T20 World Cup: ಪಾಕಿಸ್ತಾನ ಅಲ್ಲ, ಆಸ್ಟ್ರೇಲಿಯಾವು ಅಲ್ಲ, ಟಿ 20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಬೆದರಿಕೆಯಾಗಲಿದೆ ಈ ತಂಡ

T20 World Cup: ಟಿ 20 ವಿಶ್ವಕಪ್‌ನಲ್ಲಿ, ಟೀಮ್ ಇಂಡಿಯಾ ಈ ತಂಡದ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಈ ತಂಡವು ದೊಡ್ಡ ತಂಡಗಳನ್ನು ಸೋಲಿಸಿ ಪಂದ್ಯಾವಳಿಯಿಂದ ಹೊರಹಾಕುವಲ್ಲಿ ನಿಪುಣವಾಗಿದೆ.  

Written by - Yashaswini V | Last Updated : Oct 4, 2021, 01:40 PM IST
  • ಬಹುನಿರೀಕ್ಷಿತ ಟಿ 20 ವಿಶ್ವಕಪ್ 2021 ಯುಎಇಯಲ್ಲಿ ಅಕ್ಟೋಬರ್ 17 ರಿಂದ ಆರಂಭವಾಗಲಿದೆ
  • ಒಂದು ತಂಡ ಅತ್ಯಂತ ಅಪಾಯಕಾರಿ
  • ಈ ತಂಡವನ್ನು ಕ್ರಿಕೆಟ್‌ನ ದೊಡ್ಡ ತಂಡಗಳಲ್ಲಿ ಒಂದು ಎಂದು ಪರಿಗಣಿಸಲಾಗಿಲ್ಲ, ಆದರೆ ಈ ತಂಡವು ಅನೇಕ ಸಂದರ್ಭಗಳಲ್ಲಿ ವಿಶ್ವದ ಅತ್ಯುತ್ತಮ ತಂಡಗಳ ಕಪ್ ಗೆಲ್ಲುವ ಕನಸನ್ನು ಭಗ್ನಗೊಳಿಸಿದೆ
T20 World Cup: ಪಾಕಿಸ್ತಾನ ಅಲ್ಲ, ಆಸ್ಟ್ರೇಲಿಯಾವು ಅಲ್ಲ, ಟಿ 20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಬೆದರಿಕೆಯಾಗಲಿದೆ ಈ ತಂಡ title=
T20 World Cup

ನವದೆಹಲಿ: ಬಹುನಿರೀಕ್ಷಿತ ಟಿ 20 ವಿಶ್ವಕಪ್ 2021 ಯುಎಇಯಲ್ಲಿ ಅಕ್ಟೋಬರ್ 17 ರಿಂದ ಆರಂಭವಾಗಲಿದೆ. ಈ ಪಂದ್ಯಾವಳಿಯು ಈ ವರ್ಷ ಭಾರತದಲ್ಲಿ ನಡೆಯಬೇಕಿತ್ತು, ಆದರೆ ಕೊರೊನಾವೈರಸ್‌ನಿಂದಾಗಿ ಅದನ್ನು ಯುಎಇಗೆ ವರ್ಗಾಯಿಸಲಾಯಿತು. ಈ ವರ್ಷ ಟಿ 20 ವಿಶ್ವಕಪ್ (T20 World Cup) ಗೆಲ್ಲಲು ಭಾರತವನ್ನು ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ, ಆದರೆ ಈ ಪಂದ್ಯಾವಳಿಯಲ್ಲಿ 'ದೈತ್ಯ' ಎಂದು ಸಾಬೀತುಪಡಿಸುವ ತಂಡವಿದೆ. ಈ ತಂಡವು ದೊಡ್ಡ ದೊಡ್ಡ ಬಲಶಾಲಿ ತಂಡಗಳನ್ನು ಸೋಲಿಸಿ ಪಂದ್ಯಾವಳಿಯಿಂದ ಹೊರಹಾಕುವಲ್ಲಿ ನಿಪುಣತೆ ಹೊಂದಿದೆ.

