ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿರುದ್ಧ ಸಚಿವ ಉಮೇಶ್ ಕತ್ತಿ ಗುಡುಗಿದ್ದಾರೆ. ಈ ಕ್ಷೇತ್ರದ ಎಂಎಲ್ಎಗೆ ನಮಸ್ಕಾರ ಮಾಡಿದ್ರೆ ನಮಸ್ಕಾರ ಮಾಡಲ್ಲ. ಈ ಕ್ಷೇತ್ರದಲ್ಲಿ ಈ ಶಾಸಕರಿಂದ ಯಾವ ಅಭಿವೃದ್ಧಿಯಂತೂ ಆಗಿಲ್ಲ. ಅವರನ್ನು ಈ ಬಾರಿ ಮನೆಗೆ ಕಳಿಸಿಯೇ ತೀರುತ್ತೇನೆ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ನಾನು ಕೂಡಾ ಸಿಎಂ ಆಕಾಂಕ್ಷಿ ಇರೋದು ನಿಜ. ಆದರೆ ಬೊಮ್ಮಾಯಿ ಅವರನ್ನು ಇಳಿಸಿ ನಾನು ಸಿಎಂ ಆಗಲ್ಲ. ನನಗೆ ಇನ್ನೂ ಅವಕಾಶ ಇದೆ. ಅಷ್ಟರಲ್ಲಿ ಸಿಎಂ ಆಗ್ತೀನಿ ಎಂದು ಉಮೇಶ್ ಕತ್ತಿ ತಮ್ಮ ವರಸೆ ತೋರಿಸಿದ್ದಾರೆ.
ಸಚಿವ ಉಮೇಶ್ ಕತ್ತಿ ಮೂರ್ಖ.. ಕನ್ನಡದ ದ್ರೋಹಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಏಕೀಕರಣ ಆಗಿದ್ದು ಯಾವ ಉದ್ದೇಶಕ್ಕೆ ಎಂದು ಪ್ರಶ್ನಿಸಿದ್ದಾರೆ.
ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗನ್ನು ಎತ್ತಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ 'ಪದೇ ಪದೇ ಪ್ರತ್ಯೇಕ ರಾಜ್ಯದ ಮಾತಾನಾಡುವ ಸಚಿವ ಉಮೇಶ್ ಕತ್ತಿಯವರು ನಾಡದ್ರೋಹಿಯಲ್ಲದೆ ಮತ್ತೇನು.? ಉಮೇಶ್ ಕತ್ತಿಯವರಿಗೆ ಕರ್ನಾಟಕದಲ್ಲಿ ಇರಲು ಸಂಕಟವಾದರೆ ರಾಜ್ಯ ಬಿಟ್ಟು ತೊಲಗಲಿ" ಎಂದು ಹೇಳಿದ್ದಾರೆ.
ಮಾಸ್ಕ ಧರಿಸಲ್ಲ ಎಂದು ಉದ್ದಟತನದ ಹೇಳಿಕೆ ನೀಡಿದ್ದ ಸಚಿವ ಉಮೇಶ್ ಕತ್ತಿ ವಿರುದ್ಧ ಹರಿಹಾಯ್ದಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ 'ಕತ್ತಿ ಮಂತ್ರಿ ಆಗಲಿಕ್ಕೆ ಯೋಗ್ಯರಲ್ಲ' ಎಂದು ಅವರು ಕಿಡಿ ಕಾರಿದ್ದಾರೆ.
ಸಿಎಂ ಬೊಮ್ಮಾಯಿ ಅವರು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಉಪಸ್ಥಿತರಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.