ಇಲಿ, ನೊಣ, ಸೊಳ್ಳೆ ಬಿಡಿ ಇವುಗಳ ನಂತರ ಮನೆಯಲ್ಲಿ ಗೂಡು ಕಟ್ಟುತ್ತಾ ತಲೆ ನೋವು ಹೆಚ್ಚು ಮಾಡೋದು ಜೇಡದ ಹುಳು. ಎಷ್ಟೇ ಭಾರಿ ನಾಶ ಮಾಡಿದರೂ, ಈ ಹುಳುಗಳು ಪದೇ ಪದೇ ಗೂಡು ಕಟ್ಟುತ್ತಲೇ ಇರುತ್ತವೆ. ಹಾಗಾದರೆ ಈ ಜೇಡಗಳನ್ನು ತಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
Vastu Tips: ಸಾಮಾನ್ಯವಾಗಿ ಜನರು ತಮ್ಮ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಾರೆ. ಇದಕ್ಕಾಗಿ ಪ್ರತಿನಿತ್ಯ ಗುಡಿಸುವುದು ಮತ್ತು ಒರೆಸುವುದು ಮಾಡುತ್ತಾರೆ. ಆದರೆ ಕೆಲವೊಮ್ಮೆ ತಿಳಿಯದೆ ಕೆಲವು ವಿಷಯಗಳು ಅಜ್ಞಾನದಿಂದ ತಪ್ಪಿಸಿಕೊಳ್ಳುತ್ತವೆ. ಇವುಗಳಲ್ಲಿ ಜೇಡರ ಬಲೆಯೂ ಒಂದು. ಜೇಡರ ಬಲೆಗಳು ಗೋಡೆಯ ಮೂಲೆಯಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವೊಂದು ಬಾರಿ ಕಣ್ಣಿಗೆ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಕಾಣುವುದು ಇಲ್ಲ. ಜೇಡರ ಬಲೆಗಳು ಕೆಟ್ಟದಾಗಿ ಕಾಣುವುದಲ್ಲದೆ, ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಪರಿಗಣಿಸಲಾಗಿದೆ. ಈ ಜೇಡರ ಬಲೆಗಳು ಕಾಣಿಸಿಕೊಂಡರೆ ತಕ್ಷಣ ಸ್ವಚ್ಛಗೊಳಿಸಬೇಕು ಇಲ್ಲದಿದ್ದರೆ ಮನೆಯಲ್ಲಿ ವಾಸ್ತು ದೋಷಗಳು ಕಾಣಿಸಿಕೊಳ್ಳುತ್ತವೆ.
ಸಾಮಾನ್ಯವಾಗಿ, ಜನ ತಮ್ಮ ಮನೆಯ ಕೆಳಗಿನ ಭಾಗವನ್ನು ಸ್ವಚ್ಛಗೊಳಿಸುತ್ತಾರೆ, ಆದರೆ ಮೇಲಿನ ಭಾಗವನ್ನು ಸ್ವಚ್ಛಗೊಳಿಸುವುದಿಲ್ಲ. ಆದ್ದರಿಂದ ಇಂತಹ ಭಾಗಗಳಲ್ಲಿ ಜೇಡ ಹುಳು ಬಲೆ ಕಟ್ಟುತ್ತವೆ. ಮನೆಯಲ್ಲಿ ಈ ಬಲೆ ಕಟ್ಟುವುದು ತುಂಬಾ ಅಶುಭವೆಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.