Solar Storm : ಸೂರ್ಯನ ಮೇಲೆ ಸೌರ ಬಿರುಗಾಳಿ, ಭೂಮಿಯ ಮೇಲೆ ಇಂಟರ್ನೆಟ್ ಗೆ ಭಾರಿ ಅಪಾಯ, ವಿಜ್ಞಾನಿಗಳ ಅಪಾಯದ ಲೆಕ್ಕಾಚಾರ ಇಲ್ಲಿದೆ

Impact Of Solar Storm On Internet - ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಪ್ರಕಾರ, ಸಾಮಾನ್ಯವಾಗಿ, ಸೌರ ಬಿರುಗಾಳಿಗಳು ಗಂಟೆಗೆ 10-20 ಮಿಲಿಯನ್ ಮೈಲುಗಳ ವೇಗದಲ್ಲಿ ಚಲಿಸುತ್ತವೆ. ಅವು ಸೂರ್ಯನ ಕರೋನಲ್ ರಂಧ್ರಗಳಿಂದ ಏಳುತ್ತವೆ ಎಂದು ಹೇಳಿದ್ದಾರೆ. 

Written by - Nitin Tabib | Last Updated : Sep 10, 2021, 07:09 PM IST
  • ಸೂರ್ಯನ ಮೇಲೆ ಏರುವ ಬಿರುಗಾಳಿಗಳ ಪರಿಣಾಮ ಉಪಗ್ರಹ ಆಧಾರಿತ ತಂತ್ರಜ್ಞಾನದ ಮೇಲೆ ಆಗಬಹುದು.
  • ಸೌರ ಗಾಳಿಯಿಂದಾಗಿ, ಭೂಮಿಯ ಹೊರಗಿನ ವಾತಾವರಣವನ್ನು ಬಿಸಿಯಾಗಬಹುದು.
  • ಸೌರ ಬಿರುಗಾಳಿಗಳು ಗಂಟೆಗೆ 10-20 ಮಿಲಿಯನ್ ಮೈಲುಗಳ ವೇಗದಲ್ಲಿ ಚಲಿಸುತ್ತವೆ.
Solar Storm : ಸೂರ್ಯನ ಮೇಲೆ ಸೌರ ಬಿರುಗಾಳಿ, ಭೂಮಿಯ ಮೇಲೆ ಇಂಟರ್ನೆಟ್ ಗೆ ಭಾರಿ ಅಪಾಯ, ವಿಜ್ಞಾನಿಗಳ ಅಪಾಯದ ಲೆಕ್ಕಾಚಾರ ಇಲ್ಲಿದೆ title=
Massive Solar Storm Likely To Hit Earth(Representational Image)

Impact Of Solar Storm On Internet - ಭೂಮಿಯ (Earth) ಕಾಂತೀಯ ಕ್ಷೇತ್ರವು ಸೂರ್ಯನಿಂದ ಬರುವ ಅಪಾಯಕಾರಿ ವಿಕಿರಣಗಳಿಂದ ಮನುಷ್ಯರನ್ನು ರಕ್ಷಿಸುತ್ತದೆ, ಆದರೆ ವಿಜ್ಞಾನಿಗಳು ಸೂರ್ಯನ (Sun) ಮೇಲೆ ಬಿರುಗಾಳಿಯ (Solar Storm) ಪರಿಣಾಮವು ಉಪಗ್ರಹ ತಂತ್ರಜ್ಞಾನದ ಮೇಲೆ ಆಗಬಹುದು ಎಂದು ಹೇಳುತ್ತಾರೆ. ಸೌರ ಗಾಳಿಯಿಂದಾಗಿ, ಭೂಮಿಯ ಹೊರಗಿನ ವಾತಾವರಣವು ಬಿಸಿಯಾಗಬಹುದು ಮತ್ತು ಇದು ಉಪಗ್ರಹಗಳ ಮೇಲೆ ವಿಪರೀತ ಪರಿಣಾಮ ಬೀರಬಹುದು.

