ಕ್ರಿಕೆಟ್ ಆಡುತ್ತಿದ್ದಂತೆ ಮಗಳ ಸಾವಿನ ಸುದ್ದಿ ಕೇಳಿದ ಏಷ್ಯಾದ ಶ್ರೇಷ್ಠ ಬ್ಯಾಟ್ಸ್ಮನ್! 13 ವರ್ಷಗಳ ವೃತ್ತಿಬದುಕಿಗೆ ನಿವೃತ್ತಿ ಘೋಷಣೆ

Saeed Anwar Life Story: ಸಯೀದ್ ಅನ್ವರ್ 6 ಸೆಪ್ಟೆಂಬರ್ 1968 ರಂದು ಪಾಕಿಸ್ತಾನದಲ್ಲಿ ಜನಿಸಿದರು. 1989 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು, ಸುಮಾರು 13 ವರ್ಷಗಳ ಕಾಲ ಏಕದಿನ ಕ್ರಿಕೆಟ್‌’ನಲ್ಲಿ ಸಂಚಲನ ಮೂಡಿಸಿದ್ದಾರೆ.

Written by - Bhavishya Shetty | Last Updated : Sep 6, 2023, 09:35 AM IST
    • ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್
    • ಇಂದು ಸಯೀದ್ ಅನ್ವರ್ ತಮ್ಮ 55 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ
    • 2001 ರ ಮುಲ್ತಾನ್ ಟೆಸ್ಟ್ ಈ ಆರಂಭಿಕ ಬ್ಯಾಟ್ಸ್‌ಮನ್‌’ಗೆ ಕೊನೆಯ ಟೆಸ್ಟ್ ಆಗಿತ್ತು.
ಕ್ರಿಕೆಟ್ ಆಡುತ್ತಿದ್ದಂತೆ ಮಗಳ ಸಾವಿನ ಸುದ್ದಿ ಕೇಳಿದ ಏಷ್ಯಾದ ಶ್ರೇಷ್ಠ ಬ್ಯಾಟ್ಸ್ಮನ್! 13 ವರ್ಷಗಳ ವೃತ್ತಿಬದುಕಿಗೆ ನಿವೃತ್ತಿ ಘೋಷಣೆ title=
Saeed Anwar

Saeed Anwar Life Story: ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್ ಅವರು ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರು. ಇಂದು ಸಯೀದ್ ಅನ್ವರ್ ತಮ್ಮ 55 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1990 ರ ದಶಕದಲ್ಲಿ ಏಷ್ಯಾದ ಅತ್ಯಂತ ಪ್ರಭಾವಶಾಲಿ ಆರಂಭಿಕ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲ್ಪಟ್ಟಿದ್ದ ಈ ಎಡಗೈ ಬ್ಯಾಟ್ಸ್‌ಮನ್ ತಮ್ಮ ವೃತ್ತಿಜೀವನದಲ್ಲಿ ಹಲವು ಸ್ಫೋಟಕ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 2001 ರ ಮುಲ್ತಾನ್ ಟೆಸ್ಟ್ ಈ ಆರಂಭಿಕ ಬ್ಯಾಟ್ಸ್‌ಮನ್‌’ಗೆ ಕೊನೆಯ ಟೆಸ್ಟ್ ಆಗಿತ್ತು.

