Sania Mirza-Shoaib Malik Divorce: ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ವಿಚ್ಛೇದನಕ್ಕೆ ನಿಜವಾದ ಕಾರಣ ಕೊನೆಗೂ ಬಯಲಾಯ್ತು!

Sania Mirza-Shoaib Malik Divorce: ಇದೀಗ ಪತಿ ಶೋಯೆಬ್ ಮಲಿಕ್ ಮಾಡಿರುವ ಮೋಸದಿಂದ ನೊಂದ ಸಾನಿಯಾ ಮಿರ್ಜಾ ವಿಚ್ಛೇದನದ ಹಂತಕ್ಕೆ ಹೋಗಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಮಾಡೆಲ್ ಜೊತೆಗಿನ ಮಲಿಕ್ ವಿವಾಹೇತರ ಸಂಬಂಧ ಸಾನಿಯಾಗೆ ನುಂಗಲಾರದ ತುಪ್ಪದಂತಾಗಿದೆ ಎಂಬುದು ಸುದ್ದಿಯ ಸಾರಾಂಶ.

Written by - Bhavishya Shetty | Last Updated : Nov 9, 2022, 10:14 AM IST
    • ಇತ್ತೀಚಿನ ದಿನಗಳಲ್ಲಿ ಸಾನಿಯಾ-ಮಲಿಕ್ ಜೀವನ ಸುಗಮವಾಗಿ ಸಾಗುತ್ತಿಲ್ಲ
    • ವದಂತಿಗಳು ಹರಿದಾಡುತ್ತಿದ್ದರೂ ಇಲ್ಲಿಯವರೆಗೂ ಅವರಿಬ್ಬರು ಪ್ರತಿಕ್ರಿಯೆ ನೀಡಿಲ್ಲ
    • ಮಲಿಕ್ ವಿವಾಹೇತರ ಸಂಬಂಧ ಸಾನಿಯಾಗೆ ನುಂಗಲಾರದ ತುಪ್ಪದಂತಾಗಿದೆ
Sania Mirza-Shoaib Malik Divorce: ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ವಿಚ್ಛೇದನಕ್ಕೆ ನಿಜವಾದ ಕಾರಣ ಕೊನೆಗೂ ಬಯಲಾಯ್ತು! title=
Sania Mirza

Sania Mirza-Shoaib Malik Divorce: ಸದ್ಯ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿವೆ. ಇತ್ತೀಚಿನ ದಿನಗಳಲ್ಲಿ ಸಾನಿಯಾ-ಮಲಿಕ್ ಜೀವನ ಸುಗಮವಾಗಿ ಸಾಗುತ್ತಿಲ್ಲ. ವಿಚ್ಛೇದನದ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿದ್ದರೂ ಇಲ್ಲಿಯವರೆಗೂ ಅವರಿಬ್ಬರು ಪ್ರತಿಕ್ರಿಯೆ ನೀಡದಿರುವುದು ಈ ಸುದ್ದಿಗೆ ಮತ್ತಷ್ಟು ಬಲ ನೀಡಿದೆ. ಮತ್ತೊಂದೆಡೆ, ಸಾಮಾಜಿಕ ಜಾಲತಾಣಗಳಲ್ಲಿ ಸಾನಿಯಾ ಅವರ ಪೋಸ್ಟ್‌ಗಳು ಕೂಡ ಈ ವೈರಲ್ ಆಗುತ್ತಿವೆ.

ಇದನ್ನೂ ಓದಿ: Sania Mirza-Shoaib Malik Divorce: ಸಾನಿಯಾ ಮಿರ್ಜಾ- ಶೋಯೆಬ್ ಮಲಿಕ್ ದಾಂಪತ್ಯದಲ್ಲಿ ಬಿರುಕು: ವಿಚ್ಚೇದನಕ್ಕೆ ಮುಂದಾದ ಜೋಡಿ!?

