Budget 2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವರ್ಷ 2022-23ರ ಸಾಮಾನ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಾರಿಯ ತಮ್ಮ ಬಜೆಟ್ ಭಾಷಣದಲ್ಲಿ ರೈಲ್ವೆ ಇಲಾಖೆಗೆ (Indian Railways) ಬಹುದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ಈ ಕುರಿತು ಘೋಷಣೆ ಮಾಡಿರುವ ಅವರು ಮುಂದಿನ 3 ವರ್ಷಗಳಲ್ಲಿ 400 ಹೊಸ ವಂದೇ ಭಾರತ್ ರೈಲುಗಳನ್ನು (Vande Bharat Trains) ಓಡಿಸಲಾಗುವುದು ಎಂದು ಹೇಳಿದ್ದಾರೆ.
60 Lakh New Jobs: ಈ ಬಾರಿಯ ಬಜೆಟ್ ನಲ್ಲಿ ಕೇಂದ್ರದ ಪ್ರಧಾನಿ ಮೋದಿ (PM Narendra Modi) ನೇತೃತ್ವದ ಸರ್ಕಾರ ಯುವಕರಿಗೆ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯುವಕರಿಗಾಗಿ 60 ಲಕ್ಷ ಹೊಸ ಉದ್ಯೋಗಗಳನ್ನು ಘೋಷಿಸಿದ್ದಾರೆ. 30 ಲಕ್ಷ ಹೆಚ್ಚುವರಿ ಉದ್ಯೋಗಗಳನ್ನು ಒದಗಿಸುವ ಸಾಮರ್ಥ್ಯವಿದೆ ಎಂದು ಅವರುಹೇಳಿದ್ದಾರೆ.
Budget 2022-23 - ಪ್ರತಿ ವರ್ಷ ಮಂಡನೆಯಾಗುವ ಬಜೆಟ್ ಅನ್ನು ವಿವಿಧ ಹೆಸರುಗಳಿಂದ ಗುರುತಿಸಲಾಗುತ್ತದೆ. ಇಂತಹುದೇ ಒಂದು ಬಜೆಟ್ ಮಂಡನೆಯಾಗಿದ್ದು, ಆ ವರ್ಷ ಮಂಡನೆಯಾದ ಬಜೆಟ್ ಅನ್ನು 'Black Budget' ಅಂದರೆ 'ಕರಾಳ ಬಜೆಟ್' ಎಂದು ಕರೆಯಲಾಗಿತ್ತು.
Budget 2022 : ಇನ್ನೇನು ಕೆಲವೇ ಹೊತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಭಾಷಣ ಮುಗಿದ ನಂತರ ಪ್ರತಿ ಬಾರಿಯಂತೆ ಕೆಲವು ವಸ್ತುಗಳು ದುಬಾರಿಯಾಗುತ್ತವೆ.
Budget 2022: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಮಂಗಳವಾರ ದೇಶದ ಸಾಮಾನ್ಯ ಬಜೆಟ್ (Budget 2022-23) ಮಂಡಿಸಲಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದೇಶ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಪ್ರತಿ ಬಾರಿಗಿಂತ ಈ ಬಜೆಟ್ನಲ್ಲಿ ಸರ್ಕಾರದ ಮುಂದೆ ಹೆಚ್ಚಿನ ಸವಾಲುಗಳಿವೆ.
Budget 2022: ಇತ್ತೀಚಿನ ದಿನಗಳಲ್ಲಿ ಬಜೆಟ್ ಎಂಬ ವಿಷಯದ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಪದವು ಎಲ್ಲಿಂದ ಬಂದಿದೆ ಮತ್ತು ಇದರ ಅರ್ಥವೇನು ಎಂದು ತಿಳಿಯಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ?
Economic Survey 2022: ಸಂಸತ್ತಿನಲ್ಲಿ ಬಜೆಟ್ ಅಧಿವೇಶನ (Budget Session) ಆರಂಭವಾಗಿದೆ. ರಾಷ್ಟ್ರಪತಿಗಳ ಭಾಷಣದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದನದಲ್ಲಿ 2021-22ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸುತ್ತಿದ್ದಾರೆ.
