“ನೀನೊಬ್ಬ ಸ್ವಾರ್ಥಿ, ಧೋನಿ ನೋಡಿ ಕಲಿ!” ಸಾರ್ವಜನಿಕ ಸ್ಥಳದಲ್ಲೇ ನಿಂದಿಸಲ್ಪಟ್ಟ ಟೀಂ ಇಂಡಿಯಾ ಆಟಗಾರ

Hardik Pandya Troll: “ಹಾರ್ದಿಕ್ ಪಾಂಡ್ಯ ಸ್ವಾರ್ಥಿ” ಎಂದು ಹೇಳಲಾಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಅವರೊಂದಿಗಿನ ಹಳೆಯ ವಿಡಿಯೋವನ್ನು ವೈರಲ್ ಮಾಡುವ ಮೂಲಕ ಹಾರ್ದಿಕ್ ಅವರನ್ನು ಭಾರೀ ನಿಂದಿಸಲಾಗುತ್ತಿದೆ

Written by - Bhavishya Shetty | Last Updated : Aug 10, 2023, 07:34 AM IST
    • ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌’ಗಳ ಜಯ ಸಾಧಿಸಿದೆ.
    • ಮೂರನೇ ಟಿ 20 ನಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು.
    • ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಹಳೆಯ ವಿಡಿಯೋ ವೈರಲ್
“ನೀನೊಬ್ಬ ಸ್ವಾರ್ಥಿ, ಧೋನಿ ನೋಡಿ ಕಲಿ!” ಸಾರ್ವಜನಿಕ ಸ್ಥಳದಲ್ಲೇ ನಿಂದಿಸಲ್ಪಟ್ಟ ಟೀಂ ಇಂಡಿಯಾ ಆಟಗಾರ title=
Hardik Pandya

Hardik Pandya Troll: ವೆಸ್ಟ್ ಇಂಡೀಸ್ ವಿರುದ್ಧ ಸತತ ಎರಡು T20I ಸೋಲು ಕಂಡಿದ್ದ ಟೀಂ ಇಂಡಿಯಾ ಅಂತಿಮವಾಗಿ ಗೆಲುವಿನ ರುಚಿ ಸವಿದಿದೆ. ಐದು ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌’ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತ ತಂಡದ ಪರ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಕೊನೆಯಲ್ಲಿ, ನಾಯಕ ಹಾರ್ದಿಕ್ ಪಾಂಡ್ಯ ಜೊತೆಯಾಗಿ ಕಣದಲ್ಲಿದ್ದರು. ಈ ಸಂದರ್ಭದಲ್ಲಿ 15 ಎಸೆತಗಳಲ್ಲಿ 20 ರನ್ ಗಳಿಸಿ ಅಜೇಯರಾಗಿ ಉಳಿದರು. ಹಾರ್ದಿಕ್ ಬ್ಯಾಟ್‌’ನಿಂದ ತಂಡದ ಗೆಲುವಿನ ಶಾಟ್ ಹೊರಬಿತ್ತು. ಮೂರನೇ ಟಿ 20 ನಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟರು. ಆದರೆ ಇದರ ಹೊರತಾಗಿಯೂ ಅವರನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ.

ಇದನ್ನೂ ಓದಿ:  ಏಷ್ಯನ್ ಗೇಮ್ಸ್’ನ ಒಂದೇ ಗುಂಪಿನಲ್ಲಿ ಭಾರತ-ಪಾಕಿಸ್ತಾನ! ಹೈವೋಲ್ಟೇಜ್ ಪಂದ್ಯಕ್ಕೆ ಡೇಟ್ ಫಿಕ್ಸ್

ಹಾರ್ದಿಕ್ ಪಾಂಡ್ಯ ಸ್ವಾರ್ಥಿ” ಎಂದು ಹೇಳಲಾಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಅವರೊಂದಿಗಿನ ಹಳೆಯ ವಿಡಿಯೋವನ್ನು ವೈರಲ್ ಮಾಡುವ ಮೂಲಕ ಹಾರ್ದಿಕ್ ಅವರನ್ನು ಭಾರೀ ನಿಂದಿಸಲಾಗುತ್ತಿದೆ.

