ಅರೆ ವಾಹ್ ! ಮೂರು ತಿಂಗಳುಗಳ ಉಚಿತ ಇಂಟರ್ನೆಟ್ ಪ್ಲಾನ್, ಹೇಗೆ ಲಾಭ ಪಡೆಯಬೇಕು?

Excitel ಪ್ರಸ್ತುತ 13 ನಗರಗಳಲ್ಲಿ 100mbps, 200 mbps ಮತ್ತು 300mbps ವೇಗದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯ 300 ಎಮ್‌ಬಿಪಿಎಸ್ ಯೋಜನೆ ಆನ್‌ಲೈನ್ ಆಟಗಳನ್ನು ಆಡುವ ಹವ್ಯಾಸಿ ಬಳಕೆದಾರರಿಗಾಗಿ ಒದಗಿಸಿದೆ.

Last Updated : Nov 5, 2020, 10:58 AM IST
  • 3 ತಿಂಗಳ ಉಚಿತ ಇಂಟರ್ನೆಟ್ ಸೇವೆಯ ಲಾಭ ಪಡೆಯಿರಿ.
  • 100 mbps ಸ್ಪೀಡ್ ನಲ್ಲಿ ಈ ಸೇವೆ ಸಿಗಲಿದೆ.
  • ಆಫರ್ ವಿಶೇಷತೆ ಏನು? ಇಲ್ಲಿ ತಿಳಿಯಿರಿ.
ಅರೆ ವಾಹ್ ! ಮೂರು ತಿಂಗಳುಗಳ ಉಚಿತ ಇಂಟರ್ನೆಟ್ ಪ್ಲಾನ್, ಹೇಗೆ ಲಾಭ ಪಡೆಯಬೇಕು? title=

ನವದೆಹಲಿ: ಒಂದು ವೇಳೆ ನೀವೂ ಕೂಡ ವೇಗದ ಇಂಟರ್ನೆಟ್ (Internet) ಸೇವೆಯನ್ನು ಆನಂದಿಸಲು ಬಯಸುತ್ತಿದ್ದರೆ. ಈ ಹಬ್ಬದ ಋತುವಿನಲ್ಲಿ ಇದು ಸಹಜ ಸಾಧ್ಯವಿದೆ. ಇಂಟರ್ನೆಟ್ ಸೇವೆ ಒದಗಿಸುವ ಕಂಪನಿ Exitel ಇದಕ್ಕಾಗಿ ಒಂದು ಉತ್ತಮ ಕೊಡುಗೆಯನ್ನು ಹೊತ್ತು ತಂದಿದೆ. ಈ ಯೋಜನೆಯಲ್ಲಿ ನೀವು ಕನಿಷ್ಠ ಅಂದರೆ 100 mbps ವೇಗವನ್ನು ಪಡೆಯಲಿರುವಿರಿ. ಈ ಕಂಪನಿ 100mbps ನಿಂದ 300mbps ವೇಗದ ಇಂಟರ್ನೆಟ್ ಸೇವೆ ಒದಗಿಸುವ ಸಲುವಾಗಿ ಹೆಸರುವಾಸಿಯಾಗಿದೆ.

ಇದನ್ನು ಓದಿ- ಡಿಸೆಂಬರ್ ತಿಂಗಳಿನಿಂದ ಈ ರಾಜ್ಯದ ನಾಗರಿಕರಿಗೆ ಸಿಗಲಿದೆ Free Internet

ಏನಿದು ಪ್ಲಾನ್
Exitel ಅಧಿಕೃತ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಎಲ್ಲ ಹೊಸ ಹಾಗೂ ಈಗಾಗಲೇ ಕನೆಕ್ಷನ್ ಹೊಂದಿರುವ ಗ್ರಾಹಕರಿಗೆ ಕಂಪನಿ ನೂತನ ಆಫರ್ ವೊಂದನ್ನು ಹೊತ್ತು ತಂದಿದೆ. ಈ ಯೋಜನೆಯ ಅಡಿ 6 ತಿಂಗಳ ಇಂಟರ್ನೆಟ್ ಪ್ಲಾನ್ ಖರೀದಿಸಿದರೆ 3 ತಿಂಗಳ ಉಚಿತ ಇಂಟರ್ನೆಟ್ ಸೇವೆ ಒದಗಿಸಲಾಗುವುದು ಎಂದು ಹೇಳಲಾಗಿದೆ. ಅಂದರೆ, ಗ್ರಾಹಕರು ಕೇವಲ 6 ತಿಂಗಳ ಇಂಟರ್ನೆಟ್ ಸೇವೆಗಾಗಿ ಹಣ ಸಂದಾಯ ಮಾಡಿ 9 ತಿಂಗಳುಗಳ ಕಾಲ ಇಂಟರ್ನೆಟ್ ಸೇವೆಯನ್ನು ಅನುಭವಿಸಬಹುದು.

ಇದನ್ನು ಓದಿ- Facebook ನಿಂದ ಉಚಿತ Internet, ಬರಲಿದೆ ಹೊಸ ಆ್ಯಪ್, ಹೇಗೆ ಕಾರ್ಯನಿರ್ವಹಿಸಲಿದೆ?

ಒಟ್ಟು 4 ನಗರಗಳಿಗೆ ಈ ಆಫರ್ ನೀಡಲಾಗಿದೆ
ಪ್ರಸ್ತುತ ನಾಲ್ಕು ನಗರಗಳ ಬಳಕೆದಾರರು ಮೂರು ತಿಂಗಳವರೆಗೆ ಉಚಿತ ಇಂಟರ್ನೆಟ್ ಸೇವೆಯ ಲಾಭವನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ. ಈ ನಾಲ್ಕು ನಗರಗಳಲ್ಲಿ ದೆಹಲಿ-ಎನ್‌ಸಿಆರ್, ಜೈಪುರ, ಲಕ್ನೋ ಮತ್ತು ಝಾನ್ಸಿ ಶಾಮೀಲಾಗಿವೆ. ಪ್ರಸ್ತುತ ಎಕ್ಸಿಟೆಲ್ ಒಟ್ಟು 13 ನಗರಗಳಲ್ಲಿ ಸೂಪರ್ ಫಾಸ್ಟ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನು ಓದಿ- 'BookMyFiber’ ಪೋರ್ಟಲ್ ಆರಂಭಿಸಿದ BSNL, ದೇಶದ ಮೂಲೆ ಮೂಲೆಯಲ್ಲೂ ಸಿಗಲಿದೆ ಸಂಪರ್ಕ

ಒಟ್ಟು ಮೂರು super ಫಾಸ್ಟ್ ಇಂಟರ್ನೆಟ್ ಪ್ಲಾನ್ ಗಳಿವೆ
Excitel ಪ್ರಸ್ತುತ 13 ನಗರಗಳಲ್ಲಿ 100mbps, 200 mbps ಮತ್ತು 300mbps ವೇಗದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತಿದೆ. ಕಂಪನಿಯ 300 ಎಮ್‌ಬಿಪಿಎಸ್ ಯೋಜನೆ ಆನ್‌ಲೈನ್ ಆಟಗಳನ್ನು ಆಡುವ ಹವ್ಯಾಸಿ ಬಳಕೆದಾರರಿಗಾಗಿ ಒದಗಿಸಿದೆ.

Trending News