ಬೊಮ್ಮಾಯಿಗೆ ಆರ್ಶೀವಾದ ಮಾಡಿದ್ದೆ. ಆಗ ಮಿನಿಸ್ಟರ್ ಆದ್ರು. ಬಳಿಕ ಕರುನಾಡಿಗೆ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ್ರು. ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತಾರೆ ಎಂದು ಜೈನಮಂದಿರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪುಜ್ಯರು ಭವಿಷ್ಯ ನುಡಿದರು.
ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಅಭಿವೃದ್ದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. 100 ಕೋಟಿಗೂ ಹೆಚ್ಚು ಅನುದಾನ ನೀಡಿ, ಮುಚ್ಚಿಹೋಗಿದ್ದ ಮಂಡ್ಯದ ಸಕ್ಕರೆ ಕಾರ್ಖಾನೆ ಪುನರಾರಂಭಿಸಿದ್ದು ನಮ್ಮ ಸರ್ಕಾರ. ಈ ವರ್ಷ ಎಥನಾಲ್ ಘಟಕವನ್ನು ಮೈಶುಗರ್ ಕಾರ್ಖಾನೆಯಲ್ಲಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಾಲ್’ಗಳು ಶಾಪಿಂಗ್ ಕಾಂಪ್ಲೆಕ್ಸ್’ಗಳು ಬಂದಿವೆ. ಸ್ವಲ್ಪ ದಿನ ವ್ಯಾಪಾರ ಚೆನ್ನಾಗಿ ಆದರೂ ಸ್ವಲ್ಪ ದಿನಗಳಲ್ಲಿ ಕಡಿಮೆಯಾಗುತ್ತದೆ. ಏನೇ ಬಂದರೂ ಕಿರಾಣಿ ಅಂಗಡಿ ವ್ಯಾಪಾರ ಕಡಿಮೆಯಾಗುವುದಿಲ್ಲ. ಕಾಳು ಕಡ್ಡಿ ಕೊಳ್ಳುವವರು ಹೆಚ್ಚಿದ್ದಾರೆ. ದರ ಮತ್ತು ತೂಕ ಸರಿಯಾಗಿ ನೀಡಿದರೆ ಗ್ರಾಹಕರು ಸಂತೋಷದಿಂದಿರುತ್ತಾರೆ ಎಂದರು.
ಸರ್ಕಾರದ ಅರ್ಕಾವತಿ ಅಸ್ತ್ರಕ್ಕೆ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.. ನಾನು ನಿನ್ನೆ ಸದನದಲ್ಲಿ ಇದ್ದಿದ್ರೆ ಸರಿಯಾಗಿ ಉತ್ತರ ಕೊಡುತ್ತಿದೆ. ದೊಡ್ಡ ಮಟ್ಟದ ಭ್ರಷ್ಟಾಚಾರ ಆಗಿದೆ ಎಂದು ಬಿಂಬಿಸಿದ್ದಾರೆ. ಬೊಮ್ಮಾಯಿಯವರು ಪ್ರಾಮಾಣಿಕರಾಗಿದ್ರೆ ತನಿಖೆ ಕೊಡಿ ಎಂದು ಸವಾಲು ಹಾಕಿದ್ದಾರೆ..
ರಾಜ್ಯದ ಬಜೆಟ್ ಮಂಡನೆ ಬಳಿಕ ನಾಡದೊರೆ ಬೊಮ್ಮಾಯಿ ಹಾವೇರಿ ಜಿಲ್ಲೆಗೆ ಇಂದು ಆಗಮಿಸಿದ್ದರು. ಸಿಎಂ ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದರು. ಬಳಿಕ ಸಿಎಂ ಬೊಮ್ಮಾಯಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಈ ವೇಳೆ ರಾಮನಗರದಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಸಿಎಂ ಮಾತನಾಡಿದರು.
ಪ್ರಸ್ತುತ ವೀಸಾ ಕಚೇರಿ ಚೆನ್ನೈನಲ್ಲಿರುವುದರಿಂದ ಬೆಂಗಳೂರಿನಿಂದ ಅಮೆರಿಕಾಗೆ ಪ್ರಯಾಣಿಸುವವರಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ವಿದೇಶಿಗರು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಜನ ಅಮೆರಿಕಾಕ್ಕೆ ಪ್ರಯಾಣ ಬೆಳೆಸುವುದರಿಂದ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರಿನಲ್ಲಿ ವೀಸಾ ಕಚೇರಿಯನ್ನು ತೆರೆಯುವಂತೆ ಆಗ್ರಹಿಸಿದರು.
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸರ್ಕಾರ ಹಲವಾರು ಯೋಜನೆಗಳ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡುವ ಪ್ಲಾನ್ ಮಾಡಿದೆ. ಅದೇ ರೀತಿ ಶಿವಮೊಗ್ಗದ ಹೊಸ ಏರ್ಪೋರ್ಟ್ ಕಾಮಗಾರಿ ಭರದಿಂದ ಸಾಗಿದೆ. ಇದೇ ಫೆಬ್ರವರಿ 27 ರಂದು ಖುದ್ದು ಪ್ರಧಾನಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಈ ವಿಮಾನ ನಿಲ್ದಾಣಕ್ಕೆ ಬಿಎಸ್ವೈ ಅವರ ಹೆಸರಿಡಲು ಸರ್ಕಾರ ಪಸ್ತಾವನೆ ಸಲ್ಲಿಸಲಿದೆ ಅಂತ ಬೊಮ್ಮಾಯಿ ಹೇಳಿದ್ದಾರೆ...
