ಟೀಂ ಇಂಡಿಯಾದ ಅದ್ಭುತ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಏಷ್ಯಾಕಪ್-2022ರ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಬಿರುಸಿನ ಬ್ಯಾಟಿಂಗ್ ಮಾಡಿದ್ದರು. ಸೂರ್ಯಕುಮಾರ್ ದುಬೈನಲ್ಲಿ 26 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ ಬೌಂಡರಿಗಳ ನೆರವಿನಿಂದ ಅಜೇಯ 68 ರನ್ ಗಳಿಸಿದ್ದಾರೆ. ಪಂದ್ಯ ಶ್ರೇಷ್ಠನಾಗಿ ಆಯ್ಕೆಯಾದ ಸೂರ್ಯಕುಮಾರ್ ಅವರಿಗೆ ಪಾಕಿಸ್ತಾನದ ಪತ್ರಕರ್ತರೊಬ್ಬರು ಇಂಥದ್ದೊಂದು ಪ್ರಶ್ನೆ ಕೇಳಿದ್ದು, ಅದನ್ನು ಕೇಳಿ ನಗು ತಡೆಯಲಾಗದೆ ಬಿದ್ದು ಬಿದ್ದು ನಕ್ಕಿದ್ದಾರೆ. ಇದೀಗ ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿದೆ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಏಷ್ಯಾಕಪ್‌ನಲ್ಲಿ ಆಡಿದ ಎರಡೂ ಆರಂಭಿಕ ಪಂದ್ಯಗಳನ್ನು ಗೆಲ್ಲುವ ಮೂಲಕ ಸೂಪರ್-4 ಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ: ಮತ್ತೆ ಕ್ರಿಕೆಟ್ ಗೆ ಎಂಟ್ರಿ ಕೊಟ್ಟ ಸಚಿನ್ ತೆಂಡೂಲ್ಕರ್..! ಯಾವ ತಂಡಕ್ಕೆ ಗೊತ್ತಾ?
ಸೂರ್ಯಕುಮಾರ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿ ಸಾಕಷ್ಟು ರನ್ ಗಳಿಸಿದ್ದರು. ಅವರು ಮೂರನೇ ವಿಕೆಟ್‌ಗೆ 98 ರನ್‌ಗಳ ಅಜೇಯ ಜೊತೆಯಾಟವಾಡಿದ್ದರು. ವಿರಾಟ್ 44 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 59 ರನ್ ಗಳಿಸಿದರು. ಸೂರ್ಯಕುಮಾರ್ 261ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
Suryakumar Yadav replies to a question on KL Rahul's inclusion in the team. pic.twitter.com/1pVdUvuh0e
— Mufaddal Vohra (@mufaddal_vohra) September 1, 2022
ಇನ್ನು ಭಾರತ 40 ರನ್ ಗಳ ಜಯ ಸಾಧಿಸಿದ ಬಳಿಕ ಪಾಕಿಸ್ತಾನದ ಪತ್ರಕರ್ತರೊಬ್ಬರು ಸೂರ್ಯಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆ ಕೇಳಿದ ಸೂರ್ಯ ಕುಮಾರ್ ಗೆ ನಗು ತಡೆಯಲಾಗಿಲ್ಲ. 'ರೋಹಿತ್ ಅವರು ಇಡೀ ಏಷ್ಯಾಕಪ್‌ನಲ್ಲಿ ನೀವು ಪ್ರಯೋಗ ಮಾಡುತ್ತಿದ್ದೀರಿ ಎಂದು ಹೇಳಿದ್ದಾರೆ. ನೀವು ಅವರ ಜೊತೆ ಓಪನರ್ ಆಗಿ ಕಣಕ್ಕಿಳಿಯುತ್ತೀರಾ? ನಿಮ್ಮ ಆಟವು ಅದೇ ಪ್ರಯೋಗದ ಭಾಗವಾಗುವುದೇ?” ಎಂದು ಪ್ರಶ್ನಿಸಿದ್ದಾರೆ
