ಲಂಡನ್: ಇಲ್ಲಿನ ಓವೆಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಮೂರನೇ ದಿನದಾಂತ್ಯಕ್ಕೆ 296 ರನ್ ಗಳ ಬೃಹತ್ ಮುನ್ನಡೆಯನ್ನು ಪಡೆದಿದೆ.
ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡವು ತನ್ನ ಮೊದಲ ಇನಿಂಗ್ಸ್ ನಲ್ಲಿ ನೀಡಿದ 469 ರನ್ ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 296 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರವಾಗಿ ಆಜಿಂಕ್ಯಾ ರಹಾನೆ 89 ಹಾಗೂ ರವೀಂದ್ರ ಜಡೇಜಾ 48 ಹಾಗೂ ಶಾರ್ದುಲ್ ಠಾಕೂರ್ 51 ರನ್ ಗಳ ಮೂಲಕ ತಂಡಕ್ಕೆ ಆಸರೆಯಾದರು. ಟೀಮ್ ಇಂಡಿಯಾದ ಉಳಿದ ಪ್ರಮುಖ ಆಟಗಾರರು 20 ರನ್ ಗಳ ಗುರಿಯನ್ನು ಸಹ ದಾಟಲು ಸಾಧ್ಯವಾಗಲಿಲ್ಲ ಇದರಿಂದಾಗಿ ಟೀಮ್ ಇಂಡಿಯಾ ಹಿನ್ನೆಡೆಯನ್ನು ಅನುಭವಿಸಬೇಕಾಗಿ ಬಂತು.
ಇದನ್ನೂ ಓದಿ: ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳ ಮೇಲೆ ದಾಳಿ, 11 ಟನ್ ನಿಷೇಧಿತ ಪ್ಲಾಸ್ಟಿಕ್ ವಶ
Australia are on top, but India's fightback on Day 3 has opened up the #WTC23 Final 👀
— ICC (@ICC) June 9, 2023
ಸದ್ಯ ಎರಡನೇ ಇನಿಂಗ್ಸ್ ನ ಆಟವನ್ನು ಆರಂಭಿಸಿರುವ ಮೂರನೇ ದಿನದಾಂತ್ಯಕ್ಕೆ ಆಸ್ಟ್ರೇಲಿಯಾ ತಂಡವು ನಾಲ್ಕು ವಿಕೆಟ್ ನಷ್ಟಕ್ಕೆ 123 ರನ್ ಗಳನ್ನು ಗಳಿಸಿದೆ. ಆ ಮೂಲಕ ಈಗ 296 ರನ್ ಗಳ ಬೃಹತ್ ಮುನ್ನಡೆಯನ್ನು ಕಾಯ್ದುಕೊಂಡಿದೆ.ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿರುವುದರಿಂದ ನಾಲ್ಕನೇ ದಿನದ ಆರಂಭದಲ್ಲಿ ಟೀಮ್ ಇಂಡಿಯಾದ ಬೌಲರ್ ಗಳು ಆಸ್ಟ್ರೇಲಿಯಾ ತಂಡವನ್ನು ಬೇಗನೆ ಕಟ್ಟಿ ಹಾಕಿದಲ್ಲಿ ಮತ್ತು ಎರಡನೆ ಇನಿಂಗ್ಸ್ ನಲ್ಲಿ ಪ್ರಮುಖ ಬ್ಯಾಟ್ಸಮನ್ ಗಳು ಉತ್ತಮ ಪ್ರದರ್ಶನ ನೀಡಿದ್ದೆ ಆದಲ್ಲಿ ಟೀಮ್ ಇಂಡಿಯಾ ಆಗ ಗೆಲುವಿನ ಚೊಚ್ಚಲ ವಿಶ್ವ ಚಾಂಪಿಯನ್ಶಿಪ್ ಪಟ್ಟವನ್ನು ಅಲಂಕರಿಸಲು ಸಾಧ್ಯವಾಗಬಹುದು.
ಇದನ್ನೂ ಓದಿ: ವಿದ್ಯಾರ್ಥಿನಿಗೆ ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ದಂಡ
ಆದರೆ ಇದೆಲ್ಲವೂ ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ನಾಲ್ಕನೇ ದಿನದಂದು ಟೀಮ್ ಇಂಡಿಯಾದ ಬೌಲರ್ ಗಳು ಆಸಿಸ್ ಬ್ಯಾಟಿಂಗ್ ಪಡೆಯನ್ನು ಹೇಗೆ ಕಟ್ಟಿ ಹಾಕುತ್ತಾರೆ ಜೊತೆಗೆ ಎರಡನೇ ಇನಿಂಗ್ಸ್ ನಲ್ಲಿ ಟೀಮ್ ಇಂಡಿಯಾದ ಬ್ಯಾಟ್ಸ್ಮನ್ ಗಳು ನಿರ್ಣಾಯಕ ಪ್ರದರ್ಶನ ನೀಡುತ್ತಾರೆಯೇ ಎನ್ನುವುದರ ಮೇಲೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯದ ಅಂತಿಮ ಫಲಿತಾಂಶ ನಿರ್ಧಾರವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.