India vs New Zealand 3rd ODI: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಜನವರಿ 24 ರಂದು ಇಂದೋರ್ ಮೈದಾನದಲ್ಲಿ ನಡೆಯಲಿದೆ. ಈಗಾಗಲೇ ಟೀಂ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲು ಬಯಸಿದೆ. ಇದಕ್ಕಾಗಿ ನಾಯಕ ರೋಹಿತ್ ಶರ್ಮಾ ಪ್ಲೇಯಿಂಗ್ 11ರಲ್ಲಿ ದೊಡ್ಡ ಬದಲಾವಣೆ ಮಾಡುವ ಸಾಧ್ಯತೆ ಇದೆ. ಇನ್ನು ಈ ಸ್ಟಾರ್ ಆಟಗಾರನೊಬ್ಬ ಪ್ಲೇಯಿಂಗ್ 11 ಗೆ ಸೇರ್ಪಡೆಯಾಗಬಹುದು. ಈ ಆಟಗಾರನ ಬಗ್ಗೆ ತಿಳಿಯೋಣ.
ಇದನ್ನೂ ಓದಿ: Team India: ದಾಖಲೆ ಬಾನೆತ್ತರವಿದ್ದರೂ ಟೀಂ ಇಂಡಿಯಾದಲ್ಲಿ ನಿರ್ಲಕ್ಷ್ಯ: ಈ ಆಟಗಾರನಿಗೆ ಎಂದು ಸಿಗುವುದು ಅವಕಾಶ?
ನ್ಯೂಜಿಲೆಂಡ್ ಸರಣಿಗೂ ಮುನ್ನ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರು. ಅವರ ಬದಲಿಗೆ ರಜತ್ ಪಾಟಿದಾರ್ ಭಾರತ ತಂಡದಲ್ಲಿ ಅವಕಾಶ ಪಡೆದರು. ಆದರೆ ನಾಯಕ ರೋಹಿತ್ ಶರ್ಮಾ ಈ ಆಟಗಾರನಿಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಇನ್ನೂ ಸ್ಥಾನ ನೀಡಿಲ್ಲ. ಅವರು ಸ್ಫೋಟಕ ಬ್ಯಾಟಿಂಗ್ನಲ್ಲಿ ಪರಿಣತಿ ಹೊಂದಿದ್ದಾರೆ. ಈಗಾಗಲೇ ಕಿವೀಸ್ ವಿರುದ್ಧದ ಸರಣಿಯನ್ನು ಟೀಂ ಇಂಡಿಯಾ ಗೆದ್ದುಕೊಂಡಿದ್ದು, ಏಕದಿನ ವಿಶ್ವಕಪ್ ಗೆ ಟೀಂ ಇಂಡಿಯಾ ಸಿದ್ಧತೆ ನಡೆಸಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆಗಳನ್ನು ಮಾಡಿ, ಅವರು ರಜತ್ ಪಾಟಿದಾರ್ಗೆ ಅವಕಾಶ ನೀಡಬಹುದು.
ಸ್ಫೋಟಕ ಬ್ಯಾಟಿಂಗ್ ತಜ್ಞ
ರಜತ್ ಪಾಟಿದಾರ್ ಕೆಲವು ಸಮಯದಿಂದ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಮೈದಾನಕ್ಕೆ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಹೊಡೆಯುವುದರಲ್ಲಿ ಹೆಸರುವಾಸಿಯಾಗಿದ್ದಾರೆ.
ಇದನ್ನೂ ಓದಿ: Athiya Shetty KL Rahul wedding: ರಾಹುಲ್ ಅಥಿಯಾಗೂ ಮೊದಲು ಸಪ್ತಪದಿ ತುಳಿದ ಕ್ರಿಕೆಟ್-ಬಾಲಿವುಡ್ ಸ್ಟಾರ್ ಜೋಡಿಗಳಿವರು
ಐಪಿಎಲ್ನಲ್ಲಿ ಶಕ್ತಿ ಪ್ರದರ್ಶನ
ಐಪಿಎಲ್ 2022 ರ ಋತುವಿನಲ್ಲಿ, ರಜತ್ ಪಾಟಿದಾರ್ RCB ತಂಡಕ್ಕಾಗಿ ಆಡುವಾಗ ಅನೇಕ ಪ್ರಮುಖ ಇನ್ನಿಂಗ್ಸ್ಗಳನ್ನು ಆಡಿದ್ದರು. ಅವರು ಐಪಿಎಲ್ 2022 ರ 8 ಪಂದ್ಯಗಳಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಒಳಗೊಂಡಂತೆ 333 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್ ರಣಜಿ ಟ್ರೋಫಿಯಲ್ಲಿ ಅದ್ಭುತಗಳನ್ನು ಮಾಡಿದ್ದಾರೆ. 50 ಪ್ರಥಮ ದರ್ಜೆ ಪಂದ್ಯಗಳಲ್ಲಿ 11 ಶತಕಗಳನ್ನು ಒಳಗೊಂಡಂತೆ 3668 ರನ್ ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