ಈ ಸೌರ ಬಿರುಗಾಳಿ ಹೇಗೆ ಸೃಷ್ಟಿಯಾಗುತ್ತವೆ?
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ (NASA) ಪ್ರಕಾರ, ಸಾಮಾನ್ಯವಾಗಿ, ಸೌರ ಬಿರುಗಾಳಿಗಳು ಗಂಟೆಗೆ 10-20 ಮಿಲಿಯನ್ ಮೈಲುಗಳ ವೇಗದಲ್ಲಿ ಚಲಿಸುತ್ತವೆ. ಇವು ಸೂರ್ಯನ ಕರೋನಲ್ ರಂಧ್ರಗಳಿಂದ ಏಳುತ್ತವೆ. ಸೂರ್ಯನಲ್ಲಿ ನಡೆಯುವ  Coronal Mass Ejection ಸಹ ಅವುಗಳಿಂದ ಹೊರಬರುತ್ತವೆ.

ಇದೆ ವೇಳೆ ಸೌರ ಮಾರುತಗಳ ಜೊತೆಗೆ ನಮ್ಮ ಹತ್ತಿರದ ನಕ್ಷತ್ರದಿಂದ ಹೊರಹೊಮ್ಮುವ ವಿಕಿರಣಗಳು  ಚಾರ್ಜ್ಡ್ ಕಣಗಳನ್ನು ಭೂಮಿಗೆ ತರುತ್ತದೆ. ಈ ಚಾರ್ಜ್ಡ್ ಕಣಗಳು ಬಾಹ್ಯಾಕಾಶದಲ್ಲಿ ಸಂಚರಿಸಿ ಭೂಮಿಯ ಕಡೆಗೆ ಅತಿ ಹೆಚ್ಚಿನ ವೇಗದಲ್ಲಿ ಬರುತ್ತವೆ. ಅವು ಭೂಮಿಯ ಕಾಂತಕ್ಷೇತ್ರದೊಂದಿಗೆ ಡಿಕ್ಕಿ ಹೊಡೆದಾಗ, ಶಕ್ತಿಯು ಬೆಳಕಿನ ರೂಪದಲ್ಲಿ ಬಿಡುಗಡೆಯಾಗುತ್ತದೆ. ಇದನ್ನು Aurora ಎಂದು ಕರೆಯಲಾಗುತ್ತದೆ.

ಭೂಮಿಯ ಹೊರಗಿನ ವಾಯುಮಂಡಲ ಬಿಸಿಯಾಗಲಿದೆ
ಸೂರ್ಯನ ಮೇಲೆ ಏಳುವ ಬಿರುಗಾಳಿಗಳ ಪರಿಣಾಮ ಉಪಗ್ರಹ ಆಧಾರಿತ ತಂತ್ರಜ್ಞಾನದ (Internet) ಮೇಲೆ ಬೀಳುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೌರ ಗಾಳಿಯಿಂದಾಗಿ, ಭೂಮಿಯ ಹೊರಗಿನ ವಾತಾವರಣವನ್ನು ಬಿಸಿಯಾಗಬಹುದು., ಇದು ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ-2008 GO20 Asteroid: ನಾಳೆ ಭೂಮಿಯ ತುಂಬಾ ಸನೀಹದಿಂದ ಹಾದುಹೋಗಲಿದೆ ಈ ಕ್ಷುದ್ರಗ್ರಹ, ಭೂಮಿಯ ಮೇಲೆ ಏನು ಪ್ರಭಾವ?

