ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದೆ.. ಸದ್ಯದಲ್ಲೇ ಗುಬ್ಬಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ.. ಇಂದು ಸ್ಪೀಕರ್ ಹೆಗಡೆ ಕಾಗೇರಿಗೆ ರಾಜೀನಾಮೆ ಸಲ್ಲಿಸೋ ಸಾಧ್ಯತೆ ಇದೆ..
ಈ ಬಾರಿಯ ಚುನಾವಣೆ ಬೂದಿ ಮುಚ್ಚಿದ ಕೆಂಡ.. ನಾವು ಕೂಡ ಜನರಿಗೆ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ವಿರುದ್ಧ ಚಂದ್ರು ವಾಗ್ದಾಳಿ ನಡೆಸಿದ್ದಾರೆ..
ರಾಹುಲ್ ಗಾಂಧಿಯನ್ನು ಅನರ್ಹತೆ ಮಾಡಿರೋ ಕ್ರಮವನ್ನು ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.. ರಾಹುಲ್ ಗಾಂಧಿ ನೀಡಿರೋ ಹೇಳಿಕೆ ದೊಡ್ಡ ಅಪರಾಧವಲ್ಲ ಎಂದಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ..
ಬೆಂಗಳೂರಿನ ಹೆಬ್ಬಾಳದಲ್ಲಿ ರಾತ್ರಿ ಪಂಚರತ್ನ ರಥಯಾತ್ರೆ ನಡೆಸುವ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು; ಕಸ ವಿಲೇವಾರಿಯಲ್ಲಿ ಅಕ್ರಮ, ರಸ್ತೆ ಗುಂಡಿ ಮುಚ್ಚುವುದರಲ್ಲಿ ಅಕ್ರಮ ಸೇರಿದಂತೆ ಎಲ್ಲ ಯೋಜನೆಗಳಲ್ಲಿ ಅಕ್ರಮ ಎಸಗುತ್ತಿದೆ. ಯೋಜನೆಗಳ ಹೆಸರಿನಲ್ಲಿ ಈ ಸರಕಾರ ಕೊಳ್ಳೆ ಹೊಡೆಯುತ್ತಿದೆ ಎಂದು ದೂರಿದರು.
ಉರಿಗೌಡ, ನಂಜೇಗೌಡ ಹೆಸರು ಕೇವಲ ಕಾಲ್ಪನಿಕ ಕಥೆ. ಮುಂದಿನ ಚುನಾವಣೆಗಾಗಿ ಇದು ಬಿಜೆಪಿಯವರ ಗಿಮಿಕ್ ಅಷ್ಟೇ. ಕಮಲ ಕಲಿಗಳ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ. ಚುನಾವಣೆ ಹತ್ತಿರ ಬಂದಂತೆ ಅವರಿಗೆ ಇದು ನೆನಪಾಗುತ್ತದೆ. ಜಾತಿ ರಾಜಕಾರಣಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇಂತಹ ರಾಜಕೀಯಕ್ಕೆ ರಾಜ್ಯದ ಜನರು ಪಾಠ ಕಲಿಸಬೇಕು ಎಂದು ತುಮಕೂರಿನ ಜೆಡಿಎಸ್ ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ರು.
ಚಾಮರಾಜನಗರ: "ನಾನು ಡೈರೆಕ್ಟ್ ರಾಜಕಾರಣಿ, ಅವೆಲ್ಲಾ ಮುಗಿದ ಅಧ್ಯಾಯ" ಎಂದು ಮಾ.27 ಕ್ಕೆ ಸೋಮಣ್ಣ ಕಾಂಗ್ರೆಸ್ ಗೆ ಸೇರುತ್ತಾರೆ ಎಂಬ ಪೋಸ್ಟ್ ಹರಿದಾಡುತ್ತಿರುವ ಬಗ್ಗೆ ಸಚಿವ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.
