2024ರ ಐ‌ಪಿ‌ಎಲ್ ಪಂದ್ಯದಲ್ಲಿ ಆಡ್ತಾರಾ ಎಂ.ಎಸ್. ಧೋನಿ!

IPL 2023: ಈ ಬಾರಿಯ ಐ‌ಪಿ‌ಎಲ್ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಗುಜರಾತ್ ಟೈಟಾನ್ಸ್ ಅನ್ನು ಸೋಲಿಸಿ  ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐ‌ಪಿ‌ಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದರೊಂದಿಗೆ ಎಂಎಸ್ ಧೋನಿ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಎರಡನೇ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 

Written by - Yashaswini V | Last Updated : May 30, 2023, 07:36 AM IST
  • ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐದನೇ ಬಾರಿಗೆ ಚಾಂಪಿಯನ್ ಪಟ್ಟ
  • ಈ ಗೆಲುವಿನೊಂದಿಗೆ ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದ ಸಿ‌ಎಸ್‌ಕೆ
  • ಪಂದ್ಯದ ಬಳಿಕ ಮಾತನಾಡಿದಎಂ.ಎಸ್. ಧೋನಿ ತಮ್ಮ ನಿವೃತ್ತಿ ಬಗ್ಗೆ ಹೇಳಿದ್ದೇನು?
2024ರ ಐ‌ಪಿ‌ಎಲ್ ಪಂದ್ಯದಲ್ಲಿ ಆಡ್ತಾರಾ ಎಂ.ಎಸ್. ಧೋನಿ! title=

Mahendra Singh Dhoni In IPL 2024: ನಿನ್ನೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಡಿಎಲ್‌ಎಸ್ ವಿಧಾನದ ಮೂಲಕ ಗುಜರಾತ್ ಟೈಟಾನ್ಸ್ ಅನ್ನು ಐದು ವಿಕೆಟ್‌ಗಳಿಂದ ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐದನೇ ಬಾರಿಗೆ ಐ‌ಪಿ‌ಎಲ್ ಪ್ರಯಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಸಿಎಸ್‌ಕೆ ತಂಡದ ನಾಯಕ  ಎಂಎಸ್ ಧೋನಿ ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದ ಎರಡನೇ ನಾಯಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.  ಐ‌ಪಿ‌ಎಲ್ ಪ್ರಶಸ್ತಿ ಜೊತೆಗೆ ತನ್ನ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆಯನ್ನೂ ನೀಡಿರುವ ಕೂಲ್ ಕ್ಯಾಪ್ಟನ್ ಐಪಿಎಲ್ 2024 ರಲ್ಲಿಯೂ ಆಡಲು ಬಯಸುವುದಾಗಿ ಘೋಷಿಸಿದ್ದಾರೆ. 

ಹೌದು, ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾದಾಗಿನಿಂದ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಕಾಡುತ್ತಿದ್ದ ಇದು ಧೋನಿಯವರ ಕಡೆಯ ಐ‌ಪಿ‌ಎಲ್ ಎಂಬ ಬೇಸರಕ್ಕೆ ಮದ್ದು ನೀಡಿರುವ ಕೂಲ್ ಕ್ಯಾಪ್ಟನ್,  "ನನ್ನ ನಿವೃತ್ತಿ ಘೋಷಿಸಲು ಇದು ಉತ್ತಮ ಸಮಯ. ಆದರೆ ನಾನು ಎಲ್ಲಾ ಕಡೆಯಿಂದ ಪಡೆದ ಪ್ರೀತಿಯ ಪ್ರಮಾಣ ಅಭಿಮಾನಿಗಳಿಂದ ಸಿಕ್ಕಿರುವ ಪ್ರೀತಿಗೆ ಮುಂದಿನ ವರ್ಷವೂ ಮೈದಾನಕ್ಕೆ ಬಂದು ಮತ್ತೊಮ್ಮೆ ಅವರಿಗಾಗಿ ಆಡಬಯಸುತ್ತೇನೆ" ಎಂದಿದ್ದಾರೆ. 