ಇದನ್ನು ಕೇಳಿದ ಸೂರ್ಯಕುಮಾರ್‌ಗೆ ನಗು ತಡೆಯಲಾಗಲಿಲ್ಲ. ಆಗ ಅವರು, “ಹಾಗಾದರೆ ಕೆಎಲ್ ಭಾಯ್ ಗೆ ಅವಕಾಶ ನೀಡಬಾರದು ಎಂದು ಹೇಳುತ್ತಿದ್ದೀರಾ? ಅವರು ಕಮ್ ಬ್ಯಾಕ್ ಮಾಡ್ತಾಎಡ. ಅವರಿಗೆ ಸ್ವಲ್ಪ ಸಮಯ ಬೇಕು. ನಾನು ಯಾವುದೇ ಸಂಖ್ಯೆಯಲ್ಲಿ ಬ್ಯಾಟ್ ಮಾಡಲು ಸಿದ್ಧ ಎಂದು ಹೇಳಿದ್ದರು. ನಾನು ಯಾವುದೇ ಸಂಖ್ಯೆಯಲ್ಲಿ ಬ್ಯಾಟಿಂಗ್ ಮಾಡುತ್ತೇನೆ, ನನಗೆ ಅವಕಾಶ ನೀಡಿ ಎಂದು ಕೋಚ್ ಕೂಡ ನಾಯಕನಿಗೆ ಹೇಳಿದ್ದಾರೆ. ಹೀಗೆಯೇ ಮುಂದುವರಿಯುತ್ತದೆ. ನಾವು ಬಹಳಷ್ಟು ವಿಷಯಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಹೊಸತನವನ್ನು ಬಯಸುತ್ತೇವೆ ಮತ್ತು ಅಭ್ಯಾಸದ ಸಮಯದಲ್ಲಿ ಅವುಗಳನ್ನು ಪ್ರಯತ್ನಿಸುವ ಬದಲು ನೇರ ಪಂದ್ಯದಲ್ಲಿ ಪ್ರಯತ್ನಿಸುವುದು ಉತ್ತಮ” ಎಂದು ಉತ್ತರಿಸಿದ್ದಾರೆ.
ಸೆಪ್ಟೆಂಬರ್ 14ಕ್ಕೆ 32ನೇ ವರ್ಷಕ್ಕೆ ಕಾಲಿಡಲಿರುವ ಸೂರ್ಯಕುಮಾರ್ ಭಾರತ ಪರ ಇದುವರೆಗೆ 38 ಪಂದ್ಯಗಳನ್ನು ಆಡಿದ್ದಾರೆ. 13 ಏಕದಿನ ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ನೆರವಿನಿಂದ 340 ರನ್ ಗಳಿಸಿದ್ದಾರೆ. ಇದಲ್ಲದೇ 1 ಶತಕ ಹಾಗೂ 6 ಅರ್ಧ ಶತಕಗಳ ನೆರವಿನಿಂದ ಒಟ್ಟು 758 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5326 ರನ್ ಗಳಿಸಿದ್ದಾರೆ. ಅವರು ಆಫ್-ಸ್ಪಿನ್ ಬೌಲ್ ಮಾಡಬಲ್ಲರು ಮತ್ತು ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 24 ವಿಕೆಟ್ಗಳನ್ನು ಸಹ ಪಡೆದಿದ್ದಾರೆ.
ಇದನ್ನೂ ಓದಿ: ಈ ಮಾರಕ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾಕ್ಕೆ ಟಿ20 ವಿಶ್ವಕಪ್ ನೀಡಲಿದ್ದಾರೆ- ರಿಕಿ ಪಾಂಟಿಂಗ್
ಏಷ್ಯಾಕಪ್‌ನಲ್ಲಿ ಭಾರತ ತನ್ನ ಎರಡೂ ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಪಡೆದಿದ್ದು, ತಂಡವು ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಹಾಂಕಾಂಗ್ ಗುಂಪಿನಲ್ಲಿರುವ ಇತರ 2 ತಂಡಗಳು. ಭಾರತ ಈ ಎರಡೂ ತಂಡಗಳನ್ನು ಸೋಲಿಸಿದೆ. ಇದೀಗ ಪಾಕಿಸ್ತಾನ ಮತ್ತು ಹಾಂಕಾಂಗ್ ಮುಖಾಮುಖಿಯಾಗಲಿದ್ದು, ಈ ಪಂದ್ಯವನ್ನು ಯಾವ ತಂಡ ಗೆಲ್ಲುತ್ತದೆಯೋ ಆ ತಂಡವು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಲಿದೆ. ನಂತರ ಸೂಪರ್-4 ರಲ್ಲಿ ಭಾರತ ತಂಡ ಸೆಪ್ಟೆಂಬರ್ 4, ಭಾನುವಾರ ಅದೇ ತಂಡದೊಂದಿಗೆ ಸೆಣಸಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.