ಕೊಹ್ಲಿ ಅಲ್ಲವೇ ಅಲ್ಲ... ಟೆಸ್ಟ್ ತಂಡಕ್ಕೆ ಉಪನಾಯಕನಾಗೋದು ಈ ಮೂವರು ಕಿಲಾಡಿಗಳಲ್ಲಿ ಒಬ್ಬರು..! ಯಾರವರು?

Team India Vice Captain: ಬಿಸಿಸಿಐನ ಆಯ್ಕೆ ಸಮಿತಿಯು ಕೆಎಲ್ ರಾಹುಲ್ ಅವರ ಟೆಸ್ಟ್ ಉಪನಾಯಕತ್ವವನ್ನು ಕಿತ್ತುಕೊಂಡಿತ್ತು. ಭಾರತ ಟೆಸ್ಟ್ ತಂಡದ ಉಪನಾಯಕತ್ವದಿಂದ ಕೆಎಲ್ ರಾಹುಲ್ ಅವರನ್ನು ತೆಗೆದುಹಾಕಿದ ನಂತರ, ಈಗ ಟೀಂ ಇಂಡಿಯಾದಲ್ಲಿ ಆ ಸ್ಥಾನ ತುಂಬಲು ಕೆಲ ಆಟಗಾರರಿದ್ದಾರೆ. ಆದರೆ ಪ್ರಬಲ ಮೂರು ಸ್ಪರ್ಧಿಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : May 11, 2023, 11:18 AM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ ಅಂತಿಮ ಪಂದ್ಯ
    • ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್‌ ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ
    • ಫೈನಲ್‌ ಟೀಮ್ ಇಂಡಿಯಾ ತಂಡಕ್ಕೆ ಇದೀಗ ಉಪನಾಯಕ ಬೇಕಾಗಿದ್ದಾರೆ
ಕೊಹ್ಲಿ ಅಲ್ಲವೇ ಅಲ್ಲ... ಟೆಸ್ಟ್ ತಂಡಕ್ಕೆ ಉಪನಾಯಕನಾಗೋದು ಈ ಮೂವರು ಕಿಲಾಡಿಗಳಲ್ಲಿ ಒಬ್ಬರು..! ಯಾರವರು? title=
Test Cricket

Team India Vice Captain: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ  ಅಂತಿಮ ಪಂದ್ಯ ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್‌ ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಟೀಮ್ ಇಂಡಿಯಾ ತಂಡಕ್ಕೆ ಇದೀಗ ಉಪನಾಯಕ ಬೇಕಾಗಿದ್ದಾರೆ. ಈ ಹಿಂದೆ ಬಿಸಿಸಿಐನ ಆಯ್ಕೆ ಸಮಿತಿಯು ಕೆಎಲ್ ರಾಹುಲ್ ಅವರ ಟೆಸ್ಟ್ ಉಪನಾಯಕತ್ವವನ್ನು ಕಿತ್ತುಕೊಂಡಿತ್ತು. ಭಾರತ ಟೆಸ್ಟ್ ತಂಡದ ಉಪನಾಯಕತ್ವದಿಂದ ಕೆಎಲ್ ರಾಹುಲ್ ಅವರನ್ನು ತೆಗೆದುಹಾಕಿದ ನಂತರ, ಈಗ ಟೀಂ ಇಂಡಿಯಾದಲ್ಲಿ ಆ ಸ್ಥಾನ ತುಂಬಲು ಕೆಲ ಆಟಗಾರರಿದ್ದಾರೆ. ಆದರೆ ಪ್ರಬಲ ಮೂರು ಸ್ಪರ್ಧಿಗಳ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: Viral News: ತಂಗಿ ಜೊತೆ ಹಾರ ಬದಲಾಯಿಸಿಕೊಂಡು ಅಕ್ಕನಿಗೆ ತಾಳಿ ಕಟ್ಟಿದ ಭೂಪ!

