Earthquake : ದ್ವೀಪ ರಾಷ್ಟ್ರದ ಬಂದರು ಆದಂತಹ ಲೆನಾಕೆಲ್ ತೀರದಲ್ಲಿ 1.5 ಅಡಿಯಷ್ಟು ಅಲೆಗಳು ಮತ್ತು ಫಿಜಿ, ಪಪುವಾ, ನ್ಯೂಗಿನಿಯಾ, ಗುವಾಮ್ ಮತ್ತು ಇತರ ಪಿಸಿಫಿಕ್ ದ್ವೀಪಗಳಿಗೆ ಸಣ್ಣ ಅಲೆಗಳು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೆಂದ್ರವು ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಚೇರಿಯು ಕರಾವಳಿ ಪ್ರದೇಶದಿಂದ ಸುರಕ್ಷಿತ ಪ್ರದೇಶಗಳಿಗೆ ಹೋಗುವಂತೆ ಸೂಚನೆಯನ್ನು ನೀಡಿದೆ. ಜೊತೆಗೆ ಅಧಿಕಾರಿಗಳು ಸಾರ್ವಜನಿಕರು ರೇಡಿಯೋ ಸಂದೇಶಗಳನ್ನು ಆಲಿಸುವಂತೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
Pacific Tsunami Warning Center issues tsunami alert for Vanuatu, New Caledonia and Fiji after 7.7 quake. No threat to other regions pic.twitter.com/joDSUeVMpQ
— BNO News (@BNONews) May 19, 2023
ಇದನ್ನೂ ಓದಿ-ʼಇದು ನೋಟ್ ಬ್ಯಾನ್ ಅಲ್ಲʼ : 2000 ರೂ. ನೋಟಿನ ಕುರಿತು ನಿಮ್ಮ ತಲೆಯಲ್ಲಿರುವ ಪ್ರಶ್ನೆಗೆ ಉತ್ತರ ಇಲ್ಲಿವೆ...!
ಫಿಜಿಯ ನೈಋತ್ಯಕ್ಕೆ, ನ್ಯೂಜಿಲೆಂಡ್ ನ ಉತ್ತರಕ್ಕೆ ಹಾಗು ಆಸ್ಟ್ರೇಲಿಯಾದ ಪೂರ್ವದಲ್ಲಿ 10ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕಾದ ಭೂವಿಜ್ಞಾನ ಇಲಾಖೆ ತಿಳಿಸಿದೆ. ಇದು ನ್ಯೂ ಕ್ಯಾಲೆಡೋನಿಯಾ, ಫಿಜಿ ಮತ್ತು ವನವಾಟು ಪ್ರದೇಶಗಳಿಗೆ ಸಂಭವನೀಯ ಸುನಾಮಿಯ ಎಚ್ಚರಿಕೆಯನ್ನು ಸೃಷ್ಟಿಸಿದೆ ಎಂದು ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ.
ಫಿಜಿ, ವನವಾಟು ಮತ್ತು ನ್ಯೂ ಕಯಾಲೆಡೋನಿಯಾಕ್ಕೆ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದ್ದು, ಅಸ್ಟ್ರೇಲಿಯಾ ಹವಾಮಾನ ಇಲಾಖೆ ತನ್ನ ಪೂರ್ವ ಕರಾವಳಿಯಲ್ಲಿರುವ ಲಾರ್ಡ್ ಹೋವ್ ದ್ವೀಪಕ್ಕೆ ಭೀಕರ ಅಪಾಯವಿದೆ ಎಂದು ವರದಿ ಮಾಡಿದೆ.
ಇದನ್ನೂ ಓದಿ-Rain Alert: ಮುಂದಿನ 24 ಗಂಟೆಯಲ್ಲಿ ಈ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಮುನ್ಸೂಚನೆ ನೀಡಿದ ಇಲಾಖೆ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