Google Pay ಬಳಕೆದಾರರಿಗೆ ಹೊಸ ಸೇವೆ ಆರಂಭ, ಒಂದೇ ಕ್ಲಿಕ್ ನಲ್ಲಿ ಲಕ್ಷ ರೂ. ಸಾಲ ಪಡೆಯಿರಿ!

Digital Personal Loan -  ಒಂದು ವೇಳೆ ನೀವು ಕೂಡ Google Pay ಬಳಸಿ ಹಣ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಒಂದು ಲಕ್ಷ ರೂಪಾಯಿಗಳ ಅಗತ್ಯವಿದ್ದರೆ, Google Pay ನ ಈ ಸೇವೆಯು ನಿಮಗೆ ಸಹಾಯ ನೀಡಲಿದೆ.

Written by - Nitin Tabib | Last Updated : Feb 15, 2022, 08:59 PM IST
  • ಗೂಗಲ್ ಪೇನಿಂದ ವೈಯಕ್ತಿಕ ಸಾಲ ಸೌಲಭ್ಯ ಆರಂಭ
  • DMI ಫೈನಾನ್ಸ್ ಗೂಗಲ್ ಜೊತೆ ಸೇರಿ ಈ ಸೇವೆಯನ್ನು ಪ್ರಾರಂಭಿಸಿದೆ.
  • ಸಾಲ ಹೇಗೆ ಪಡೆಯಬೇಕು ಮತ್ತು ಯಾರಿಗೆ ಸಾಲ ಸಿಗಲಿದೆ ತಿಳಿಯಲು ವರದಿ ಓದಿ
Google Pay ಬಳಕೆದಾರರಿಗೆ ಹೊಸ ಸೇವೆ ಆರಂಭ, ಒಂದೇ ಕ್ಲಿಕ್ ನಲ್ಲಿ ಲಕ್ಷ ರೂ. ಸಾಲ ಪಡೆಯಿರಿ! title=
Google Pay Instant Personal Loan (File Photo)

ನವದೆಹಲಿ: Digital Personal Loan - ನೀವೂ ಕೂಡ ಗೂಗಲ್ ಪೇ ಬಳಸಿ ಹಣ ಪಾವತಿ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ.  ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಿಮಗೆ ಒಂದು ಲಕ್ಷ ರೂಪಾಯಿಗಳ ಅಗತ್ಯವಿದ್ದರೆ, Google Pay ನ ಈ ಸೇವೆ ನಿಮಗೆ ಸಹಾಯ ನೀಡಲಿದೆ. ಹೌದು, Google Pay ನಿಂದ ತ್ವರಿತ ಸಾಲ ಸೌಲಭ್ಯ (Google Pay Instant Personal Loan) ಸೇವೆಯನ್ನು ಪ್ರಾರಂಭಿಸಿದೆ.

Google Pay ಬಳಕೆದಾರರಾಗಿರಬೇಕು
ಈ ಸೇವೆಯ ಲಾಭ ಪಡೆಯಲು, ನಿಮ್ಮ Google Pay ಬಳಕೆ ಮತ್ತು ನಿಮ್ಮ ಕ್ರೆಡಿಟ್ ಇತಿಹಾಸ ಎರಡೂ ಅಗತ್ಯ. ಇದು ಸಂಭವಿಸಿದಲ್ಲಿ, ನೀವು ಕೆಲವೇ ನಿಮಿಷಗಳಲ್ಲಿ ಒಂದು ಲಕ್ಷ ರೂಪಾಯಿಗಳವರೆಗಿನ ವೈಯಕ್ತಿಕ ಸಾಲವನ್ನು (Personal Loan) ಪಡೆಯಬಹುದು.

DMI ಫೈನಾನ್ಸ್ ಈ ಸೇವೆಯನ್ನು ಪ್ರಾರಂಭಿಸಿದೆ
(DMI Finance Limited),  Google Pay ಜೊತೆಗೆ ಸೇರಿ ಡಿಜಿಟಲ್ ಪರ್ಸನಲ್ ಲೋನ್ (Digital Personal Loan) ನೀಡಲು ಹೊಸ ಸೇವೆಯನ್ನು ಪ್ರಾರಂಭಿಸಿದೆ.

Google Pay ಬಳಕೆದಾರರಿಗೆ ಪ್ರಯೋಜನಗಳು
ಈ ಸೇವೆಯ ಅಡಿಯಲ್ಲಿ Google Pay ಬಳಕೆದಾರರು ಡಬಲ್ ಪ್ರಯೋಜನವನ್ನು ಪಡೆಯಲಿದ್ದಾರೆ. ಮೊದಲಿಗೆ, ನೀವು Google ನಲ್ಲಿ ಗ್ರಾಹಕರ ಅನುಭವವನ್ನು ಪಡೆಯುವಿರಿ. ಎರಡನೆಯದಾಗಿ, ಈ ಪ್ಲಾಟ್‌ಫಾರ್ಮ್ ಮೂಲಕ ನೀವು DMI Financeನಿಂದ ತ್ವರಿತ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು.