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಐದನೇ ಬಾರಿಗೆ ಚಾಂಪಿಯನ್ ಮಾಡಿದ ಎಂ.ಎಸ್. ಧೋನಿ, ಈ ಗೆಲುವಿನೊಂದಿಗೆ  ಐದು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು, ನೀವು ಪರಿಸ್ಥಿತಿಯನ್ನು ನೋಡಿದರೆ, ನನ್ನ ನಿವೃತ್ತಿ ಘೋಷಿಸಲು ಇದು ನನಗೆ ಉತ್ತಮ ಸಮಯ. ಇಲ್ಲಿಂದ ಹೊರಡುವುದು ನನಗೆ ಅತ್ಯಂತ ಸುಲಭ. ಆದರೆ ಕಷ್ಟದ ಸಂಗತಿ ಎಂದರೆ ಮುಂದಿನ 9 ತಿಂಗಳ ಕಾಲ ಕಠಿಣ ಪರಿಶ್ರಮ ಪಟ್ಟು ಮುಂದಿನ ಐಪಿಎಲ್ ಆಡಲು ಪ್ರಯತ್ನಿಸುವುದು. ಇದು  ದೇಹಕ್ಕೆ ಸುಲಭವಾಗುವುದಿಲ್ಲ. ಆದರೆ, ಅವರಿಗೆ (ಅಭಿಮಾನಿಗಳಿಗೆ) ನನ್ನಿಂದ ಉಡುಗೊರೆಯಾಗಲಿದೆ ಎಂದು ಸ್ಪಷ್ಟಪಡಿಸಿದರು. 

ಇದನ್ನೂ ಓದಿ- MS Dhoni: ಧೋನಿ ಬತ್ತಳಿಕೆಗೆ ಮತ್ತೊಂದು ಗರಿಮೆ: IPL ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಏಕೈಕ ಆಟಗಾರ ಮಾಹಿ

ಸಿಎಸ್‌ಕೆಯಲ್ಲಿ ಮೊದಲ ಪಂದ್ಯದಲ್ಲಿ ಆಡುವಾಗ ಎಲ್ಲರೂ ನನ್ನ ಹೆಸರನ್ನು  ಕೂಗುತ್ತಿದ್ದರು. ಆ ಸಂದರ್ಭದಲ್ಲಿ ನನ್ನ ಕಣ್ಣುಗಳು ಒದ್ದೆಯಾಗಿದ್ದವು. ನಾನು ಡಗೌಟ್‌ನಲ್ಲಿ ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗಿತ್ತು. ನಾನು ಇದನ್ನು ಆನಂದಿಸಬೇಕು ಎಂದು ನಾನು ಅರಿತುಕೊಂಡೆ. ಇಂದು ನಾನೇನಾಗಿದ್ದೇನೆ ಅದಕ್ಕೆ ಮೂಲ ಕಾರಣವೇ ಅಭಿಮಾನಿಗಳ ಪ್ರೀತಿ ಎಂದು ನಾನು ಭಾವಿಸುತ್ತೇನೆ. ಇದು ನನ್ನ ವೃತ್ತಿ ಜೀವನದ ಪ್ರಮುಖ ಭಾಗವಾಗಿದೆ. ಇದು ಚೆನ್ನೈನಲ್ಲಿ ನಡೆದ ಘಟನೆ. ಆದರೆ ಮರಳಿ ಬಂದು ಸಾಧ್ಯವಾದಷ್ಟು ಆಡುವುದು ಒಳ್ಳೆಯದು. ನಾನು ಆಡುವ ಕ್ರಿಕೆಟ್‌ನಲ್ಲಿ ಅವರೂ ಆಡಬಹುದು ಎಂಬ ಭಾವನೆ ವೀಕ್ಷಕರಿಂದ ನನಗೆ ಹೆಚ್ಚು ಸಿಗುತ್ತದೆ. ಇದರಲ್ಲಿ ಸಾಂಪ್ರದಾಯಿಕವಾಗಿ ಏನೂ ಇಲ್ಲ. ನಾನು ಎಲ್ಲವನ್ನೂ ಸರಳವಾಗಿಡಲು ಬಯಸುತ್ತೇನೆ ಎಂದು ಎಂ.ಎಸ್. ಧೋನಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. 

