Best Selling 7-Seater Car : ಅಗ್ಗದ ಬೆಲೆಯ 7 ಸೀಟರ್ ಕಾರು ಇದು ! ಮಾರಾಟದಲ್ಲಿಯೂ ಇದೇ ನಂಬರ್ ಒಂದು

Best Selling 7-Seater Car- Maruti Ertiga :ಇದು ದೇಶದ ಅತಿ ಹೆಚ್ಚು ಮಾರಾಟವಾಗುವ MPV ಆಗಿದೆ. ಎರ್ಟಿಗಾ 7-ಸೀಟರ್ ಲೇಔಟ್‌ನಲ್ಲಿ ಬರುತ್ತದೆ ಮತ್ತು MPV ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ.

Written by - Ranjitha R K | Last Updated : Jan 9, 2024, 12:16 PM IST
  • ದೊಡ್ಡ ಕುಟುಂಬ ಎಂದರೆ ಕಾರಿನಲ್ಲಿ ಹೆಚ್ಚಿನ ಆಸನ ಸಾಮರ್ಥ್ಯದ ಅಗತ್ಯವಿರುತ್ತದೆ.
  • ಇನ್ನು ದೊಡ್ಡ ಕಾರು ಖರೀದಿಸಬೇಕೆಂದರೆ ಬಜೆಟ್ ಕೂಡಾ ದೊಡ್ಡದಾಗಿರುತ್ತದೆ.
  • ಇದು ದೇಶದ ಅತಿ ಹೆಚ್ಚು ಮಾರಾಟವಾಗುವ MPV ಆಗಿದೆ.
Best Selling 7-Seater Car : ಅಗ್ಗದ ಬೆಲೆಯ  7 ಸೀಟರ್ ಕಾರು ಇದು ! ಮಾರಾಟದಲ್ಲಿಯೂ ಇದೇ ನಂಬರ್ ಒಂದು  title=

Best Selling 7-Seater Car- Maruti Ertiga : ದೊಡ್ಡ ಕುಟುಂಬ ಎಂದರೆ ಕಾರಿನಲ್ಲಿ ಹೆಚ್ಚಿನ ಆಸನ ಸಾಮರ್ಥ್ಯದ ಅಗತ್ಯವಿರುತ್ತದೆ. ಇನ್ನು ದೊಡ್ಡ ಕಾರು ಖರೀದಿಸಬೇಕೆಂದರೆ ಬಜೆಟ್ ಕೂಡಾ ದೊಡ್ಡದಾಗಿರುತ್ತದೆ. ನಿಮ್ಮ ಬಜೆಟ್ ಕಡಿಮೆಯಿದ್ದು, ನೀವು 7 ಸೀಟರ್ ಕಾರನ್ನು ಖರೀದಿಸಬೇಕೆಂದಿದ್ದರೆ ಮಾರುಕಟ್ಟೆಯಲ್ಲಿ ಹಲವು ಆಯ್ಕೆಗಳಿವೆ. ಮಾರುಕಟ್ಟೆಯಲ್ಲಿ ಅನೇಕ ಅಗ್ಗದ 7-ಸೀಟರ್ ಕಾರುಗಳು ಲಭ್ಯವಿದೆ.ಇವುಗಳಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕೂಡಾ ಒಂದು.ಇದು ದೇಶದ ಅತಿ ಹೆಚ್ಚು ಮಾರಾಟವಾಗುವ MPV ಆಗಿದೆ. ಎರ್ಟಿಗಾ 7-ಸೀಟರ್ ಲೇಔಟ್‌ನಲ್ಲಿ ಬರುತ್ತದೆ ಮತ್ತು MPV ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. 

ಇದು ಡಿಸೆಂಬರ್ 2023 ರಲ್ಲಿಯೂ ಹೆಚ್ಚು ಮಾರಾಟವಾದ MPV ಆಗಿದೆ. ಡಿಸೆಂಬರ್ 2023 ರಲ್ಲಿ ಒಟ್ಟು 12,975 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಡಿಸೆಂಬರ್ 2022ಕ್ಕೆ ಹೋಲಿಸಿದರೆ  2023ರ ಮಾರಾಟದಲ್ಲಿ 6% ದಷ್ಟು ಹೆಚ್ಚಳವಾಗಿದೆ. ಇದರೊಂದಿಗೆ, ಡಿಸೆಂಬರ್ 2023 ರಲ್ಲಿ ನಾಲ್ಕನೇ ಹೆಚ್ಚು ಮಾರಾಟವಾದ ಕಾರು ಇದಾಗಿದೆ. ಮಾರಾಟದ ವಿಷಯದಲ್ಲಿ, ಟಾಟಾ ನೆಕ್ಸನ್, ಮಾರುತಿ ಡಿಜೈರ್ ಮತ್ತು ಟಾಟಾ ಪಂಚ್ ಮಾತ್ರ ಇದಕ್ಕಿಂತ  ಇದಕ್ಕಿಂತ ಮೇಲಿನ ಸ್ಥಾನದಲ್ಲಿದ್ದು, ಕ್ರಮವಾಗಿ 15,284, 14,012 ಮತ್ತು 13,787 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 