Budget 2022: ಈ ಬಾರಿಯ ಬಜೆಟ್ನಿಂದ ತೆರಿಗೆದಾರರು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ತೆರಿಗೆ ವಿನಾಯಿತಿಯ ವ್ಯಾಪ್ತಿ ಹೆಚ್ಚಿಸಲಾಗಿಲ್ಲ. ಹೀಗಾಗಿ ತೆರಿಗೆ ಪಾವತಿದಾರರು ಈ ಬಾರಿಯ ಬಜೆಟ್ನಲ್ಲಿ ಹಲವು ರೀತಿಯ ರಿಯಾಯಿತಿಗಳನ್ನು ಕಾಣಬಹುದು. ಈ ಬಜೆಟ್ನಿಂದ ತೆರಿಗೆದಾರರ ನಿರೀಕ್ಷೆಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Kisan Credit Card Scheme/ Budget 2022 KCC: ರೈತರಿಗೆ ಸಾಲದಿಂದ ಮುಕ್ತಿ ನೀಡಲು ಮತ್ತು ರೈತರ ಆದಾಯವನ್ನು ಹೆಚ್ಚಿಡುವ ಉದ್ದೇಶದಿಂದ ಸರ್ಕಾರವು ರೈತರಿಗೆ ಕೈಗೆಟುಕುವ ದರದಲ್ಲಿ ಸಾಲವನ್ನು ನೀಡುತ್ತದೆ.
Budget session: ಸಂಸತ್ತಿನ ಬಜೆಟ್ ಅಧಿವೇಶನವು ಸೋಮವಾರ ಪ್ರಾರಂಭವಾಗಲಿದ್ದು, ಏಪ್ರಿಲ್ 8 ರಂದು ಮುಕ್ತಾಯಗೊಳ್ಳಲಿದ್ದು, ಅಧಿವೇಶನದ ಮೊದಲ ಭಾಗವು ಫೆಬ್ರವರಿ 11 ರವರೆಗೆ ವಿಸ್ತರಿಸಲಿದೆ.
ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲಿರುವ ಬಜೆಟ್ನಲ್ಲಿ ಸಾಮಾಜಿಕ ಪಿಂಚಣಿಯನ್ನು ಮೂರು ಸಾವಿರಕ್ಕೆ ಏರಿಸಿ ಇತರೆ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆ ಈ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಹಲವು ಸಂಘಟನೆಗಳು ತಿಳಿಸಿವೆ. ಪ್ರಸ್ತುತ ದೇಶದಲ್ಲಿ ಹಿರಿಯ ನಾಗರಿಕರ ಜನಸಂಖ್ಯೆ 14 ಕೋಟಿ ಇದ್ದಾರೆ.
ಈ ಬಾರಿಯ ಬಜೆಟ್ನಲ್ಲಿ ‘ವರ್ಕ್ ಫ್ರಮ್ ಹೋಮ್’ ಮಾಡುವವರಿಗೆ ದೊಡ್ಡ ರಿಲೀಫ್ ಸಿಗುವ ನಿರೀಕ್ಷೆ ಇದೆ. ಕಳೆದ ಕೆಲವು ವರ್ಷಗಳಿಂದ ಕೇಂದ್ರ ಬಜೆಟ್ನಲ್ಲಿ ವೇತನದಾರರಿಗೆ ಸರ್ಕಾರದಿಂದ ಯಾವುದೇ ವಿಶೇಷ ಪರಿಹಾರ ಸಿಕ್ಕಿರಲಿಲ್ಲ.
ಈ ವರ್ಷ ಬಜೆಟ್ ಅಧಿವೇಶನ 2022 ಎರಡು ಭಾಗಗಳಲ್ಲಿ ನಡೆಯಲಿದೆ, ಮೊದಲ ಭಾಗವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ಮತ್ತು ಎರಡನೇ ಭಾಗವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದೆ.
2014ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಭಾಷಣಕ್ಕೆ 2 ಗಂಟೆ 10 ನಿಮಿಷ ತೆಗೆದುಕೊಂಡಿದ್ದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2019ರ ಬಜೆಟ್ ಭಾಷಣವನ್ನು 2 ಗಂಟೆ 5 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.