ಈ ತಂಡವು ಟಿ 20 ವಿಶ್ವಕಪ್‌ನ 'ಜೈಂಟ್ ಕಿಲ್ಲರ್' ಎಂದು ಊಹಿಸಲಾಗಿದೆ;
ಟಿ 20 ವಿಶ್ವಕಪ್‌ನಲ್ಲಿ, ಟೀಮ್ ಇಂಡಿಯಾ (Team India) ಈ ತಂಡದ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. 2016 ರ ಟಿ 20 ವಿಶ್ವಕಪ್‌ನಲ್ಲಿ (T20 World Cup) ಕೂಡ ಕೊನೆಯ ಬಾರಿಗೆ ಟೀಂ ಇಂಡಿಯಾ ಇದರ ಹೊಡೆತದಿಂದ ಕೂದಲೆಳೆಯಲ್ಲಿ ಪಾರಾಗಿದೆ. ಇದು ಬೇರಾವ ತಂಡವೂ ಅಲ್ಲ ಬಾಂಗ್ಲಾದೇಶ ತಂಡ. ಬಾಂಗ್ಲಾದೇಶ ತಂಡವು ದೊಡ್ಡ ದೊಡ್ಡ ತಂಡಗಳನ್ನು ಧೂಳೀಪಟ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬಾಂಗ್ಲಾದೇಶವು ಪ್ರತಿಯೊಂದು ವಿಶ್ವಕಪ್‌ನಲ್ಲೂ ಅನೇಕ ದೊಡ್ಡ ತಂಡಗಳ ಕನಸನ್ನು ಮುರಿದಿದೆ.

ಗಮನಾರ್ಹವಾಗಿ, 2007 ರ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಬಾಂಗ್ಲಾದೇಶ ಭಾರತವನ್ನು ಪಂದ್ಯಾವಳಿಯಿಂದ ಹೊರಹಾಕಿತು, ಇದರಿಂದಾಗಿ ವೀರೇಂದ್ರ ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್,  ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರು ನಿರಾಶೆಗೊಂಡರು. 2016 ರ ಟಿ 20 ವಿಶ್ವಕಪ್‌ನಲ್ಲಿ ಕೂಡ ಬಾಂಗ್ಲಾದೇಶವು ಟೀಮ್ ಇಂಡಿಯಾವನ್ನು  (Team India) ಪಂದ್ಯಾವಳಿಯಿಂದ ಹೊರಹಾಕಿತು. ಆದರೆ ಎಂ.ಎಸ್. ಧೋನಿಯ (MS Dhoni) ಐತಿಹಾಸಿಕ ರನ್ ಔಟ್ ಭಾರತವನ್ನು ಉಳಿಸಿತು. ಆ ಪಂದ್ಯವನ್ನು ಭಾರತ 1 ರನ್ ಜಯಿಸುವ ಮೂಲಕ ಪಂದ್ಯಾವಳಿಯಲ್ಲಿ ತಮ್ಮ ಭರವಸೆಯನ್ನು ಜೀವಂತವಾಗಿರಿಸಿತು.  

ಇದನ್ನೂ ಓದಿ- IPL 2021: ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ ಬೆಂಗಳೂರಿನ ವಿರಾಟ್ ಬಳಗ

ಫಾರ್ಮ್‌ನಲ್ಲಿ ಬಾಂಗ್ಲಾದೇಶ ತಂಡ:
ಬಾಂಗ್ಲಾದೇಶವನ್ನು (Bangladesh) ಕ್ರಿಕೆಟ್‌ನ ದೊಡ್ಡ ತಂಡಗಳಲ್ಲಿ ಒಂದು ಎಂದು ಪರಿಗಣಿಸಲಾಗಿಲ್ಲ, ಆದರೆ ಈ ತಂಡವು ಅನೇಕ ಸಂದರ್ಭಗಳಲ್ಲಿ ವಿಶ್ವದ ಅತ್ಯುತ್ತಮ ತಂಡಗಳ ಕಪ್ ಗೆಲ್ಲುವ ಕನಸನ್ನು ಭಗ್ನಗೊಳಿಸಿದೆ. ಇತ್ತೀಚೆಗೆ ಬಾಂಗ್ಲಾದೇಶ 5 ಟಿ 20 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು 4-1 ಅಂತರದಿಂದ ಸೋಲಿಸಿತು. ನಂತರ ಐದು ಪಂದ್ಯಗಳ ಟಿ 20 ಐ ಸರಣಿಯಲ್ಲಿ ಬಾಂಗ್ಲಾದೇಶ 3-2 ಅಂತರದಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿತು. 

ಬಾಂಗ್ಲಾದೇಶ ಈಗಾಗಲೇ ತನ್ನ ಮನೋಭಾವವನ್ನು ಸ್ಪಷ್ಟಪಡಿಸಿದೆ:
ಬಾಂಗ್ಲಾದೇಶದ ಮಾಜಿ ನಾಯಕ ಮತ್ತು ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ತಮ್ಮ ತಂಡವು ಟಿ 20 ವಿಶ್ವಕಪ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಕೀಬ್ ಅಲ್ ಹಸನ್, ಟಿ 20 ವಿಶ್ವಕಪ್‌ಗೆ ತಯಾರಿ ನಡೆಸಲು ಬಾಂಗ್ಲಾದೇಶಕ್ಕೆ ಸಾಕಷ್ಟು ಸಮಯವಿದೆ ಮತ್ತು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಅನ್ನು ಸರಣಿಯಲ್ಲಿ ಸೋಲಿಸಿದ ನಂತರ ಅವರ ಮನೋಬಲವೂ ಹೆಚ್ಚಾಗಿದೆ ಎಂದು ಹೇಳಿದರು.

