AUS ಗೆಲುವಿನ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಟ್ವಿಸ್ಟ್ ! ಸೆಮಿ ಫೈನಲ್ ತಲುಪುವ ತಂಡಗಳು ಇವು

World Cup 2023 Points Table:ಇಷ್ಟು ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ರನ್ ಚೇಸ್ ಇನ್ನಿಂಗ್ಸ್ ಯಾವ ಬ್ಯಾಟ್ಸ್ ಮನ್ ನಿಂದಲೂ ಕಾಣ ಸಿಗಲಿಲ್ಲ. ಆಸ್ಟ್ರೇಲಿಯಾದ ಈ ಗೆಲುವಿನೊಂದಿಗೆ ಒಂದು ತಂಡ ವಿಶ್ವಕಪ್ ನಿಂದ ಹೊರಬಿದ್ದಿದೆ.

Written by - Ranjitha R K | Last Updated : Nov 8, 2023, 09:56 AM IST
  • ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದ ಮ್ಯಾಕ್ಸ್‌ವೆಲ್
  • ಜನಮಾನಸದಲ್ಲಿ ಉಳಿಯಲಿದೆ ದ್ವಿಶತಕ
  • ಟೂರ್ನಿಯಿಂದ ಈ ಟೀಂ ಔಟ್
AUS ಗೆಲುವಿನ ನಂತರ ಪಾಯಿಂಟ್ಸ್ ಟೇಬಲ್‌ನಲ್ಲಿ ಟ್ವಿಸ್ಟ್ ! ಸೆಮಿ ಫೈನಲ್ ತಲುಪುವ ತಂಡಗಳು ಇವು  title=

World Cup 2023 Points Table : ವಿಶ್ವಕಪ್ 2023ರ 39 ನೇ ಪಂದ್ಯವು ಈ ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯವಾಗಿತ್ತು. ಬಹುತೇಕ ಸೋಲಿನ ಅಂಚಿನಲ್ಲಿದ್ದ ಆಸ್ಟ್ರೇಲಿಯಾ ತಂಡವನ್ನು ಗ್ಲೆನ್ ಮ್ಯಾಕ್ಸ್ ವೆಲ್ ಗೆಲುವಿನ ದಡ ಸೇರಿಸಿದರು. ಮ್ಯಾಕ್ಸ್‌ವೆಲ್ ಅವರ 201 ರನ್‌ಗಳ ಅಜೇಯ ಇನ್ನಿಂಗ್ಸ್‌ನೊಂದಿಗೆ ಆಸ್ಟ್ರೇಲಿಯಾ ಅಫ್ಘಾನಿಸ್ತಾನವನ್ನು 3 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಯಾರೂ ಊಹಿಸಲೂ ಸಾಧ್ಯವಾಗದ ಪ್ರದರ್ಶನ ತೋರಿದರು. ಇಷ್ಟು ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ರನ್ ಚೇಸ್ ಇನ್ನಿಂಗ್ಸ್ ಯಾವ ಬ್ಯಾಟ್ಸ್ ಮನ್ ನಿಂದಲೂ ಕಾಣ ಸಿಗಲಿಲ್ಲ. ಆಸ್ಟ್ರೇಲಿಯಾದ ಈ ಗೆಲುವಿನೊಂದಿಗೆ ಒಂದು ತಂಡ ವಿಶ್ವಕಪ್ ನಿಂದ ಹೊರಬಿದ್ದಿದೆ.