ಘಟನೆ ಹಿನ್ನೆಲೆ ಏನು?

ಮೂರನೇ ಟಿ20 ಪಂದ್ಯದಲ್ಲಿ, ಆತಿಥೇಯ ವೆಸ್ಟ್ ಇಂಡೀಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿ ಭಾರತಕ್ಕೆ ಗೆಲ್ಲಲು 160 ರನ್‌ಗಳ ಗುರಿಯನ್ನು ನೀಡಿತು. ಎರಡು ಪಂದ್ಯಗಳನ್ನು ಸೋತ ಭಾರತ ಸರಣಿ ಕೈತಪ್ಪುವ ಭೀತಿಯಲ್ಲಿತ್ತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌’ಮನ್‌’ಗಳು ಮತ್ತೊಮ್ಮೆ ರನ್ ಮಾಡದೆ ಕಳಪೆ ಪ್ರದರ್ಶನ ತೋರಿದರು. ಇಂತಹ ಪರಿಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಒಟ್ಟಾಗಿ ಭಾರತದ ಇನ್ನಿಂಗ್ಸ್ ಅನ್ನು ನಿಭಾಯಿಸಿದರು.

ಒಂದೆಡೆ ಸೂರ್ಯಕುಮಾರ್ ಯಾದವ್ ವೇಗದ ರನ್ ಗಳಿಸುವುದರಲ್ಲಿ ನಿರತರಾಗಿದ್ದರೆ, ಮತ್ತೊಂದೆಡೆ ಕೇವಲ ಮೂರನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ತಿಲಕ್ ವರ್ಮಾ ಅವರಿಗೆ ತಿಳುವಳಿಕೆಯಿಂದ ಬೆಂಬಲ ನೀಡುತ್ತಿದ್ದರು. ಸೂರ್ಯಕುಮಾರ್ ಯಾದವ್ 84 ರನ್ ಗಳಿಸಿ ಔಟಾದರು. ಇದಾದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗೆ ಇಳಿದರು.

ಅದೇ ವೇಳೆ ತಿಲ್ಕರ್ ವರ್ಮಾ ಕೂಡ ಅರ್ಧಶತಕದ ಸಮೀಪ ತಲುಪಿದ್ದರು. ಭಾರತ ತಂಡ 160 ರನ್‌’ಗಳ ಗುರಿಯನ್ನು ಸುಲಭವಾಗಿ ತಲುಪುವಂತಿತ್ತು. ಹಾರ್ದಿಕ್ ಬಂದ ಕೂಡಲೆ ಆಕರ್ಷಕ ಹೊಡೆತಗಳನ್ನು ಸಿಡಿಸಿದರು. ಟೀಮ್ ಇಂಡಿಯಾ 17.4 ಓವರ್‌’ಗಳಲ್ಲಿ ಸ್ಕೋರ್ ಅನ್ನು ಸಮಗೊಳಿಸಿತು. ಆದರೆ ತಿಲಕ್ ವರ್ಮಾ 49 ರನ್ ಗಳಿಸಿ ನಾನ್ ಸ್ಟ್ರೈಕ್‌’ನಲ್ಲಿ ನಿಂತಿದ್ದರು.

ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಬೌಂಡರಿ ಅಥವಾ ಸಿಕ್ಸರ್ ಬಾರಿಸದೆ, ತಿಲಕ್ ವರ್ಮಾ ಅವರಿಗೆ ಅವಕಾಶ ನೀಡಬಹುದು ಎಂದು ಎಲ್ಲರು ಭಾವಿಸಿದ್ದರು, ಆದರೆ ಹಾರ್ದಿಕ್ ಹಾಗೆ ಮಾಡಲಿಲ್ಲ. 17ನೇ ಓವರ್ ನ ಐದನೇ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು. ಅದೇ ಸಮಯದಲ್ಲಿ 49 ರನ್ ಗಳಿಸಿದ ತಿಲಕ್ ಅರ್ಧ ಶತಕ ವಂಚಿತರಾದರು.