ನರೇಂದ್ರ.ಡಿ ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಕಾಕ್ಷಿಯಾಗಿದ್ದು, ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ರಾಮನಗರ ಯುವಜನ ಪ್ರಾಧಿಕಾರದ ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಅವರಿಗೆ ರಾಜಾಜಿನಗರ ವಿಧಾನಸಭಾ ಕ್ಷೇತ್ರ, ಹೂಡಿ ವಿಜಯ ಕುಮಾರ್ ಅವರಿಗೆ ಮಾಲೂರು ಕ್ಷೇತ್ರದಿಂದ, ಸುಬ್ಬಣ್ಣ ಅವರಿಗೆ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ವೈರಲ್. ಚುನಾವಣಾ ರಣರಂಗದ ವೇಳೆಯೇ ಆಡಿಯೋ ಪಾಶುಪತಾಸ್ತ್ರ..! ಹೆಚ್. ಡಿ. ರೇವಣ್ಣ-ಶಿವಲಿಂಗೇಗೌಡ ಆಡಿಯೋ ಫುಲ್ ವೈರಲ್. ಸಾಮಾಜಿಕ ಜಾಲತಾಣಗಳಲ್ಲಿ ದೂರವಾಣಿ ಸಂಭಾಷಣೆ ವೈರಲ್. ಚರ್ಚೆಗೆ ಗ್ರಾಸವಾದ ರೇವಣ್ಣ-ಶಿವಲಿಂಗೇಗೌಡ ಆಡಿಯೋ.
ತಮ್ಮ ನೆಚ್ಚಿನ ನಾಯಕರಿಗೆ ಹಾರ ಹಾಕಿ ಸಂಭ್ರಮ ಪಡುವುದು ಟ್ರೆಂಡ್ ಆಗಿದೆ. ಆದರೆ ಇಲ್ಲೊಂದು ಹಾರದ ಕಥೆ ಶಿಕ್ಷಾರ್ಹ ಅಪರಾಧಗೆ ಗುರಿಯಾಗಿದೆ ಅಷ್ಟಕ್ಕೂ ಹಾರದ ಹಿಂದಿರುವ ರಹಸ್ಯವೇನು ನೋಡೋಣ ಬನ್ನಿ..
ಬೆಂಗಳೂರು : ವಿಧಾನಸಭೆ ಚುಣಾವನೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಪಕ್ಷಾಂತರಗಳ ಪರ್ವವೇ ನಡೆಯುತ್ತಿದೆ. ಬಿಜೆಪಿ ನಾಯಕ ಮಾಜಿ ಸಚಿವ ಬಿಜೆಪಿ ಬಿಟ್ಟು ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ.
Dhruva Narayan : ಸಂಸದ ಹಾಗೂ ರಾಜಕೀಯ ನಾಯಕನಾಗಿದ್ದ, ತಮ್ಮ ಪರಿಶ್ರಮ, ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಅತ್ಯುನ್ನತ ಪಟ್ಟಕ್ಕೇರುವ ಎಲ್ಲ ಗುಣಗಳನ್ನು ಹೊಂದಿದ್ದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ ಅವರ ಬದುಕು ಮದ್ಯದಲ್ಲಿಯೇ ಕೊನೆಯಾಗಿದೆ.
ಎರಡು ಪಕ್ಷಗಳು ಕುಟುಂಬ ರಾಜಕಾರಣ ಮಾಡುತ್ತೇವೆ ಎಂದು ರಾಯಚೂರಲ್ಲಿ ಕಾಂಗ್ರೆಸ್, ಜೆಡಿಎಸ್ ವಿರುದ್ಧ ಶಾಸಕ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.. ಪ್ರಜೆಗಳಿಂದ, ಪ್ರಜೆಗಳಾಗಿ.. ಪ್ರಜೆಗಳಿಗೋಸ್ಕರ ಅನ್ನೋದು ಈಗ ಆದ್ರೆ ಕುಟುಂಬದಿಂದ ಕುಟುಂಬಕ್ಕಾಗಿ ಕುಟುಂಬಕ್ಕೋಸ್ಕರ ಆಗಿದೆ. ದೊಡ್ಡಗೌಡ್ರು ಆದ್ಮೇಲೆ ಚಿಕ್ಕಗೌಡ್ರು, ಅವರು ಆದ್ಮೇಲೆ ಮರಿಗೌಡ್ರು ಎಂದು ಜೆಡಿಎಸ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.