ಯಾರಿಗೆ ಈ ಸಾಲದ ಲಾಭ ಸಿಗಲಿದೆ
Google Pay ಅನ್ನು ಬಳಸುವ ಪ್ರತಿಯೊಬ್ಬ ಬಳಕೆದಾರರು ತ್ವರಿತ ಸಾಲ ಸೇವೆಯ ಪ್ರಯೋಜನವನ್ನು ಪಡೆಯುವುದಿಲ್ಲ. ನಿಮ್ಮ ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ, ನೀವು ಸಾಲವನ್ನು ಪಡೆಯಬಹುದೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಸೌಲಭ್ಯದ ಅಡಿಯಲ್ಲಿ, DMI ಫೈನಾನ್ಸ್ ನಿಗದಿಪಡಿಸಿದ ಮಾನದಂಡಗಳ (Criteria) ಪ್ರಕಾರ ಪೂರ್ವ-ಅರ್ಹತೆ ಹೊಂದಿರುವ ಬಳಕೆದಾರರನ್ನು ನಿರ್ಧರಿಸಲಾಗುತ್ತದೆ. ಅಂತಹ ಗ್ರಾಹಕರಿಗೆ Google Pay ಮೂಲಕ ಸಾಲವನ್ನು ನೀಡಲಾಗುತ್ತದೆ.

ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ ಬರಲಿದೆ
ನೀವು ಪೂರ್ವ-ಅನುಮೋದಿತ ಗ್ರಾಹಕರಾಗಿದ್ದರೆ, ನಿಮ್ಮ ತ್ವರಿತ ಸಾಲದ ಅರ್ಜಿಯನ್ನು ರಿಯಲ್ ಟೈಮ್ ನಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ. ಪ್ರಕ್ರಿಯೆಯ ಕೆಲವೇ ನಿಮಿಷಗಳಲ್ಲಿ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರುತ್ತದೆ.

ಇದನ್ನೂ ಓದಿ-Apps Banned: ಸರ್ಕಾರದ ದೊಡ್ಡ ಕ್ರಮ, 54 ಚೀನೀ ಅಪ್ಲಿಕೇಶನ್‌ಗಳ ನಿಷೇಧ

ಎಷ್ಟು ತಿಂಗಳವರೆಗೆ ಸಾಲ ದೊರೆಯುತ್ತದೆ?
ಈ ಸೇವೆಯನ್ನು ಬಳಸಿ ನೀವು ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಈ ಮೊತ್ತವನ್ನು ಗರಿಷ್ಠ 36 ತಿಂಗಳುಗಳಲ್ಲಿ ಮರುಪಾವತಿಸಬೇಕಾಗುತ್ತದೆ. DMI ಫೈನಾನ್ಸ್ ಮತ್ತು Google Pay ನ ಈ ಸೇವೆಯನ್ನು ದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಪಿನ್ ಕೋಡ್‌ಗಳಿಗಾಗಿ ಪ್ರಾರಂಭಿಸಲಾಗುತ್ತಿದೆ.

ಇದನ್ನೂ ಓದಿ-Nokia Smartphone: ಅಗ್ಗದ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ನೋಕಿಯಾ ಸ್ಮಾರ್ಟ್‌ಫೋನ್

ಸಂಪೂರ್ಣ ಪ್ರಕ್ರಿಯೆಯನ್ನು ಇಲ್ಲಿ ತಿಳಿಯಿರಿ
1. ಮೊದಲಿಗೆ ಮೊಬೈಲ್‌ನಲ್ಲಿ ಗೂಗಲ್ ಪೇ ಆಪ್ ತೆರೆಯಿರಿ.
2. ನೀವು ಪೂರ್ವ-ಅನುಮೋದಿತ ಸಾಲವನ್ನು ಪಡೆಯಲು ಅರ್ಹರಾಗಿದ್ದರೆ, ನಂತರ ಹಣದ ಆಯ್ಕೆಯು ಪ್ರಚಾರಗಳ ಅಡಿಯಲ್ಲಿ ಕಾಣಿಸಿಕೊಳ್ಳುತ್ತದೆ.
3. ಇಲ್ಲಿ ನೀವು ಲೋನ್ಸ್ ಮೇಲೆ ಕ್ಲಿಕ್ ಮಾಡಿ.
4. ಈಗ Offers ಎಂಬ ಆಯ್ಕೆಯು ತೆರೆದುಕೊಳ್ಳುತ್ತದೆ. ಇದರಲ್ಲಿ ಡಿಎಂಐ ಆಯ್ಕೆ ಕಾಣಿಸುತ್ತದೆ.
5. ಇಲ್ಲಿ ನೀವು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.
6. ಅರ್ಜಿಯನ್ನು ಪ್ರಕ್ರಿಯೆಗೊಳಿಸಿದಾಗ, ಸಾಲವನ್ನು ಅನುಮೋದಿಸಿದ ತಕ್ಷಣ, ಮೊತ್ತವು ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ.

ಇದನ್ನೂ ಓದಿ-Jio ಪೈಸಾ ವಸೂಲ್ ಪ್ಲಾನ್..! ಬಳಕೆದಾರರಿಗೆ ಉಚಿತವಾಗಿ ಸಿಗಲಿದೆ Netflix, Amazon Prime ಮತ್ತು Hotstar

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News