ಅಕ್ಟೋಬರ್ 17 ರಿಂದ ಟಿ 20 ವಿಶ್ವಕಪ್ ಆರಂಭ:
ಅಕ್ಟೋಬರ್ 17 ರಿಂದ ಯುಎಇಯಲ್ಲಿ (UAE)  ಐಸಿಸಿ ಟಿ 20 ವಿಶ್ವಕಪ್ (ICC T20 World Cup) ನಡೆಯಲಿದೆ. ಈ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಈ ಪಂದ್ಯಾವಳಿಯ ಅಂತಿಮ ಪಂದ್ಯ ನವೆಂಬರ್ 16 ರಂದು ನಡೆಯಲಿದೆ. ಆದರೂ ಬಿಸಿಸಿಐ ಇದನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ವಾಸ್ತವವಾಗಿ ಈ ಪಂದ್ಯಾವಳಿಯು ಐಪಿಎಲ್ ಫೈನಲ್‌ನ ಕೆಲವು ದಿನಗಳ ನಂತರ ಆರಂಭವಾಗುತ್ತದೆ. ಐಪಿಎಲ್ ಫೈನಲ್ ಅಕ್ಟೋಬರ್ 15 ರಂದು ನಡೆಯುವ ಸಾಧ್ಯತೆಯಿದೆ.

ಇದನ್ನೂ ಓದಿ- IPL 2021, DC vs CSK: ಇಂದು ಅಗ್ರಸ್ಥಾನಕ್ಕಾಗಿ ಮದಗಜಗಳ ಕಾದಾಟ..!

ಅಕ್ಟೋಬರ್ 24 ರಂದು ಮುಖಾಮುಖಿಯಾಗಲಿರುವ ಭಾರತ-ಪಾಕಿಸ್ತಾನ:
2021 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಅಕ್ಟೋಬರ್ 24 ರಂದು ಮುಖಾಮುಖಿಯಾಗಲಿವೆ. ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು (India-Pakistan) ಒಂದೇ ಗುಂಪಿನಲ್ಲಿ ಸೇರಿಸಲಾಗಿದೆ. ಟಿ 20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವಿನ ದಾಖಲೆ 5-0. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿರುವುದರಿಂದ ಮತ್ತೊಮ್ಮೆ ಉಭಯ ದೇಶಗಳ ನಡುವೆ ರೋಚಕ ಪಂದ್ಯ ಕಂಡುಬರುತ್ತದೆ. 2016 ರ ವಿಶ್ವಕಪ್ ಪಂದ್ಯದಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 5 ವಿಕೆಟ್ ಗೆ 118 ರನ್ ಗಳಿಸಿತು. ಉತ್ತರವಾಗಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಗುರಿ ಸಾಧಿಸಿತು.

ಈ ತಂಡಗಳನ್ನು ಭಾರತದ ಗುಂಪಿನಲ್ಲಿ ಸೇರಿಸಲಾಗಿದೆ:
ಪಂದ್ಯಾವಳಿಯ ಆರಂಭಿಕ ಸುತ್ತಿನಲ್ಲಿ, ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಗುಂಪು 1 ರಲ್ಲಿ ಸ್ಥಾನ ಪಡೆದಿವೆ. ಅದೇ ಸಮಯದಲ್ಲಿ, ಗುಂಪು 2 ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್ ಮತ್ತು ಅಫ್ಘಾನಿಸ್ತಾನ ತಂಡಗಳಿವೆ. ಇದಲ್ಲದೇ, ಎರಡೂ ಗುಂಪುಗಳಲ್ಲಿ ತಲಾ ಎರಡು ತಂಡಗಳು ಅರ್ಹತಾ ಸುತ್ತಿನ ಮೂಲಕ ಬರುತ್ತವೆ.

2021 ರ ಟಿ 20 ವಿಶ್ವಕಪ್‌ನ ಗುಂಪುಗಳು ಹೀಗಿವೆ:
ರೌಂಡ್ 1:

ಗ್ರೂಪ್ ಎ: ಶ್ರೀಲಂಕಾ, ಐರ್ಲೆಂಡ್, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ
ಗ್ರೂಪ್ ಬಿ: ಬಾಂಗ್ಲಾದೇಶ, ಸ್ಕಾಟ್ಲೆಂಡ್, ಪಪುವಾ ನ್ಯೂ ಗಯಾನಾ (ಪಿಎನ್ ಜಿ) ಮತ್ತು ಓಮನ್.

ಸೂಪರ್ -12:
ಗುಂಪು 1: ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, A1 ಮತ್ತು B2
ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಅಫ್ಘಾನಿಸ್ತಾನ, A2 ಮತ್ತು B1.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News