ಇದನ್ನೂ ಓದಿ : ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಯಂತ್ರಿಸಲು ಈ ಟಿಪ್ಸ್ ಅನುಸರಿಸಿ

ಮಾರುತಿ ಎರ್ಟಿಗಾ ಬೆಲೆ : 
ಮಾರುತಿ ಎರ್ಟಿಗಾ ಒಟ್ಟು 4 ರೂಪಾಂತರಗಳಲ್ಲಿ ಲಭ್ಯವಿದೆ. LXI, VXI, ZXI ಮತ್ತು ZXI Plus ಎನ್ನುವ ನಾಲ್ಕು ರೂಪಾಂತರಗಳಲ್ಲಿ  ಈ ಕಾರು ಲಭ್ಯವಿದೆ. ಇದರ VXI ಮತ್ತು ZXI ರೂಪಾಂತರಗಳಲ್ಲಿ CNG ಆಯ್ಕೆ ಕೂಡಾ ಇದೆ.ಎರ್ಟಿಗಾ ಬೆಲೆ 8.64 ಲಕ್ಷದಿಂದ 13.08 ಲಕ್ಷದವರೆಗೆ ಇರುತ್ತದೆ. 

ಬಣ್ಣದ ಆಯ್ಕೆಗಳು ಮತ್ತು ಬೂಟ್ ಸ್ಪೇಸ್ : 
ಇದು ಆಬರ್ನ್ ರೆಡ್, ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆರ್ಕ್ಟಿಕ್ ವೈಟ್, ಪರ್ಲ್ ಮೆಟಾಲಿಕ್ ಡಿಗ್ನಿಟಿ ಬ್ರೌನ್, ಪ್ರೈಮ್ ಆಕ್ಸ್‌ಫರ್ಡ್ ಬ್ಲೂ ಮತ್ತು ಸ್ಪ್ಲೆಂಡಿಡ್ ಸಿಲ್ವರ್ ಬಣ್ಣಗಳಲ್ಲಿ ಬರುತ್ತದೆ.ಇದರ ಬೂಟ್ ಸ್ಪೇಸ್ 209 ಲೀಟರ್. ಥರ್ಡ್ ರೋ ಆಸನಗಳನ್ನು ಮಡಚಿದರೆ ಅದು 550 ಲೀಟರ್‌ಗೆ ಹೆಚ್ಚಾಗುತ್ತದೆ. ಅಂದರೆ ಇದರಲ್ಲಿ ಸಾಕಷ್ಟು ಸಾಮಾನುಗಳನ್ನು ಸಹ ಸಾಗಿಸಬಹುದು.

ಇದನ್ನೂ ಓದಿ : Side Effect Of Mobile Use: ನೀವು ಸದಾ ಸ್ಮಾರ್ಟ್‌ಫೋನ್‌ ಬಳಸ್ತೀರಾ! ನಿಮ್ಮ ಬ್ರೈನ್ ಮೇಲೆ ಅದು ಹೇಗೆ ಎಫೆಕ್ಟ್ ಆಗುತ್ತೆ ಗೊತ್ತಾ!

ಎಂಜಿನ್ ವಿಶೇಷಣಗಳು : 
ಎರ್ಟಿಗಾ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.5-ಲೀಟರ್ ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಸೆಟಪ್ 103 PS/136.8 Nm ಅನ್ನು ಜನರೇಟ್ ಮಾಡುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬಂದಿರುವ ಈ ಕಾರಿನ ಮೈಲೇಜ್ ಕೂಡಾ ಉತ್ತಮವಾಗಿದೆ. 

ಇದು ಪೆಟ್ರೋಲ್ ನಲ್ಲಿ 20.51 ಕಿಲೋಮೀಟರ್ ವರೆಗೆ ಮೈಲೇಜ್ ನೀಡಬಲ್ಲದು.ಅದರ ಸಿಎನ್‌ಜಿ ರೂಪಾಂತರವು 26.11 ಕಿಮೀ ವರೆಗೆ ಮೈಲೇಜ್ ನೀಡುತ್ತದೆ. ಆದರೆ ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿದೆ. CNG ಕಿಟ್‌ನೊಂದಿಗೆ ಎಂಜಿನ್ 88 PS ಮತ್ತು 121.5 Nm ಅನ್ನು ಜನರೇಟ್ ಮಾಡುತ್ತದೆ. 

ಇದನ್ನೂ ಓದಿ : Amazon Great Republic Day sale 2024: ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್ ಮೇಲೆ ಭಾರೀ ಡಿಸ್ಕೌಂಟ್ :ಇರಲಿದೆ 80 % ವರೆಗೆ ರಿಯಾಯಿತಿ

ವೈಶಿಷ್ಟ್ಯಗಳು : 
Android Auto, Apple CarPlay, 7-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್‌ಗಳು, ಕನೆಕ್ಟೆಡ್ ಕಾರ್ ತಂತ್ರಜ್ಞಾನ (ಟೆಲಿಮ್ಯಾಟಿಕ್ಸ್), ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್‌ಗಳು, ಆಟೋ AC, 4 ಏರ್‌ಬ್ಯಾಗ್‌ಗಳು, ABS ಜೊತೆಗೆ EBD ಮತ್ತು ಬ್ರೇಕ್ ಅಸಿಸ್ಟ್ ಇವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News