ಹಿಂದಿ ಹೇರಿಕೆ ವಿಚಾರವಾಗಿ ಬಿಜೆಪಿ ಸರ್ಕಾರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಬಿಜೆಪಿ ನಾಯಕರೇ ಅಮಿತ್ ಶಾ ಗುಲಾಮರಾಗಬೇಡಿ, ಕನ್ನಡ ತಾಯಿಯ ಮಕ್ಕಳಾಗಿ ಎಂದು ಹೇಳಿಕೆ ನೀಡಿದ್ದರು.
ಹಿಂದಿ ಭಾಷೆಯ ವಿಚಾರವಾಗಿ ನಟ ಅಜಯ್ ದೇವಗನ್ ಮತ್ತು ಕಿಚ್ಚಾ ಸುದೀಪ್ ಅವರ ಹೇಳಿಕೆಗಳ ಬೆನ್ನಲ್ಲೇ ಈಗ ಪ್ರತಿಕ್ರಿಯಿಸಿರುವ ನಟಿ ಕಂಗನಾ ರನೌತ್ ಹಿಂದಿ ಬದಲಾಗಿ ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಘೋಷಿಸಬೇಕು ಎಂದು ಹೇಳಿದ್ದಾರೆ.
ಭಾರತದ ಹೆಸರಾಂತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ನೇರ ನುಡಿಗೆ ಮತ್ತು ಮುಕ್ತ ಅಭಿಪ್ರಾಯಕ್ಕೆ ಹೆಸರುವಾಸಿಯಾದವರು.ಈಗ ಅವರು ಹಿಂದಿ ಭಾಷೆಯ ವಿಚಾರವಾಗಿ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಭಾಷಾ ಸಂಘರ್ಷದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲಿ ʻರಾಷ್ಟ್ರಭಾಷೆʼ ವಿರುದ್ಧ ಸಮರ ಶುರುವಾಗಿದೆ.. ಸುದೀಪ್ ಹೇಳಿಕೆ ಬಗ್ಗೆ ಅಜಯ್ ದೇವಗನ್ ಟ್ವೀಟ್ ಮಾಡಿದ ಬೆನ್ನಲ್ಲೇ ʻರಾಷ್ಟ್ರಭಾಷೆʼ ವಿಚಾರದ ಚರ್ಚೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಹಿಂದಿ ʻರಾಷ್ಟ್ರಭಾಷೆʼ ಅನ್ನೋದು ನಿಜನಾ..? ಒಂದೊಂದು ರಾಜ್ಯದಲ್ಲಿ ಒಂದೊಂದು ಭಾಷೆಯಿದೆ. ಹೀಗಿರುವಾಗ ಹಿಂದಿ ರಾಷ್ಟ್ರಭಾಷೆ ಆಗೋದು ಹೇಗೆ..? ಹಿಂದಿಯನ್ನು ರಾಷ್ಟ್ರಭಾಷೆ ಅನ್ನೋದು ಎಷ್ಟು ಸರಿ..? ಎಂಬ ಪ್ರಶ್ನೆಗಳು ಎದ್ದಿವೆ..
ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ ಇರಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.. ಒಂದು ರಾಷ್ಟ್ರ ಭಾಷೆ ಅನ್ನೋ ಪ್ರಶ್ನೆಯೇ ಬರಲ್ಲ ಎಂದ ಸುಮಲತಾ, ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ಇದು ನಮ್ಮ ಸ್ವಾಭಿಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ ಎಂದು ಸುಮಲತಾ ಹೇಳಿದ್ದಾರೆ.
ಒಂದು ಕಡೆ ಹಿಂದಿ ರಾಷ್ಟ್ರಭಾಷೆ ಹೌದೋ..? ಅಲ್ಲವೋ..? ಎಂಬ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದ್ದರೆ, ಮತ್ತೊಂದು ಕಡೆ ಬಾಲಿವುಡ್ನ ಸ್ಟಾರ್ ನಟರ ವಿರುದ್ಧ ಉತ್ತರ ಭಾರತದ ಅಭಿಮಾನಿಗಳೇ ಗರಂ ಆಗಿದ್ದಾರೆ. ಈ ರೀತಿ ಫ್ಯಾನ್ಸ್ ರೊಚ್ಚಿಗೇಳಲು ಕಾರಣ ಪಾನ್ ಮಸಾಲ ಅರ್ಥಾತ್ ಗುಟ್ಕಾ ಜಾಹೀರಾತು. ಅಜಯ್ ದೇವಗನ್, ಅಕ್ಷಯ್ ಕುಮಾರ್ ಹಾಗೂ ಶಾರುಖ್ ಖಾನ್ ಒಟ್ಟಾಗಿ ನಟಿಸಿರುವ ಪಾನ್ ಮಸಾಲ ಒಂದರ ಖಾಸಗಿ ಜಾಹೀರಾತು ಕಿಡಿ ಹೊತ್ತಿಸಿದೆ.
ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಕಿಚ್ಚ ಸುದೀಪ್ ಹೇಳಿಕೆ ನೀಡಿದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದ ಹಿಂದಿ ನಟ ಅಜಯ್ ದೇವಗನ್ ಹೇಳಿಕೆಗೆ ಈಗ ಬಾಲಿವುಡ್ ನಲ್ಲಿಯೇ ವಿರೋಧ ವ್ಯಕ್ತವಾಗಿದೆ.
ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿದ್ದ ಸುದೀಪ್ ಹೇಳಿಕೆ ಪ್ರತಿಕ್ರಿಯಿಸುತ್ತಾ ಹಿಂದಿ ನಟ ಅಜಯ್ ದೇವಗನ್ 'ಬ್ರದರ್ ಕಿಚ್ಚ ಸುದೀಪ್, ನಿಮ್ಮ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಲ್ಲ ಎಂದು ಹೇಳುತ್ತಿದ್ದೀರಿ. ಹಾಗಿದ್ದಲ್ಲಿ ನಿಮ್ಮ ಮಾತೃಭಾಷೆಯಲ್ಲಿ ನಿರ್ಮಾಣ ಮಾಡಿರುವ ಚಿತ್ರಗಳನ್ನೇಕೆ ಹಿಂದಿಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದೀರಿ? ಹಿಂದಿ ನಮ್ಮ ಮಾತೃಭಾಷೆ ಹಾಗೂ ಬಹುಶಃ ಮುಂದೆಯೂ ಕೂಡ ಇದು ನಮ್ಮ ರಾಷ್ಟ್ರಭಾಷೆಯಾಗಿಯೇ ಇರಲಿದೆ. ಜನ ಗಣ ಮನ' ಎಂದು ಟ್ವೀಟ್ ಮಾಡಿದ್ದರು.
ಬಾಲಿವುಡ್ ನಟ ಅಜಯ್ ದೇವಗನ್ ಅವರು ನಟಿ ಕಾಜೋಲ್ ಅವರನ್ನು ಮದುವೆಯಾಗಿ ಎರಡು ದಶಕಗಳಿಗೂ ಹೆಚ್ಚು ಕಾಲ ಕಳೆದಿದೆ. ಈಗ ಈ ಜೋಡಿಗೆ ನೈಸಾ ದೇವಗನ್ (19 ವರ್ಷ) ಮತ್ತು ಯುಗ್ ದೇವಗನ್ (11 ವರ್ಷ) ಎನ್ನುವ ಇಬ್ಬರು ಮಕ್ಕಳಿದ್ದಾರೆ.ಈಗ ತಮ್ಮ ಈ ಸುದೀರ್ಘ ದಾಂಪತ್ಯದ ಕುರಿತಾಗಿ ಯೂಟ್ಯೂಬರ್ ರಣವೀರ್ ಅಲಹಬಾಡಿಯಾ ಅವರೊಂದಿಗೆ ಮಾತನಾಡುತ್ತಾ ಕೇವಲ ಪ್ರೀತಿಯಿಂದ ಮಾತ್ರ ದಾಂಪತ್ಯ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಬಾಲಿವುಡ್ ಸೂಪರ್ಸ್ಟಾರ್ ಅಜಯ್ ದೇವ್ಗನ್ ಅವರ ಸಹೋದರ ಅನಿಲ್ ದೇವ್ಗನ್ ಅವರು ಸೋಮವಾರ ರಾತ್ರಿ ಕೊನೆಯುಸಿರೆಳೆದರು. ಅನಿಲ್ ದೇವಗನ್ ಪ್ರೇಮ್ ಪ್ರಕಾಶ್ ದೇವಗನ್ ಅವರ ಪುತ್ರ ಮತ್ತು ಅಜಯ್ ದೇವಗನ್ ಅವರ ಸೋದರ ಸಂಬಂಧಿ ಅವರಿಗೆ 45 ವರ್ಷ ವಯಸ್ಸಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.