ಸಾರಾಗೆ ಕೈಕೊಟ್ಟ ಶುಭ್ಮನ್ ಗಿಲ್ ಬೇರೊಬ್ಬಳ ಜೊತೆ ರೊಮ್ಯಾನ್ಸ್! Team India ಆಟಗಾರನ ವಿಡಿಯೋ ಲೀಕ್…

Shubman Gills Romantic Date With Niharika NM: ಇನ್ನು ಕ್ರಿಕೆಟ್ ವಿಚಾರ ಹೊರತುಪಡಿಸಿದರೆ, ಗಿಲ್ ಅವರ ಪ್ರೀತಿ-ಜೀವನ ಬಗ್ಗೆ ಭಾರೀ ಚರ್ಚೆಯಾಗುತ್ತಿರುತ್ತದೆ. ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಇದರ ಜೊತೆಗೆ ಗಿಲ್ ಬಾಲಿವುಡ್ ತಾರೆ ಸಾರಾ ಅಲಿ ಖಾನ್ ಜೊತೆಯೂ ಡೇಟಿಂಗ್‌ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು.

Written by - Bhavishya Shetty | Last Updated : Jun 6, 2023, 12:30 PM IST
    • ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕಳೆದೆರಡು ತಿಂಗಳುಗಳಿಂದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ
    • ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ
    • ಇದೀಗ ಗಿಲ್, ನಿಹಾರಿಕಾ ಎನ್‌ಎಂ ಅವರೊಂದಿಗೆ 'ರೊಮ್ಯಾಂಟಿಕ್' ಡೇಟ್‌ಗೆ ಹೋಗಿದ್ದಾರೆ
ಸಾರಾಗೆ ಕೈಕೊಟ್ಟ ಶುಭ್ಮನ್ ಗಿಲ್ ಬೇರೊಬ್ಬಳ ಜೊತೆ ರೊಮ್ಯಾನ್ಸ್! Team India ಆಟಗಾರನ ವಿಡಿಯೋ ಲೀಕ್… title=
Shubman Gills Romantic Date With Niharika NM

Shubman Gills Romantic Date With Niharika NM: ಟೀಮ್ ಇಂಡಿಯಾ ಮತ್ತು ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕಳೆದೆರಡು ತಿಂಗಳುಗಳಿಂದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಐಪಿಎಲ್ 2023 ರಲ್ಲಿ 890 ರನ್ ಗಳಿಸಿದ ಗಿಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರೆಂಜ್ ಕ್ಯಾಪ್‌ ಗೆದ್ದಿದ್ದರು.

ಇದನ್ನೂ ಓದಿ: ತಪ್ಪು ಮಾಡಿದ್ರೂ ಈ ರಾಶಿಯವರನ್ನ ಬಿಟ್ಟುಕೊಡಲ್ಲ ಶನಿದೇವ! ಅಷ್ಟೈಶ್ವರ್ಯ ಕರುಣಿಸಿ ಜೀವನ ಬೆಳಗುತ್ತಾನೆ ಸೂರ್ಯಪುತ್ರ!

ಇನ್ನು ಕ್ರಿಕೆಟ್ ವಿಚಾರ ಹೊರತುಪಡಿಸಿದರೆ, ಗಿಲ್ ಅವರ ಪ್ರೀತಿ-ಜೀವನ ಬಗ್ಗೆ ಭಾರೀ ಚರ್ಚೆಯಾಗುತ್ತಿರುತ್ತದೆ. ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಇದರ ಜೊತೆಗೆ ಗಿಲ್ ಬಾಲಿವುಡ್ ತಾರೆ ಸಾರಾ ಅಲಿ ಖಾನ್ ಜೊತೆಯೂ ಡೇಟಿಂಗ್‌ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಇಬ್ಬರೂ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದಾರೆ.

ಇದೀಗ ಗಿಲ್ ಸಾಮಾಜಿಕ ಮಾಧ್ಯಮದ ಪ್ರಭಾವಿ ವ್ಯಕ್ತಿ ನಿಹಾರಿಕಾ ಎನ್‌ಎಂ ಅವರೊಂದಿಗೆ 'ರೊಮ್ಯಾಂಟಿಕ್' ಡೇಟ್‌ಗೆ ಹೋಗಿದ್ದಾರೆ. ನಿಹಾರಿಕಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ ನಲ್ಲಿ ಅದರ ವೀಡಿಯೊವನ್ನು ಬಿಡುಗಡೆ ಮಾಡಿದ್ದು,  ‘Awkward first date ft. Shubman Gill’ ಎಂದು ಶೀರ್ಷಿಕೆ ನೀಡಿದ್ದಾರೆ.

 

 

ಕ್ಲಿಪ್‌ ನಲ್ಲಿ ಮೊದಲು ಗಿಲ್ ಮತ್ತು ನಿಹಾರಿಕಾ ಪರಸ್ಪರ ರೊಮ್ಯಾಂಟಿಕ್ ಆಗಿರುವಂತೆ ಕಾಣುತ್ತದೆ. ಆದರೆ ಬಳಿಕ ಆ ಡೇಟ್ ಲಯ ತಪ್ಪಿ, ತಮಾಷೆಯಾಗಿ ಬದಲಾಗುತ್ತದೆ.

ಇದನ್ನೂ ಓದಿ: ಆಸ್ಟ್ರೇಲಿಯಾಗೆ ಪಬ್ಲಿಕ್’ನಲ್ಲಿಯೇ ಸವಾಲೆಸೆದ Team Indiaದ ಈ ಬ್ಯಾಟ್ಸ್’ಮನ್!

ಬುಧವಾರ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಮುಂಚಿತವಾಗಿ ಗಿಲ್ ಪ್ರಸ್ತುತ ಲಂಡನ್‌ ನಲ್ಲಿದ್ದಾರೆ. ಅವರು ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್‌ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಮೂರು ಶತಕಗಳನ್ನು ಹೊಡೆದು 60 ಸರಾಸರಿಯಲ್ಲಿ 890 ರನ್‌ಗಳನ್ನು ಗಳಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News