ಗಡಿಭಾಗದಲ್ಲಿ ಶಿಕ್ಷಣ, ಕೈಗಾರಿಕೆ, ಮೂಲಭೂತ ಸೌಕರ್ಯ, ಕನ್ನಡ ಭಾಷಾ ಅಭಿವೃದ್ಧಿಗಳ ಬಗ್ಗೆ ಕೆಲಸ ಮಾಡುವ ಅವಶ್ಯಕತೆ ಇದ್ದು, ಗಡಿ ಅಭಿವೃದ್ಧಿ ಪ್ರಾಧಿಕಾರಕ್ಜೆ ಇದೇ ವರ್ಷದ ಮಾರ್ಚ್ 31 ರೊಳಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಈ ಅನುದಾನಕ್ಕೆ ಕ್ರಿಯಾಯೋಜನೆಯನ್ನು ಸಿದ್ದಪಡಿಸಿ ಸಲ್ಲಿಸಲು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
30ಕ್ಕೆ ಬೆಂಗಳೂರಿನಿಂದ ಹಾವೇರಿಗೆ ಪ್ರಯಾಣ. 12:00ಕ್ಕೆ ಬ್ಯಾಡಗಿ ತಾಲೂಕಿನಲ್ಲಿ ಉದ್ಘಾಟನಾ ಕಾರ್ಯಕ್ರಮ. ಶಿಡೇನೂರ ಶ್ರೀ ಮುಕ್ತೇಶ್ವರ ದೇವಸ್ಥಾನ ಕಾರ್ಯಕ್ರಮದಲ್ಲಿ ಭಾಗಿ. ಬಳಿಕ ಮಧ್ಯಾಹ್ನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ. ಮಧ್ಯಾಹ್ನ 3 ಗಂಟೆಗೆ ಶಿಡೇನೂರಯಿಂದ ತಂಗಡಗಿಯತ್ತ ಪ್ರಯಾಣ.
ಸತ್ರೂ ಬಿಜೆಪಿ ಸೇರಲ್ಲ ಎಂಬ ಸಿದ್ದು ಹೇಳಿಕೆ ವಿಚಾರ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.. ಸಿದ್ದರಾಮಯ್ಯ ಜೀವಂತ ಇದ್ದಾಗಲೇ BJP ಸೇರಿಸೋದಿಲ್ಲ. ಅವರ ಹೆಣ ತಗೊಂಡು ಏನು ಮಾಡೋದು ಹೇಳಿ..? ಅವರ ಹೆಣ ನಾಯಿ ಕೂಡ ಮೂಸಲ್ಲ ಅಂತಾ ಈಶ್ವರಪ್ಪ ಹೇಳಿದ್ದಾರೆ..
ಅಕ್ರಮ, ಭ್ರಷ್ಟಾಚಾರಕ್ಕೆ ಜನ್ಮ ನೀಡಿದ್ದೇ ಕಾಂಗ್ರೆಸ್ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ ಅಂತಾ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬ ಹೇಳಿಕೆಗೆ ಕೆಂಡ ಕಾರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 40% ಕಮೀಷನ್ ಆರೋಪ ನಮ್ಮ ಸರ್ಕಾರದ ಮೇಲೆ ಮಾಡಿದ್ರಾ ಗುತ್ತಿಗೆದಾರರು? ನಮ್ಮ ಸರ್ಕಾರದ ಮೇಲೆ ಪತ್ರ ಬರೆದಿದ್ದರಾ..?.ಯಾವ ಆಧಾರದಲ್ಲಿ ಇವ್ರು ಹೀಗೆ ಹೇಳ್ತಿದ್ದಾರೆ ಗೊತ್ತಿಲ್ಲ, ಎಂದರು.
ಜಾತಿ ಜಾತಿ ಮಧ್ಯೆ, ಧರ್ಮ ಧರ್ಮದ ಮಧ್ಯೆ ಬೊಮ್ಮಾಯಿ ಸರ್ಕಾರ ಜಗಳ ತಂದಿಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೋಡೆ ಕೂಡಾ ಕಾಸು ಕಾಸು ಕಾಸು ಅನ್ನುತ್ತೆ ಎಂದಿದ್ದಾರೆ...
ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು. ಹಿರಿಯ ಅಧಿಕಾರಿಗಳು, ಮುಖ್ಯಸ್ಥರ ಜತೆ ಸಿಎಂ ಸಭೆ. ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳವಂತೆ ಹೇಳಿದ್ದೇನೆ. ಅಧಿಕಾರಿಗಳು ಮುಖ್ಯಸ್ಥರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಸಭೆ ಮುಗಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.