ಇದನ್ನೂ ಓದಿ:‘ಇಂಡಿಯಾ’ ಹೆಸರು ಬದಲಾಯಿಸಲು ಸೂಚಿಸಿದ್ದೇ ಈ ಕ್ರಿಕೆಟಿಗನ ಮಡದಿ

ಸಯೀದ್ ಅನ್ವರ್ 6 ಸೆಪ್ಟೆಂಬರ್ 1968 ರಂದು ಪಾಕಿಸ್ತಾನದಲ್ಲಿ ಜನಿಸಿದರು. 1989 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು, ಸುಮಾರು 13 ವರ್ಷಗಳ ಕಾಲ ಏಕದಿನ ಕ್ರಿಕೆಟ್‌’ನಲ್ಲಿ ಸಂಚಲನ ಮೂಡಿಸಿದ್ದಾರೆ. ಆದರೆ 2001 ರಲ್ಲಿ, ಸಯೀದ್ ಅನ್ವರ್ ಅವರ ಮಗಳು ನಿಧನರಾದರು, ಅದೊಂದು ದುರ್ಘಟನೆ ಅವರ ಇಡೀ ವೃತ್ತಿ ಜೀವನವನ್ನೇ ನಾಶಪಡಿಸಿತು ಎನ್ನಬಹುದು.

ಆ ಸಮಯದಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನ ಪ್ರವಾಸದಲ್ಲಿತ್ತು. ಮುಲ್ತಾನ್‌’ನಲ್ಲಿ ಮೊದಲ ಪಂದ್ಯ ಆಗಸ್ಟ್ 29 ರಂದು ಪ್ರಾರಂಭವಾಗಿತ್ತು. ಈ ಪಂದ್ಯದಲ್ಲಿ ಅನ್ವರ್ ಮೊದಲ ಇನ್ನಿಂಗ್ಸ್‌’ನಲ್ಲಿ ಶತಕ ಬಾರಿಸಿದ್ದು, ಪಾಕಿಸ್ತಾನ ಇನಿಂಗ್ಸ್ ಮತ್ತು 264 ರನ್‌’ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ. ಈ ಟೆಸ್ಟ್ ಸಮಯದಲ್ಲಿ, ಅವರ ಮೂರೂವರೆ ವರ್ಷದ ಮಗಳು ಬಿಸ್ಮಾ ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಅನ್ವರ್ ಕಿವಿಗೆ ಬಿತ್ತು. ಈ ಘಟನೆಯಿಂದ ನೊಂದ ಅವರು  ತಕ್ಷಣವೇ ಲಾಹೋರ್‌’ಗೆ ಮರಳಿದರು. ಇದಾದ ನಂತರ ಅವರು ಮತ್ತೆ ಟೆಸ್ಟ್ ಪಂದ್ಯಗಳನ್ನು ಆಡಲೇ ಇಲ್ಲ.

2003 ರಲ್ಲಿ ನಿವೃತ್ತಿ ಘೋಷಣೆ:

ಸಯೀದ್ ಅನ್ವರ್ ಅವರ ಮಗಳು ಬಿಸ್ಮಾ ಕೇವಲ ಮೂರೂವರೆದಲ್ಲೇ ಕೊನೆಯುಸಿರೆಳೆದಿದ್ದರು. ಈ ಘಟನೆಯಿಂದ ಅನ್ವರ್ ತುಂಬಾ ನೊಂದಿದ್ದರು. ಈ ಬಳಿಕ ಧರ್ಮದ ಕಡೆಗೆ ಒಲವು ತೋರಿದ ಅವರು, ಇಸ್ಲಾಂ ಧರ್ಮ ಪ್ರಚಾರ ಕಾರ್ಯ ಮಾಡಲು ಪ್ರಾರಂಭಿಸಿದರು. ಮಗಳ ಮರಣದ ನಂತರ ಕ್ರಿಕೆಟ್’ನಲ್ಲಿ ಮುಂದುವರೆದರೂ ಸಹ ODI ತಂಡದಲ್ಲಿ ಸ್ಥಿರತೆ ಕಾಣಲು ಸಾಧ್ಯವಾಗಲಿಲ್ಲ. ಸೆಂಚುರಿಯನ್ ಮೈದಾನದಲ್ಲಿ 2003 ರ ಐಸಿಸಿ ವಿಶ್ವಕಪ್‌’ನಲ್ಲಿ ಭಾರತದ ವಿರುದ್ಧ 101 ರನ್‌’ಗಳ ಇನ್ನಿಂಗ್ಸ್ ಆಡಿದ್ದ ಅವರು, ತಮ್ಮ ಶತಕವನ್ನು ದಿವಂಗತ ಪುತ್ರಿಗೆ ಅರ್ಪಿಸಿದರು. ಇದಾದ ಬಳಿಕ ತಂಡದ ನಿರ್ಲಕ್ಷ್ಯಕ್ಕೆ ತುತ್ತಾದ ಅವರು ಆಗಸ್ಟ್ 2003 ರಲ್ಲಿ ಕ್ರಿಕೆಟ್‌’ನಿಂದ ನಿವೃತ್ತರಾಗಲು ನಿರ್ಧರಿಸಿದರು.

