ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವರಾದ ಅಮಿತ್ ಷಾ ಮತ್ತು ಸ್ಮೃತಿ ಇರಾನ್ ಅವರಿಂದ ತೆರವಾದ ರಾಜ್ಯಸಭಾ ಸ್ಥಾನಗಳಿಗೆ ಏಕಕಾಲದಲ್ಲಿ ಉಪಚುನಾವಣೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮನವಿ ಸಲ್ಲಿಸಿದ್ದರು.
ವಾಯು ಚಂಡಮಾರುತದ ಹಿನ್ನೆಲೆಯಲ್ಲಿ ಕರಾವಳಿ ತೀರದ ಹತ್ತಿರವಿರುವ ಸುಮಾರು 2,15,000 ಕ್ಕೂ ಅಧಿಕ ಜನರನ್ನು ಗುಜರಾತನಲ್ಲಿ ಕೆಳಮಟ್ಟದ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
ಬುಧವಾರ ರಾತ್ರಿ ಗುಜರಾತಿನ ಹಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ರಿಕ್ಟರ್ ಮಾಪನದಲ್ಲಿ 4.0 ತೀವ್ರತೆ ದಾಖಲಾಗಿದೆ. ಅಹಮದಾಬಾದ್, ಸಬರ್ಕಾಂತ, ಬನಸ್ಕಾಂತ, ಅರಾವಳಿ ಮತ್ತು ಅಂಬಾಜಿಗಳಲ್ಲಿ ಭೂಕಂಪದ ಅನುಭವವಾಗಿರುವ ಬಗ್ಗೆ ವರದಿಗಳಿವೆ.
ಅಹಮದಾಬಾದ್ ನ ಶಾಪುರದ ಹಿಂದಿ ಶಾಲೆಯ ಮತಗಟ್ಟೆಯಲ್ಲಿ ಎಲ್.ಕೆ.ಅಡ್ವಾಣಿ ಮತಚಲಾಯಿಸಿದರೆ, ಎಸ್ ಜಿ ಹೈವೇಯಲ್ಲಿರುವ ಕಾಲೇಜೊಂದರಲ್ಲಿ ಸ್ಥಾಪಿತವಾದ ಮತಗಟ್ಟೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತಚಲಾಯಿಸಿದರು.
ಮಂಗಳವಾರ ಗುಜರಾತಿನ ಮಾಜಿ ಮುಖ್ಯಮಂತ್ರಿ ಶಂಕರ್ಸಿನ್ ವಘೇಲಾ ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸೇರ್ಪಡೆಯಾಗಿದ್ದಾರೆ. ಆ ಮೂಲಕ ಈಗ ಗುಜರಾತಿನಲ್ಲಿ ಎನ್ಸಿಪಿಗೆ ಬಲ ಬಂದಂತಾಗಿದೆ.
ಗುಜರಾತ್'ನ ಕೆವಾಡಿಯಾ ಗ್ರಾಮದಲ್ಲಿ ಡಿಸೆಂಬರ್ 20ರಿಂದ ಆರಂಭವಾಗಿರುವ ಪೊಲೀಸ್ ಮಹಾನಿರ್ದೇಶಕರ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸಿದ್ದ ಮೋದಿ ಅವರು, ರಾಜ್ಯ ರಾಜಧಾನಿ ಗಾಂಧಿನಗರದಲ್ಲಿ ಮುಂಜಾನೆ ವಿಹಾರಕ್ಕೆ ತೆರಳಿದ್ದರು.
ಗುಜರಾತಿನ ಗಿರ್ ಅಭಯಾರಣ್ಯದಲ್ಲಿ ಸಿಂಹಗಳ ಸಾವು ಭಾರಿ ಸುದ್ದಿಯನ್ನು ಮಾಡಿತ್ತು ಅಲ್ಲಿದೆ ಇಲ್ಲಿನ ಸರಣಿ ಸಿಂಹಗಳ ಸಾವು ನಿಜಕ್ಕೂ ಅರಣ್ಯ ಅಧಿಕಾರಿಗಳನ್ನು ಚಿಂತೆಗೀಡು ಮಾಡಿತ್ತು. ಆದರೆ ಈಗ ಈ ಸಿಂಹಗಳ ಸಾವಿಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.