ಬಿರುಗಾಳಿಯ ಪ್ರಭಾವ
ಇದು ಜಿಪಿಎಸ್ ನ್ಯಾವಿಗೇಷನ್, ಮೊಬೈಲ್ ಫೋನ್ ಸಿಗ್ನಲ್ ಮತ್ತು ಸ್ಯಾಟಲೈಟ್ ಟಿವಿಯಲ್ಲಿ ಅಡಚಣೆ ಉಂಟುಮಾಡಬಹುದು. ಇದೇ ವೇಳೆ, ವಿದ್ಯುತ್ ತಂತಿಗಳಲ್ಲಿನ ಪ್ರವಾಹವು ಹೆಚ್ಚಾಗಬಹುದು. ಈ ಕಾರಣದಿಂದಾಗಿ ಟ್ರಾನ್ಸ್ಫಾರ್ಮರ್ ಕೂಡ ಸ್ಫೋಟಿಸಬಹುದು. 1859 ಮತ್ತು 1921 ರಲ್ಲಿ, ಇಂತಹ ಬಿರುಗಾಳಿಗಳ ಪರಿಣಾಮವು ಭೂಮಿಯ ಮೇಲೆ ಕಾಣಿಸಿಕೊಂಡಿತ್ತು. 1859 ರಲ್ಲಿ, ಅತ್ಯಂತ ಶಕ್ತಿಶಾಲಿ ಭೂಕಾಂತೀಯ ಚಂಡಮಾರುತವು ಯುರೋಪ್ ಮತ್ತು ಅಮೆರಿಕದಲ್ಲಿ ಟೆಲಿಗ್ರಾಫ್ ಜಾಲಗಳನ್ನು ನಾಶಪಪಡಿಸಿತ್ತು. ಇದರ ಹೊರತಾಗಿ, ಕಡಿಮೆ ತೀವ್ರತೆಯ ಸೌರ ಚಂಡಮಾರುತವು 1989 ರಲ್ಲಿ ಬಂದಿತ್ತು.

ಇದನ್ನೂ ಓದಿ-NASA Study: 9 ವರ್ಷಗಳ ಬಳಿಕ ಚಂದ್ರನ ಸ್ಥಿತಿಯಲ್ಲಿ ಬದಲಾವಣೆ, ಇಡೀ ವಿಶ್ವಕ್ಕೆ ಎದುರಾಗಲಿದೆ ಭಾರಿ ಅಪಾಯ!

ಪರಿಣಾಮ ಭೀತಿ ಹುಟ್ಟಿಸುವಂತಿದೆ
ವಿಜ್ಞಾನಿಗಳ ಪ್ರಕಾರ, ಎಲೆಕ್ಟ್ರಿಕಲ್ ಗ್ರಿಡ್ ಮತ್ತು ಇಂಟರ್ನೆಟ್ ಮೇಲೆ ಇದು ಪರಿಣಾಮ ಬೀರುವ ಮೂಲಕ ಈ ಸೌರಗಾಳಿಯ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು.  Solar Superstorms: Planning for an Internet Apocalypse ಶೀರ್ಷಿಕೆ ಇರುವ ಒಂದು  ಸಂಶೋಧನಾ ಪ್ರಬಂಧದ ಪ್ರಕಾರ, ಈ ಬಾರಿ ಸೌರ ಚಂಡಮಾರುತದ ಫಲಿತಾಂಶವು ಹಿಂದಿನ ಚಂಡಮಾರುತಕ್ಕಿಂತ ಭೀಕರವಾಗಿರಬಹುದು. ಸೌರ ಚಂಡಮಾರುತ ಸಂಭವಿಸಿದಾಗ, ಅದು ಬಾಹ್ಯಾಕಾಶದಲ್ಲಿ ಸುತ್ತುತ್ತಿರುವ ನಮ್ಮ ಉಪಗ್ರಹಗಳ ಮೇಲೆ  ಪರಿಣಾಮ ಬೀರಬಹುದು ಮತ್ತು ಈ ಕಾರಣದಿಂದಾಗಿ ನಮ್ಮ ಸಂವಹನ ಮತ್ತು ಜಿಪಿಎಸ್ ವ್ಯವಸ್ಥೆಗಳು ಸ್ಥಗಿತಗೊಳ್ಳಬಹುದು.

ಇದನ್ನೂ ಓದಿ-Sound Of Universe:ಬ್ರಹ್ಮಾಂಡದ ಹಮ್ಮಿಂಗ್ ಸೌಂಡ್ ವಿಡಿಯೋ ನೀವೂ ಈ ಮೊದಲು ನೋಡಿದ್ದೀರಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News