ಇಂಡಿಯನ್ ಪ್ರೀಮಿಯರ್ ಲೀಗ್ 2021 (ಐಪಿಎಲ್) ನ ಉಳಿದ ಭಾಗಕ್ಕೆ ದಾರಿ ಮಾಡಿಕೊಡಲು ಬಿಸಿಸಿಐ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬದಲಾವಣೆ ಮಾಡಲು ನೋಡುತ್ತಿದೆ ಎಂದು ತಿಳಿದುಬಂದಿದೆ.
ಐಪಿಎಲ್ 2021 ಗೆ ಸಂಬಂಧಿಸಿದಂತೆ ಬಿಸಿಸಿಐನ ಮಾಜಿ ಕಾರ್ಯದರ್ಶಿ ನಿರಂಜನ್ ಷಾ (Niranjan Shah) ಮಹತ್ವದ ಹೇಳಿಕೆ ನೀಡಿದ್ದಾರೆ. ಐಪಿಎಲ್ 2021 ರ ಉಳಿದ 31 ಪಂದ್ಯಗಳನ್ನು ಭಾರತದಲ್ಲಿ ನಡೆಸಬಹುದು ಎಂದು ಅವರು ಹೇಳಿದ್ದಾರೆ.
ಕ್ರಿಕೆಟಿಗ ಸುರೇಶ್ ರೈನಾ ತನ್ನ ಚಿಕ್ಕಮ್ಮನಿಗೆ ಆಕ್ಸಿಜನ್ ಸಿಲಿಂಡರ್ ನೀಡುವಂತೆ ಕೋರಿದ ನಂತರ ಬಾಲಿವುಡ್ ನಟ ಸೋನು ಸೂನ್ ರೈನಾ ಅವರ ಸಹಾಯಕ್ಕೆ ಬಂದಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ರೈನಾ ಹಿಂದಿನ ದಿನ ರೋಗಿಯ ವೈದ್ಯಕೀಯ ವಿವರಗಳನ್ನು ಹಂಚಿಕೊಂಡು ಸಹಾಯ ಕೋರಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ತಮ್ಮ ತಂಡದ ಆಟಗಾರರು ಸುರಕ್ಷಿತವಾಗಿ ಮನೆಗೆ ತೆರಳುವವರೆಗೆ ತಾವು ಕೊನೆಯ ವ್ಯಕ್ತಿಯಾಗಿ ಹೋಟೆಲ್ ನಿಂದ ಹೊರಹೊಗುವುದಾಗಿ ಅವರು ಮ್ಯಾನೇಜ್ಮೆಂಟ್ಗೆ ತಿಳಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಅನ್ನು ಮುಂದೂಡಿದ ಕೆಲ ದಿನಗಳ ನಂತರ, ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ ದೇಶದಲ್ಲಿ ಟಿ 20 ಪಂದ್ಯಾವಳಿಯನ್ನು ನಡೆಸುವ ಮಂಡಳಿಯ ನಿರ್ಧಾರವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸಮರ್ಥಿಸಿಕೊಂಡರು.
ಐಪಿಎಲ್ 2021 ರಲ್ಲಿ ಕರೋನಾವೈರಸ್ ಕರಿನೆರಳು ಬೆಂಬಿಡದೆ ಕಾಡುತ್ತಿದೆ. ಅದರ ನಂತರ ಈಗ ಪಂದ್ಯಾವಳಿ ರದ್ದಾಗುವ ಅಪಾಯದಲ್ಲಿದೆ. ಸೋಮವಾರ, ಕೋಲ್ಕತಾ ನೈಟ್ ರೈಡರ್ಸ್ ಕ್ರಿಕೆಟಿಗರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಅವರಿಗೆ ಕರೋನಾ ಪಾಸಿಟಿವ್ ಎಂದು ಕಂಡುಬಂದಿದೆ.
IPL 2021: ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸದಸ್ಯರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಆದರೆ, ಈ ಇಬ್ಬರು ಆಟಗಾರರು ಕರೋನಾದ ಹಿಡಿತಕ್ಕೆ ಹೇಗೆ ಬಂದರು ಎಂಬುದು ಈಗ ಸ್ಪಷ್ಟವಾಗಿದೆ.
ಕೆನ್ ವಿಲಿಯಮ್ಸನ್ ಗೆ ನಾಯಕತ್ವ ಬಿಟ್ಟುಕೊಟ್ಟ ನಂತರ ಈಗ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರನ್ನು ಭಾನುವಾರ ಮಧ್ಯಾಹ್ನ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ಹಣಾಹಣಿಗೆ ಸನ್ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.