ಗಮನಾರ್ಹವಾಗಿ, ಪ್ರಶಸ್ತಿ ಗೆಲ್ಲುವಲ್ಲಿ ಪರಿಣತಿ ಹೊಂದಿರುವ ಎಂಎಸ್ ಧೋನಿ, 'ಪ್ರತಿಯೊಂದು ಟ್ರೋಫಿಯೂ ವಿಶೇಷ, ಆದರೆ ಐಪಿಎಲ್‌ನ ವಿಶೇಷತೆ ಏನೆಂದರೆ ಪ್ರತಿ ಕಷ್ಟದ ಪಂದ್ಯಕ್ಕೂ ಸಿದ್ಧರಾಗಿರಬೇಕು' ಎಂದಿದ್ದಾರೆ. ಈ ಸಂದರ್ಭದಲ್ಲಿ ಐ‌ಪಿ‌ಎಲ್ ಫೈನಲ್ ಪಂದ್ಯದಲ್ಲಿ, ಬೌಲಿಂಗ್ ಘಟಕವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಬಗ್ಗೆಯೂ ಧೋನಿ ಗಮನ ಸೆಳೆದರು. 'ಇಂದು (ಮೇ 29) ಹಲವು ಲೋಪಗಳಾಗಿವೆ. ಬೌಲಿಂಗ್ ವಿಭಾಗ ಕೆಲಸ ಮಾಡಲಿಲ್ಲ. ಆದರೆ ಬ್ಯಾಟಿಂಗ್ ವಿಭಾಗ ಅವರ ಮೇಲೆ ಒತ್ತಡ ಹೇರಿತು ಎಂದು ತಿಳಿಸಿದರು. 

ಇದನ್ನೂ ಓದಿ- ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಅಂಬಟಿ ರಾಯಡು

ಇನ್ನು ಐ‌ಪಿ‌ಎಲ್ ಪಂದ್ಯದಲ್ಲಿ ಐದನೇ ಬಾರಿಗೆ ಪ್ರಶಸ್ತಿ ಗೆದ್ದಿರುವುದಕ್ಕಾಗಿ, ತಮ್ಮ ತಂಡದ ಆಟಗಾರರನ್ನು ಹೊಗಳಿದ ಎಂ.ಎಸ್. ಧೋನಿ, ಅಜಿಂಕ್ಯ ರಹಾನೆ ಅವರ ಪ್ರಬುದ್ಧತೆಯನ್ನು ವಿಶೇಷವಾಗಿ ಶ್ಲಾಘಿಸಿದರು. ಈ ಪಂದ್ಯದ ನಂತರ ಕ್ರಿಕೆಟ್‌ನಿಂದ ನಿವೃತ್ತರಾದ ಅಂಬಟಿ ರಾಯುಡು ಅವರನ್ನು ಸಹ ಹೊಗಳಿದರು. ರಾಯುಡು ಯಾವಾಗಲೂ ಆಟ ಆಡುವಾಗ ತಮ್ಮ 100 ಪರ್ಸೆಂಟ್ ಅನ್ನು ನೀಡುತ್ತಾರೆ ಮತ್ತು ಅವರು ಮೈದಾನದಲ್ಲಿದ್ದಾಗ ಸಮರ್ಪಣಾ ಭಾವದಿಂದ ಆಡುತ್ತಾರೆ. ಆದರೆ (ನಗುತ್ತಾ) ಅವರು ಮೈದಾನದಲ್ಲಿದ್ದರೆ ನಾನು ಎಂದಿಗೂ ಫೇರ್ ಪ್ಲೇ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News