ಇದೀಗ ಪತಿ ಶೋಯೆಬ್ ಮಲಿಕ್ ಮಾಡಿರುವ ಮೋಸದಿಂದ ನೊಂದ ಸಾನಿಯಾ ಮಿರ್ಜಾ ವಿಚ್ಛೇದನದ ಹಂತಕ್ಕೆ ಹೋಗಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಮಾಡೆಲ್ ಜೊತೆಗಿನ ಮಲಿಕ್ ವಿವಾಹೇತರ ಸಂಬಂಧ ಸಾನಿಯಾಗೆ ನುಂಗಲಾರದ ತುಪ್ಪದಂತಾಗಿದೆ ಎಂಬುದು ಸುದ್ದಿಯ ಸಾರಾಂಶ. ಕೆಲವು ವರ್ಷಗಳ ಹಿಂದೆ ರೂಪದರ್ಶಿಯೊಂದಿಗೆ ಮಲಿಕ್ ಅವರ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಮಾಡೆಲ್ ಬಗ್ಗೆ ತಲೆ ಕೆಡಿಸಿಕೊಂಡಿರುವ ಮಲಿಕ್, ಸಾನಿಯಾ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.

ಶೋಯೆಬ್ ಮಲಿಕ್ ಅವರಲ್ಲಿನ ವ್ಯತ್ಯಾಸವನ್ನು ಗಮನಿಸಿದ ಸಾನಿಯಾ ಮಿರ್ಜಾ, ನಿಜವಾದ ವಿಷಯ ಏನೆಂದು ತಿಳಿದುಕೊಂಡಿದ್ದಾರೆ. ಇದರಿಂದ ನೊಂದುಕೊಂಡು ಹೊರಬಂದ ಸಾನಿಯಾ ತವರಿಗೆ ಬಂದಿದ್ದರು. ಹೆಂಡತಿ ದೂರದಲ್ಲಿದ್ದರೂ ಮಲಿಕ್ ಮಾತ್ರ ಆಕೆಯನ್ನು ಒಪ್ಪಿಸಲು ಪ್ರಯತ್ನಿಸಲಿಲ್ಲ. ಇದರಿಂದ ಕುಪಿತಗೊಂಡ ಸಾನಿಯಾ ತಮ್ಮ ಸಂಬಂಧವನ್ನು ಅಂತ್ಯಗೊಳಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಇವೆಲ್ಲದರ ಜೊತೆ ಮಲಿಕ್‌ನ ಮೋಸವನ್ನು ಸಹಿಸಲಾಗದೆ ಸಾನಿಯಾ ತನ್ನ ಮಗನ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು 'ಕಷ್ಟದ ಪರಿಸ್ಥಿತಿಯಿಂದ ನನ್ನನ್ನು ಹೊರತರುವ ಕ್ಷಣಗಳು' ಎಂದು ಹೇಳಿದ್ದಾರೆ. ತದನಂತರ ಮತ್ತೊಂದು ಪೋಸ್ಟ್, 'ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ' ಎಂದು ಬರೆದಿದ್ದಾರೆ.

ಇದನ್ನೂ ಓದಿ: IND vs ENG: ಇಂಡೋ-ಆಂಗ್ಲರ ಸೆಮಿಸ್ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮುಂದೇನು? ಯಾವ ತಂಡ ಫೈನಲ್ಗೆ ಹೋಗಲಿದೆ?

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಷ್ಟೆಲ್ಲಾ ಮಾತುಗಳು ನಡೆಯುತ್ತಿದ್ದರೂ ಸಹ ಈ ಕ್ರೀಡಾ ಜೋಡಿಗಳು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂಬುದು ಗಮನಾರ್ಹ. ಕನಿಷ್ಠ ಟ್ವೀಟ್ ಮಾಡಿದರೂ ವದಂತಿಗಳನ್ನು ಪರಿಶೀಲಿಸಲಿಲ್ಲ. ಆದರೆ, ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ತಿಳಿದಿಲ್ಲ. ಸಾನಿಯಾ ಮತ್ತು ಮಲಿಕ್ 2010 ರಲ್ಲಿ ವಿವಾಹವಾಗಿದ್ದು, ಅವರಿಗೆ ನಾಲ್ಕು ವರ್ಷ ವಯಸ್ಸಿನ ಮಗನಿದ್ದಾನೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News