ಟೀಂ ಇಂಡಿಯಾ ಗೆದ್ದ ಸಂತಸ ತಿಲಕ್ ಮುಖದಲ್ಲಿತ್ತು, ಆದರೆ ಅವರ ಮನದಲ್ಲಿ ಅರ್ಧಶತಕ ಪೂರೈಸಬಹುದಿತ್ತು ಎಂಬ ಕೊರಗು ಕೂಡ ಕಂಡಿದ್ದು ಸುಳ್ಳಲ್ಲ. ಈ ಕಾರಣಕ್ಕಾಗಿಯೇ, ಹಾರ್ದಿಕ್ ಪಾಂಡ್ಯ ತನ್ನ ಜೂನಿಯರ್ ಆಟಗಾರರ ಮುಂದೆ ತುಂಬಾ ಸ್ವಾರ್ಥಿಯಾದರು ಎಂದು ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ.

ವಿರಾಟ್‌-ಧೋನಿ ವಿಡಿಯೋ ಹೋಲಿಕೆ:

ಹಾರ್ದಿಕ್ ಟ್ರೋಲ್ ಮಾಡುತ್ತಾ ನೆಟ್ಟಿಗರು ವಿಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ದೃಶ್ಯ 2014 ರ ಟಿ20 ವಿಶ್ವಕಪ್‌ ಸಂದರ್ಭದ್ದು. ಮಹೇಂದ್ರ ಸಿಂಗ್ ಧೋನಿ ವಿರಾಟ್ ಕೊಹ್ಲಿಗೆ ವಿನ್ನಿಂಗ್ ಶಾಟ್ ಹೊಡೆಯಲು ಅವಕಾಶ ನೀಡಿದ ದೃಶ್ಯವದು. ಆ ಸಮಯದಲ್ಲಿ ಧೋನಿ ತಂಡದ ನಾಯಕರಾಗಿದ್ದರು. ಈ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿತ್ತು. ಟೀಂ ಇಂಡಿಯಾಗೆ 7 ಎಸೆತಗಳಲ್ಲಿ ಕೇವಲ ಒಂದು ರನ್ ಬೇಕಾಗಿತ್ತು ಮತ್ತು ಧೋನಿ ಸ್ಟ್ರೈಕ್‌ನಲ್ಲಿದ್ದರು. ಆದರೆ ಕೊಹ್ಲಿ 43 ಎಸೆತಗಳಲ್ಲಿ 68 ರನ್ ಗಳಿಸಿ ಆಡುತ್ತಿದ್ದರು. 19ನೇ ಓವರ್‌’ನ ಕೊನೆಯ ಎಸೆತದಲ್ಲಿ ಧೋನಿ ರನ್ ತೆಗೆದುಕೊಳ್ಳಲಿಲ್ಲ, ಏಕೆಂದರೆ ಕೊಹ್ಲಿಯ ಬ್ಯಾಟ್‌’ನಿಂದ ವಿನ್ನಿಂಗ್ ಶಾಟ್ ಬರಬೇಕೆಂದು ಅವರ ಆಸೆಯಾಗಿತ್ತು. ಅಂತೆಯೇ , ಧೋನಿ 19ನೇ ಓವರ್‌’ನಲ್ಲಿ ರನ್ ಗಳಿಸದೇ ಕೊಹ್ಲಿಗೆ ಸ್ಟ್ರೈಕ್ ನೀಡಿದರು.

 

ಇದನ್ನೂ ಓದಿ: “ಸರಣಿ ಸೋಲಿನಿಂದ ಭಾರತವನ್ನು ಕಾಪಾಡಿದ್ದೇ ಈತ”: ಈ ಆಟಗಾರನ ಕೊಂಡಾಡಿದ ನಾಯಕ ಹಾರ್ದಿಕ್

ಈ ಮೂಲಕ ವಿರಾಟ್ ಕೊಹ್ಲಿ ವಿನ್ನಿಂಗ್ ಶಾಟ್ ಬಾರಿಸಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟರು. ಈ ವಿಷಯದಲ್ಲಿ ಧೋನಿಯನ್ನು ಇಂದಿಗೂ ಕೊಂಡಾಡಲಾಗುತ್ತಿದೆ. ತಮ್ಮ ಪರಂಪರೆಯನ್ನು ಕೊಹ್ಲಿಯ ಕೈಗೆಹೇಗೆ ಹಸ್ತಾಂತರಿಸುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

 

ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News