Rohit vs Hardik: ರೋಹಿತ್ ಮತ್ತು ಪಾಂಡ್ಯ ನಡುವೆ ನಾಯಕತ್ವ ವಿಚಾರಕ್ಕೆ ಭಿನ್ನಾಭಿಪ್ರಾಯ!?

Rohit Sharma : ರೋಹಿತ್ ಶ್ರೇಷ್ಠ ನಾಯಕ ಎಂದು ನಾನು ಹೇಳಬಲ್ಲೆ ಎಂದು ಟೀಮ್‌ ಇಂಡಿಯಾ ದಿಗ್ಗಜ ಆಟಗಾರ ಹೇಳಿದ್ದಾರೆ. 

Written by - Chetana Devarmani | Last Updated : Jan 14, 2024, 07:53 AM IST
  • ರೋಹಿತ್ ಮತ್ತು ಪಾಂಡ್ಯ ನಡುವೆ ವಿವಾದ?
  • ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
  • ರೋಹಿತ್ ಶ್ರೇಷ್ಠ ನಾಯಕ ಎಂದ ಯುವರಾಜ್‌ ಸಿಂಗ್
Rohit vs Hardik: ರೋಹಿತ್ ಮತ್ತು ಪಾಂಡ್ಯ ನಡುವೆ ನಾಯಕತ್ವ ವಿಚಾರಕ್ಕೆ ಭಿನ್ನಾಭಿಪ್ರಾಯ!? title=

Yuvraj Singh Statement: T20 ವಿಶ್ವಕಪ್ 2024 ಅನ್ನು ಗಮನದಲ್ಲಿಟ್ಟುಕೊಂಡು, ಭಾರತದ ಆಲ್‌ರೌಂಡರ್ ಯುವರಾಜ್ ಸಿಂಗ್ ಮಾತನಾಡಿದ್ದಾರೆ. 14 ತಿಂಗಳ ನಂತರ T20 ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ. ಇವರಿಬ್ಬರೂ ಅಫ್ಘಾನಿಸ್ತಾನ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ T20 ಸರಣಿಗೆ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಇದು ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ T20 ವಿಶ್ವಕಪ್‌ಗೆ ಮೊದಲು ಭಾರತದ ಕೊನೆಯ ಪಂದ್ಯಾವಳಿಯಾಗಿದೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಸೇರ್ಪಡೆಯಾಗಿರುವುದು ಚರ್ಚೆಗೆ ನಾಂದಿ ಹಾಡಿದೆ. ಯುವರಾಜ್ ಸಿಂಗ್ ಈ ಬಗ್ಗೆ ಹಾಡಿನ ಮೂಲಕ ಉತ್ತರಿಸಿದ್ದಾರೆ. 'ಕುಚ್ ತೊ ಲೋಗ್ ಕಹೆಂಗೆ, ಲೋಗ್ ಕಾ ಕಾಮ್ ಹೈ ಕೆಹನಾ' ಎಂದಿದ್ದಾರೆ. ಈ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: ರಾಮಮಂದಿರಕ್ಕೆ ಹೋಗುತ್ತೇನೆ ಎಂದ ಸ್ಟಾರ್‌ ಕ್ರಿಕೆಟಿಗ : ಭಾರತೀಯರು ಫಿದಾ 

ರೋಹಿತ್ ಶ್ರೇಷ್ಠ ನಾಯಕ

ರೋಹಿತ್ ಶ್ರೇಷ್ಠ ನಾಯಕ ಎಂದು ಯುವಿ ಹೇಳಿದ್ದಾರೆ. ಏಕೆಂದರೆ ಅವರು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಾರೆ. 14 ತಿಂಗಳ ನಂತರ ಅವರು ಪುನರಾಗಮನ ಮಾಡುತ್ತಿದ್ದಾರೆ ಎಂದು ಯುವರಾಜ್ ಸಿಂಗ್ ಹೇಳಿದರು. ರೋಹಿತ್ ಶ್ರೇಷ್ಠ ನಾಯಕ, ಐದು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಅವರು ನಮ್ಮ ತಂಡವನ್ನು ವಿಶ್ವಕಪ್ ಫೈನಲ್‌ಗೆ ಕರೆದೊಯ್ದರು. ಅವರು ಐಪಿಎಲ್ ಮತ್ತು ಭಾರತ ಎರಡಕ್ಕೂ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದರು. 

ರೋಹಿತ್ ಮತ್ತು ಪಾಂಡ್ಯ ನಡುವೆ ವಿವಾದ? 

ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅಥವಾ ಹಾರ್ದಿಕ್ ಪಾಂಡ್ಯ ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂಬ ಪ್ರಶ್ನೆಗೆ ಯುವರಾಜ್ ಸಿಂಗ್, 'ಈ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ಸ್ಥಿತಿ ಏನೆಂದು ನನಗೆ ತಿಳಿದಿಲ್ಲ. ಇದು ಆಯ್ಕೆಗಾರರ ​​ನಿರ್ಧಾರವಾಗಿರುತ್ತದೆ‌ ಎಂದು ಯುವರಾಜ್‌ ಸಿಂಗ್‌ ಹೇಳಿದರು.

ಇದನ್ನೂ ಓದಿ: India vs England: ಟೀಮ್‌ ಇಂಡಿಯಾಗೆ ಹೊಸ ವಿಕೆಟ್ ಕೀಪರ್ ಎಂಟ್ರಿ.!

ಆಟಗಾರರು ಇಂತಹ ಭಿನ್ನಾಭಿಪ್ರಾಯ ಬಂದಾಗ ಕುಳಿತು ಮಾತನಾಡಬೇಕು. ನನಗೆ ಅವರಲ್ಲಿ ಯಾವುದೇ ಸಮಸ್ಯೆ ಕಾಣಿಸಿಲ್ಲ. ಆದರೆ ಅವರಿಬ್ಬರ ಮಧ್ಯೆ ವಿವಾದವಿದ್ದಲ್ಲಿ ಅದರ ಬಗ್ಗೆ ಮಾತನಾಡಬೇಕು ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News