ಭಾರತ ತಂಡದ ವಿರುದ್ಧ ಐತಿಹಾಸಿಕ ಇನ್ನಿಂಗ್ಸ್:

ಮೇ 21, 1997 ರಂದು ಸಯೀದ್ ಅನ್ವರ್ ಅವರು ಭಾರತದ ವಿರುದ್ಧ 194 ರನ್‌’ಗಳ ಐತಿಹಾಸಿಕ ಇನ್ನಿಂಗ್ಸ್ ಅನ್ನು ಆಡಿದ್ದರು. ಇದಾದ ಬಳಿಕ 13 ವರ್ಷಗಳ ಕಾಲ ಅನ್ವರ್ ಅವರ ಈ ದಾಖಲೆಯನ್ನು ಯಾವುದೇ ಬ್ಯಾಟ್ಸ್‌ಮನ್’ನಿಂದ ಮುರಿಯಲು ಸಾಧ್ಯವಾಗಲಿಲ್ಲ. ಸಯೀದ್ ಅನ್ವರ್ ಔಟಾಗದೇ ಇದ್ದಿದ್ದರೆ ಏಕದಿನ ಕ್ರಿಕೆಟ್‌;ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳುತ್ತಿದ್ದರು. ಭಾರತದ ವಿರುದ್ಧ ಸಯೀದ್ ಅನ್ವರ್ 146 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 22 ಬೌಂಡರಿಗಳ ನೆರವಿನಿಂದ 194 ರನ್ ಗಳಿಸಿದ್ದರು. ಇನ್ನು ಈ ಪಂದ್ಯದಲ್ಲಿ ಸಯೀದ್ ಅನ್ವರ್ ಅವರನ್ನು ಔಟ್ ಮಾಡಿದ್ದು ಸಚಿನ್ ತೆಂಡೂಲ್ಕರ್.

ಇದನ್ನೂ ಓದಿ: ವಿಶ್ವಕಪ್ ತಂಡ ಪ್ರಕಟವಾಗುತ್ತಿದ್ದಂತೆ ನಿವೃತ್ತಿ ಘೋಷಿಸಿದ ಕೆಎಲ್ ರಾಹುಲ್ ಫೇವರೇಟ್ ಸಹ ಆಟಗಾರ!

ಸಯೀದ್ ಅನ್ವರ್ ಅಂತರಾಷ್ಟ್ರೀಯ ವೃತ್ತಿಜೀವನ:

ಸಯೀದ್ ಅನ್ವರ್ ಪಾಕಿಸ್ತಾನದ ಪರ 55 ಟೆಸ್ಟ್‌’ಗಳಲ್ಲಿ 45.52 ಸರಾಸರಿಯಲ್ಲಿ 4052 ರನ್ ಗಳಿಸಿದ್ದಾರೆ, ಇದರಲ್ಲಿ 11 ಶತಕಗಳು ಮತ್ತು 25 ಅರ್ಧ ಶತಕಗಳು ಸೇರಿವೆ. ಇನ್ನು 247 ODIಗಳಲ್ಲಿ 39.21 ಸರಾಸರಿಯಲ್ಲಿ 8824 ರನ್ ಗಳಿಸಿದ್ದಾರೆ. ಇದರಲ್ಲಿ 20 ಶತಕ ಮತ್ತು 43 ಅರ್ಧ ಶತಕಗಳು ಒಳಗೊಂಡಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News