ಧಾರವಾಡದಲ್ಲಿ ಅತಿಥಿ ಉಪನ್ಯಾಸಕರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿಗೆ ಕುಮಾರಸ್ವಾಮಿ ಅವರು ಬೆಂಬಲ ಸೂಚಿಸಲು ಬಂದಿದ್ದ ವೇಳೆ ಪಿಎಸ್ಐ ಅಕ್ರಮ ನೇಮಕಾತಿ ವಿರುದ್ಧ ಧ್ವನಿ ಎತ್ತಿದ ಅಭ್ಯರ್ಥಿಗಳು ಹಾಗೂ ಈಗಾಗಲೇ ಪರೀಕ್ಷೆ ಬರೆದು ಪಾಸಾದ ಅಭ್ಯರ್ಥಿಗಳು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದರು
ಪಿಎಸ್ಐ ಹುದ್ದೆಗಳ ನೇಮಕಾತಿ, ಮತ್ತೊಬ್ಬ ಕಿಂಗ್ಪಿನ್ ಅರೆಸ್ಟ್
ಕಿಂಗ್ಪಿನ್ R.D ಪಾಟೀಲ್ ಅಳಿಯ ಪ್ರಕಾಶ್ ಸಿಐಡಿ ವಶಕ್ಕೆ
ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಪ್ರಭುಗೆ ಬ್ಲೂಟೂತ್ ನೀಡಿದ್ದ ಪ್ರಕಾಶ್
“ಬಿಜೆಪಿ ನಾಯಕರೇ ಆರೋಪಿಗಳಾಗಿರುವ ಹಗರಣವನ್ನು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಿಐಡಿಯಿಂದಲೇ ತನಿಖೆ ಮಾಡಿಸುವುದು ಹಾಸ್ಯಾಸ್ಪದ. ಈ ತನಿಖೆಗೆ ಯಾವ ಬೆಲೆಯೂ ಇಲ್ಲ. ಅನುಮಾನಾಸ್ಪದ ಅಭ್ಯರ್ಥಿಯ ತನಿಖೆ ವೇಳೆ ಬಿಜೆಪಿ ನಾಯಕರ ಹೆಸರು ಕೇಳಿಬಂದರೆ, ಆ ಅಭ್ಯರ್ಥಿಯ ವಿಚಾರಣೆಯನ್ನೇ ಕೈಬಿಡಲಾಗುತ್ತಿದೆ".
PSI ನೇಮಕಾತಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಪಿಎಸ್ಐ ಅಭ್ಯರ್ಥಿ ಪೂಜಾ ಕಣ್ಣೀರಿಟ್ಟಿದ್ದಾರೆ.. ಮರು ಪರೀಕ್ಷೆ ನಡೆಯುತ್ತೆ ಅನ್ನೋ ಕನಸೂ ಕಂಡಿರಲಿಲ್ಲ. ಕೂಡಲೇ ಸರ್ಕಾರ ನಿರ್ಧಾರ ಬದಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಿಎಸ್ಐ ನೇಮಕಾತಿ ರದ್ದು ಮಾಡಿರೋದ್ರಿಂದ ನಮ್ಮ ಮನಸ್ಸಿಗೆ ನೋವಾಗಿದೆ. ಕುಟುಂಬಸ್ಥರು ಆಘಾತಗೊಂಡಿದ್ದಾರೆ ಎಂದು ಪಿಎಸ್ಐ ಅಭ್ಯರ್ಥಿ ಸಂದೀಪ್ ಅಳಲು ತೋಡಿಕೊಂಡಿದ್ದಾರೆ.. ನ್ಯಾಯಯುತವಾಗಿ ಪರೀಕ್ಷೆ ಬರೆದವರಿಗೆ ನೇಮಕಾತಿ ಆದೇಶ ಪ್ರತಿ ನೀಡಿ. ದಯಮಾಡಿ ಮರು ಪರೀಕ್ಷೆ ನಡೆಸಬೇಡಿ.. ಕೈ ಮುಗಿದು ಬೇಡಿಕೊಳ್ಳುತ್ತೇನೆ ಎಂದು ನೋವಿನಿಂದ ನುಡಿದಿದ್ದಾರೆ.
ನಾವು ಕೂಲಿ ಮಾಡ್ತಿರೋದು. ನನ್ನ ಮಗಳನ್ನು ಕಷ್ಟಪಟ್ಟು ಓದ್ಸಿದ್ದೀವಿ.. ಇನ್ನು ಓದ್ಸೋದಕ್ಕೆ ನಮಗೆ ಶಕ್ತಿಯಿಲ್ಲ ಎಂದು ಪಿಎಸ್ಐ ಆಗಿ ಆಯ್ಕೆಯಾದ ಅಭ್ಯರ್ಥಿಯೊಬ್ಬರ ತಾಯಿ ಕಣ್ಣೀರಿಟ್ಟಿದ್ದಾರೆ.. ಕಷ್ಟ ಪಟ್ಟು ಓದಿ ಪರೀಕ್ಷೆ ಪಾಸ್ ಆಗಿದ್ದಾಳೆ. ನನ್ನ ಮಗಳಿಗೆ ನ್ಯಾಯ ಕೊಡ್ಸಿ ಅಂತಾ ಮನವಿ ಮಾಡಿದ್ದಾರೆ.
ಕನಕಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಕರಣದ ತನಿಖೆ ನಡೆಸುವಾಗ ಪಕ್ಷ ಭೇದ ಬೇಡ. ಯಾರೇ ತಪ್ಪಿತಸ್ಥರಿದ್ದರೂ ಸೂಕ್ತ ತನಿಖೆ ಕೈಗೊಂಡು ಶಿಕ್ಷೆ ನೀಡಬೇಕು ಎಂದರು.
ಇಂದು ಸಿಐಡಿ ಕಚೇರಿಗೆ ಆಟೋದಲ್ಲಿ ಆಗಮಿಸಿದ ಮಂಜುನಾಥ್ "ನನಗೆ ನನಗೆ ಆರೋಗ್ಯ ಸರಿಯಿರಲಿಲ್ಲ. ಹಾಗಾಗಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಇದೀಗ ಆಗಮಿಸಿ ಶರಣಾಗಿದ್ದೇನೆ" ಎಂದಿದ್ದಾರೆ.
ಈ ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಮೂಲಕ ಬಂದಿದ್ದ ಅಭ್ಯರ್ಥಿ ಈತ ಎಂದು ತಿಳಿದುಬಂದಿದೆ. ಸುನೀಲ್ನನ್ನು ಬೆಂಗಳೂರಿನಿಂದ ಕಲಬುರಗಿಗೆ ಕರೆತಂದಿರುವ ತನಿಖಾಧಿಕಾರಿಗಳ ತಂಡ ಸದ್ಯ ವಿಚಾರಣೆ ನಡೆಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.