ಶುಭಮನ್ ಗಿಲ್: ಟೀಂ ಇಂಡಿಯಾದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ಭಾರತದ ಮುಂದಿನ ಟೆಸ್ಟ್ ಉಪನಾಯಕರನ್ನಾಗಿ ಮಾಡುವ ಸಾಧ್ಯತೆ ಇದೆ. 23ರ ಹರೆಯದ ಶುಭಮನ್ ಗಿಲ್ ಅವರು ಟೀಂ ಇಂಡಿಯಾದ ಆರಂಭಿಕ ಆಟಗಾರ ಕೂಡ ಹೌದು. ಒಂದು ವೇಳೆ ಶುಭಮನ್ ಗಿಲ್ ಉಪನಾಯಕನಾದರೆ ಕೆಎಲ್ ರಾಹುಲ್ ಟೆಸ್ಟ್ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಕೆಎಲ್ ರಾಹುಲ್ ಬದಲಿಗೆ ಶುಭಮನ್ ಗಿಲ್ ಅವರು ರೋಹಿತ್ ಶರ್ಮಾ ಜೊತೆಗೆ ಟೆಸ್ಟ್ ಓಪನರ್ ಪಾತ್ರವನ್ನು ನಿರ್ವಹಿಸಿ, ಉಪನಾಯಕತ್ವವನ್ನೂ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ 23ರ ಹರೆಯದ ಶುಭ್‌ಮನ್ ಗಿಲ್‌ ಗೆ ಆರಂಭಿಕ ಆಟದ ಜೊತೆಗೆ ಭಾರತದ ಟೆಸ್ಟ್ ಉಪನಾಯಕನ ಜವಾಬ್ದಾರಿಯನ್ನೂ ನೀಡಬಹುದು. ಶುಭಮನ್ ಗಿಲ್‌ಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉಜ್ವಲ ಭವಿಷ್ಯವಿದೆ.

ರಿಷಬ್ ಪಂತ್: ಟೆಸ್ಟ್ ಕ್ರಿಕೆಟ್‌ ನಲ್ಲಿ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ ಮನ್ ಆಗಿ ರಿಷಬ್ ಪಂತ್ ಅವರ ಅತ್ಯುತ್ತಮ ಪ್ರದರ್ಶನವನ್ನು ನೋಡಿದರೆ, ಅವರನ್ನು ಭಾರತದ ಮುಂದಿನ ಟೆಸ್ಟ್ ಉಪನಾಯಕನನ್ನಾಗಿ ಮಾಡುವ ಸಾಧ್ಯತೆಗಳಿವೆ. 25ರ ಹರೆಯದ ರಿಷಭ್ ಪಂತ್ ದೀರ್ಘಕಾಲದವರೆಗೆ ಭಾರತದ ಟೆಸ್ಟ್ ಉಪನಾಯಕನಾಗಬಹುದು. ಇನ್ನು ರಿಷಬ್ ಟಿ 20 ಮತ್ತು ಏಕದಿನ ಕ್ರಿಕೆಟ್‌ ನಲ್ಲಿ ಫ್ಲಾಪ್ ಬ್ಯಾಟ್ಸ್‌ಮನ್ ಆಗಿದ್ದರೂ ಸಹ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗಿದ್ದಾರೆ. ಆದರೆ ಈಗ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Swift, Nexon ಅಲ್ಲ… 34KM ಮೈಲೇಜ್ ನೀಡುವ, ದೇಶದಲ್ಲಿ ಅತೀ ಹೆಚ್ಚು ಮಾರಾಟವಾದ ಕಾರಿದು! ಬೆಲೆ ಜಸ್ಟ್ 5 ಲಕ್ಷ

ಶ್ರೇಯಸ್ ಅಯ್ಯರ್: ಶ್ರೇಯಸ್ ಅಯ್ಯರ್ ಭಾರತಕ್ಕಾಗಿ ಇದುವರೆಗೆ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 44.40 ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿಯಲ್ಲಿ 666 ರನ್ ಗಳಿಸಿದ್ದಾರೆ. ಇದುವರೆಗೆ ಆಡಿರುವ ಟೆಸ್ಟ್ ಕ್ರಿಕೆಟ್‌ನಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾದ ಪ್ರತಿಭಾನ್ವಿತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರು ಭಾರತದ ಮುಂದಿನ ಟೆಸ್ಟ್ ಉಪನಾಯಕರಾಗಲು ದೊಡ್ಡ ಸ್ಪರ್ಧಿಯಾಗಿದ್ದಾರೆ. 28 ವರ್ಷದ ಆಟಗಾರ ಇದೀಗ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಖಚಿತಪಡಿಸಿದ್ದಾರೆ. ಟೀಮ್ ಇಂಡಿಯಾ ಪರ ಟೆಸ್ಟ್‌ನಲ್ಲಿ 6 ನೇ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಿರುವ ಇವರು ಈ ಆಟದ ಸ್ವರೂಪದಲ್ಲಿ ದಾಖಲೆ ಕೂಡ ಅದ್ಭುತವಾಗಿದೆ. ಅಯ್ಯರ್ ಅವರನ್ನು ಭಾರತ ತಂಡದ ಮುಂದಿನ ಟೆಸ್ಟ್ ಉಪನಾಯಕನನ್ನಾಗಿ ಮಾಡಿದರೆ, ಅದರಿಂದ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News