Flipkart Diwali Sale: ಕೇವಲ 599 ರೂಪಾಯಿಗೆ ಖರೀದಿಸಿ ನೋಕಿಯಾ ಸ್ಮಾರ್ಟ್ ಫೋನ್.!

Flipkart Diwali Sale: ಅಕ್ಟೋಬರ್ 16 ರವರೆಗೆ ನಡೆಯುವ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಅನೇಕ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.

Written by - Ranjitha R K | Last Updated : Oct 11, 2022, 02:16 PM IST
  • ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಸೇಲ್ ಪ್ರಾರಂಭ
  • ಇಂದಿನಿಂದ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಪ್ರಾರಂಭ
  • ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ
 Flipkart Diwali Sale: ಕೇವಲ 599 ರೂಪಾಯಿಗೆ ಖರೀದಿಸಿ ನೋಕಿಯಾ ಸ್ಮಾರ್ಟ್ ಫೋನ್.!  title=
Nokia C21 Plus Flipkart Offer (file photo)

Flipkart Diwali Sale: ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಸೇಲ್ ಪ್ರಾರಂಭವಾಗಿದೆ. ಇಂದಿನಿಂದ ಅಂದರೆ ಅಕ್ಟೋಬರ್ 11, 2022 ರಿಂದ ಫ್ಲಿಪ್‌ಕಾರ್ಟ್ ದೀಪಾ
ವಳಿ ಸೇಲ್ ಪ್ರಾರಂಭಿಸಲಾಗಿದೆ. ಅಕ್ಟೋಬರ್ 16 ರವರೆಗೆ ನಡೆಯುವ ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಅನೇಕ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.  ಈ ಸೇಲ್ ನಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಅನ್ನು ಕೇವಲ 599 ರೂಪಾಯಿಗಳಿಗೆ ಖರೀದಿಸಬಹುದು. 

ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ :
ಫ್ಲಿಪ್‌ಕಾರ್ಟ್ ದೀಪಾವಳಿ  ಸೇಲ್ ನಲ್ಲಿ ನೋಕಿಯಾದ್ 4ಜಿ  ಸ್ಮಾರ್ಟ್‌ಫೋನ್, ನೋಕಿಯಾ ಸಿ21 ಪ್ಲಸ್ ಅನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ನ ಮಾರುಕಟ್ಟೆ ಬೆಲೆ  11,999 ರೂಪಾಯಿ. ಆದರೆ ಈ ಸೇಲ್ ನಲ್ಲಿ ಈ ಫೋನ್ ಅನ್ನು  11,049 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಡೀಲ್‌ನಲ್ಲಿ ಅನೇಕ ಬ್ಯಾಂಕ್ ಕೊಡುಗೆಗಳನ್ನು ಸಹ ಸೇರಿಸಲಾಗಿದೆ.  

ಇದನ್ನೂ ಓದಿ : 8 ಸಾವಿರ ರೂಪಾಯಿ ಬೆಲೆಯ ಅತ್ಯದ್ಬುತ ಸ್ಮಾರ್ಟ್ ಫೋನ್ ಬಿಡುಗಡೆ .!

599 ರುಪಾಯಿಗೆ ಸ್ಮಾರ್ಟ್‌ಫೋನ್ :  
ನೋಕಿಯಾ ಸಿ21 ಪ್ಲಸ್ ಅನ್ನು  599 ರೂಪಾಯಿಗೆ  ಖರೀದಿಸಬೇಕಾದರೆ,  ಡೀಲ್‌ನಲ್ಲಿ ನೀಡಲಾಗುತ್ತಿರುವ ವಿನಿಮಯ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬೇಕು. ಹಳೆಯ ಫೋನ್‌ಗೆ ಬದಲಾಗಿ ಈ ಫೋನ್ ಅನ್ನು ಖರೀದಿಸುವ ಮೂಲಕ,  10,450 ರೂ.ವರೆಗೆ  ಉಳಿಸಬಹುದು. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು  ಪಡೆಯುವುದು ಸಾಧ್ಯವಾದರೆ ಈ ಫೋನ್‌ ಅನ್ನು 599 ರೂಪಾಯಿಗೆ ಖರೀದಿಸುವುದು ಸಾಧ್ಯವಾಗುತ್ತದೆ. 

Nokia C21 Plus ನ ವೈಶಿಷ್ಟ್ಯಗಳು :
ನೋಕಿಯಾ ಸಿ21 ಪ್ಲಸ್ ,  3GB RAM ಮತ್ತು 32GB ಸ್ಟೋರೇಜ್ ನೊಂದಿಗೆ ಬರುತ್ತದೆ. ಆಕ್ಟಾ ಕೋರ್ 1.6GHz ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು 13MP ಪ್ರೈಮರಿ ಸೆನ್ಸಾರ್ ಮತ್ತು 2MP ಸೆಕೆಂಡರಿ ಸೆನ್ಸಾರ್ ಒಳಗೊಂಡಿದೆ. ಈ ಫೋನ್ 5MP ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ. ನೋಕಿಯಾ ಸಿ21 ಪ್ಲಸ್ ನಲ್ಲಿ  6.57-ಇಂಚಿನ ಡಿಸ್ಪ್ಲೇ ಜೊತೆಗೆ 5050mAh ಬ್ಯಾಟರಿ, ಡ್ಯುಯಲ್ ಸಿಮ್ ಸೌಲಭ್ಯ ಮತ್ತು ಆಡಿಯೋ ಜಾಕ್ ಅನ್ನು ನೀಡಲಾಗಿದೆ. 

ಇದನ್ನೂ ಓದಿ : ವಾಟ್ಸಾಪ್ನಲ್ಲಿ ವಿದ್ಯುತ್ ಬಿಲ್: ವಾಟ್ಸಾಪ್ನಲ್ಲಿ ಬರುವ ಇಂತಹ ಸಂದೇಶಗಳ ಬಗ್ಗೆ ಹುಷಾರ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News