವೃತ್ತಿ ಐಪಿಎಲ್ ಪಂದ್ಯಾವಳಿಗೆ ಹೊಸ ತಂಡಗಳಾಗಿ ಸೇರಿಕೊಂಡ ತಂಡಗಳ ಪೈಕಿ ಹಾರ್ದಿಕ್ ಪಂದ್ಯ ನೇತೃತ್ವದ ಗುಜರಾತ್ ಪ್ಲೇ ಆಫ್ ಗೆ ಅರ್ಹತೆ ಗಿಟ್ಟಿಸಿದ ಮೊದಲ ತಂಡ ಎಂಬ ಅಗ್ಗಳಿಕೆಗೆ ಪಾತ್ರವಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 144 ರನ್ ಗಳಿಸಿತು. ಗುಜರಾತ್ ಪರ ಶುಭಮನ್ ಗಿಲ್(ಅಜೇಯ 63) ಆಕರ್ಷಕ ಅರ್ಧಶತಕ ಭಾರಿಸಿದರು. ಡೇವಿಡ್ ಮಿಲ್ಲರ್(26), ರಾಹುಲ್ ತೇವಾಟಿಯಾ(ಅಜೇಯ 22), ಹಾರ್ದಿಕ್ ಪಾಂಡ್ಯ(11) ಮತ್ತು ಮ್ಯಾಥೋ ವೇಡ್(10) ರನ್ ಗಳಿಸಿದರು. ಲಕ್ನೋ ಪರ ಅವೇಶ್ ಖಾನ್ 2, ಮೋಹ್ಸಿನ್ ಖಾನ್ ಮತ್ತು ಜೆಸನ್ ಹೋಲ್ಡರ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
Shubman Gill is adjudged Player of the Match for his fine knock of 63* off 49 deliveries as @gujarat_titans win by 62 runs against #LSG.#TATAIPL #LSGvGT pic.twitter.com/96JKpgqcis
— IndianPremierLeague (@IPL) May 10, 2022
ಇದನ್ನೂ ಓದಿ: CSK vs DC : CSK ಅನ್ನು ಪ್ಲೇ ಆಫ್‌ಗೆ ತಲುಪಿಸಲು ಈ ನಿರ್ಧಾರ ತೆಗೆದುಕೊಂಡ ಧೋನಿ!
ಗುಜರಾತ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಲಕ್ನೋ
145 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಕನ್ನಡಿಗ ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಗುಜರಾತ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. 13.5 ಓವರ್ ಗಳಲ್ಲಿ ಸರ್ವಪತನ ಕಂಡ ಲಕ್ನೋ ಕೇವಲ 82 ರನ್ ಗಳಿಸಲಷ್ಟೇ ಶಕ್ತವಾಯಿತು. ಲಕ್ನೋ ಪರ ದೀಪಕ್ ಹೂಡಾ(27) ಮತ್ತು ಕ್ವಿಂಟನ್ ಡಿಕಾಕ್(11) ಮಾತ್ರ ಎರಡಂಕಿ ಮೊತ್ತ ದಾಟಿದರು. ಕೆ.ಎಲ್.ರಾಹುಲ್ ಸೇರಿದಂತೆ ಇನ್ನುಳಿದ ಯಾವ ಆಟಗಾರನು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಂತು ಆಡಲಿಲ್ಲ. ಗುಜರಾತ್ ಪರ ರಶೀದ್ ಖಾನ್ 24ಕ್ಕೆ 4 ಅತ್ಯುತ್ತಮ ಬೌಲಿಂಗ್ ಮಾಡಿದರು. ಯಶ್ ದಯಾಳ್ ಮತ್ತು ಸಾಯಿ ಕಿಶೋರ್ ತಲಾ 2, ಮೊಹಮ್ಮದ್ ಶಮಿ 1 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: CSK vs DC : ಡೆಲ್ಲಿ ಕ್ಯಾಪಿಟಲ್ಸ್‌ನ ಈ ಸ್ಟಾರ್ ಆಟಗಾರ ಆಸ್ಪತ್ರೆಗೆ ದಾಖಲು!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.