ಜನಮಾನಸದಲ್ಲಿ ಉಳಿಯಲಿದೆ ದ್ವಿಶತಕ : 
ಅಫ್ಘಾನಿಸ್ತಾನ ನೀಡಿದ 292 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾದ 7 ಬ್ಯಾಟ್ಸ್‌ಮನ್‌ಗಳು 91 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದ್ದರು. ಇನ್ನು ಕೆಲವೇ ಓವರ್ ಗಳಲ್ಲಿ ಅಫ್ಘಾನಿಸ್ತಾನ ಪಂದ್ಯ ಗೆಲ್ಲಲಿದೆ ಎಂಬ ವಿಶ್ವಾಸ ಕ್ರೀಡಾಂಗಣದಲ್ಲಿ ಕುಳಿತಿದ್ದ ಅಭಿಮಾನಿಗಳಿಂದ ಹಿಡಿದು ಆಟಗಾರರವರೆಗೂ ಇತ್ತು. ಆದರೆ ಆಟದ ದಿಕ್ಕನ್ನೇ ಬದಲಾಯಿಸಿದ್ದು, ಮ್ಯಾಕ್ಸ್‌ವೆಲ್‌. ಒನ್ ಮ್ಯಾನ್ ಆರ್ಮಿಯಂತೆ, ಈ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಗೆಲುವಿನ ದಡ ಸೇರಿಸಿ, ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.  ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ 201 ರನ್ ಗಳಿಸಿ ಅಜೇಯ ದ್ವಿಶತಕ  ಬಾರಿಸಿದರು.

ಇದನ್ನೂ ಓದಿ : ಇದೇ ಮೊದಲ ಬಾರಿಗೆ ಇರ್ಫಾನ್ ಪಠಾಣ್ ಮಡದಿಯ ಫೇಸ್ ರಿವೀಲ್! ಏನ್ ಚಂದ ಗುರೂ…ಸೌಂದರ್ಯದ ಗಣಿಯೇ

ಟೂರ್ನಿಯಿಂದ ಈ ಟೀಂ ಔಟ್ : 
ಆಸ್ಟ್ರೇಲಿಯದ ಈ ಗೆಲುವಿನ ನಂತರ ಪಾಯಿಂಟ್ಸ್ ಪಟ್ಟಿಯಲ್ಲಿ ಬದಲಾವಣೆ ಕಂಡು ಬಂದಿದೆ. ಕಾಂಗರೂ ತಂಡ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಾಲ್ಕನೇ ಸ್ಥಾನಕ್ಕಾಗಿ ಹೋರಾಟ ನಡೆಯುತ್ತಿದೆ. ಮೂರೂ ತಂಡಗಳು 8-8 ಅಂಕಗಳನ್ನು ಹೊಂದಿದ್ದು, ಇನ್ನೂ 1-1 ಪಂದ್ಯಗಳು ಉಳಿದಿವೆ. ನೆದರ್ಲೆಂಡ್ಸ್ ತಂಡ ಕೂಡಾ ರೇಸ್‌ನಲ್ಲಿದೆ. ಆದರೆ ಅರ್ಹತೆ ಪಡೆಯುವ ಸಾಧ್ಯತೆಗಳು ಅತ್ಯಲ್ಪ. ನೆದರ್ಲೆಂಡ್ಸ್ ತಂಡ ಬಹುತೇಕ ಎಲಿಮಿನೇಷನ್‌ನ ಅಂಚಿನಲ್ಲಿದೆ. ತಂಡವು ಪ್ರಸ್ತುತ 7 ಪಂದ್ಯಗಳಿಂದ 4 ಅಂಕಗಳನ್ನು ಹೊಂದಿದೆ. ಮುಂಬರುವ ಎರಡು ಪಂದ್ಯಗಳು ಅಫ್ಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಆದರೆ ಈ ಪಂದ್ಯದಲ್ಲಿ ಗೆಲುವು ಸುಲಭವಲ್ಲ. ಹೀಗಾಗಿ ನೆದರ್ಲೆಂಡ್ಸ್ ತನ್ನ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತರೆ ಟೂರ್ನಿಯಿಂದ ಹೊರಬಿದ್ದ ನಾಲ್ಕನೇ ತಂಡ ಎನಿಸಿಕೊಳ್ಳಲಿದೆ.

ಇದನ್ನೂ ಓದಿ : Photo Gallery: ಆಫ್ಘಾನ್ ವಿರುದ್ಧ ಮ್ಯಾಕ್ಸ್ವೆಲ್ ದಾಖಲೆಯ ದ್ವಿಶತಕ, ಹಲವು ದಾಖಲೆ ಬರೆದ ಐತಿಹಾಸಿಕ ಇನಿಂಗ್ಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News