ಗೃಹ ಸಚಿವ ಡಾ.ಜಿ.ಪರಮೇಶ್ವರ ತವರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೋಂದು ಸಣ್ಣ ಮಳೆ ಬಂದರೆ ಸೋರುವ ಪರಿಸ್ಥಿತಿಯಲ್ಲಿದೆ. ತುಮಕೂರು ನಗರದಲ್ಲಿನ ಜಯನಗರ ಪೊಲೀಸ್ ಠಾಣೆಯ ಪರಿಸ್ಥಿತಿ ಕಂಡು ಸಾರ್ವಜನಿಕರೆ ಇಂದೆಂಥ ಸ್ಥಿತಿ ಎಂದು ಮರುಗಿದ್ದಾರೆ. ಸದ್ಯ ಸುಸಜ್ಜಿತವಾದ ಕಟ್ಟಡವಿಲ್ಲದೆ ನಗರದ ಜಯನಗರ ಪೊಲೀಸ್ ಠಾಣೆ ಸೋರುವ ಕಟ್ಟಡದಲ್ಲಿ ನಡೆಯುತ್ತಿದೆ. ಸದ್ಯ ಮಳೆಯ ನೀರು ಠಾಣೆಯ ಒಳಗೆ ನಿಲ್ಲುವಂತಾಗಿದೆ. ಠಾಣೆಯಲ್ಲಿನ ಕಂಪ್ಯೂಟರ್ಗಳು, ಯುಪಿಎಸ್ ಬ್ಯಾಟರಿಗಳು ಸೇರಿದಂತೆ ಕಡತಗಳು ಮಳೆ ನೀರಿಗೆ ತೊಯ್ದು ಹೋಗುವಂತಾಗಿದೆ.
ತುಮಕೂರು ಜಿಲ್ಲೆಯಲ್ಲಿ ತಡರಾತ್ರಿ ಮಳೆರಾಯನ ಆರ್ಭಟ
ಅಂತರಸನಹಳ್ಳಿ ಅಂಡರ್ ಪಾಸ್ ಜಲಾವೃತ.. ಸಂಕಷ್ಟ
ಪಾವಗಡ, ಮಧುಗಿರಿ, ಕೊರಟಗೆರೆ ಪ್ರಯಾಣಿಕರ ಪರದಾಟ
ಹೆದ್ದಾರಿ ನಾಲ್ಕರಲ್ಲಿ ಅಡ್ಡಲಾಗಿ ನಿರ್ಮಿಸಿರುವ ಅಂಡರ್ ಪಾಸ್
ಅಂಡರ್ ಪಾಸ್ ನಿಂದ ಹೊರಗೆ ಹೋಗದ ಮಳೆ ನೀರು
ಕಲ್ಪತರು ನಾಡು ತುಮಕೂರಿನಲ್ಲಿ ವರುಣನ ಅಬ್ಬರ ಕಡಿಮೆ ಆಗ್ತಾನೇ ಇಲ್ಲ. ಜಿಲ್ಲೆಯ ತಿಪಟೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ತುಂಬಿ ಹರಿದಿದೆ. ಕಳೆದ ಕೆಲವು ದಿನಗಳಿಂದ ಮಾಯವಾಗಿದ್ದ ಮಳೆರಾಯ ತುಮಕೂರಿನ ತಿಪಟೂರಿನಲ್ಲಿ ಅಬ್ಬರಿಸಿ ಬೊಬ್ಬರಿದಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.