ಆಟೋ ಎಕ್ಸ್‌ಪೋದಲ್ಲಿ ಅನಾವರಣವಾಯಿತು ಮಾರುತಿ Jimny 5-Door !

Maruti Jimny in india : ಜಿಮ್ನಿ 5-ಡೋರ್ ಎಸ್‌ಯುವಿಯನ್ನು ಆಟೋ ಎಕ್ಸ್‌ಪೋ 2023 ರಲ್ಲಿ ಪರಿಚಯಿಸಲಾಗಿದೆ. ಇದು  ಕಂಪನಿಯ 3 ಬಾಗಿಲಿನ ಜಿಮ್ನಿಯ ವಿಸ್ತೃತ ಆವೃತ್ತಿಯಾಗಿದೆ.   

Written by - Ranjitha R K | Last Updated : Jan 12, 2023, 03:47 PM IST
  • ಜಿಮ್ನಿ 5-ಡೋರ್ ಎಸ್‌ಯುವಿ ಅನಾವರಣ
  • ಇದಕ್ಕೆ 1.5 ಲೀಟರ್ K15B ಎಂಜಿನ್ ನೀಡಲಾಗಿದೆ.
  • ಇಂದಿನಿಂದಲೇ ಹೊಸ ಜಿಮ್ನಿಗಾಗಿ ಬುಕ್ಕಿಂಗ್ ಪ್ರಾರಂಭ
 ಆಟೋ ಎಕ್ಸ್‌ಪೋದಲ್ಲಿ ಅನಾವರಣವಾಯಿತು ಮಾರುತಿ  Jimny 5-Door ! title=

Maruti Jimny 5 Door unveiled : ಮಾರುತಿ ಸುಜುಕಿ ಜಿಮ್ನಿ 5-ಡೋರ್ ಎಸ್‌ಯುವಿಯನ್ನು ಆಟೋ ಎಕ್ಸ್‌ಪೋ 2023 ರಲ್ಲಿ  ಅನಾವರಣಗೊಳಿಸಿದೆ. ಇದು ಕಂಪನಿಯ 3 ಡೋರ್  ಜಿಮ್ನಿಯ ವಿಸ್ತೃತ ಆವೃತ್ತಿಯಾಗಿದೆ. ಇದಕ್ಕೆ 1.5 ಲೀಟರ್ K15B ಎಂಜಿನ್ ನೀಡಲಾಗಿದೆ. ಕಂಪನಿಯು ಈ ಕಾರನ್ನು ಗುಜರಾತ್‌ನಲ್ಲಿರುವ ತನ್ನ ಸ್ಥಾವರದಲ್ಲಿ ತಯಾರಿಸುತ್ತದೆ. ಇಲ್ಲಿಂದಲೇ ಇದನ್ನು ಭಾರತ ಮತ್ತು ವಿದೇಶಗಳಿಗೆ ಮಾರಾಟ ಮಾಡಲಾಗುವುದು. ಕಂಪನಿಯು ಇಂದಿನಿಂದಲೇ ಹೊಸ ಜಿಮ್ನಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಶೀಘ್ರದಲ್ಲೇ ಈ ಕಾರಿನ ವಿತರಣೆ ಪ್ರಾರಂಭವಾಗುವ ಸಾಧ್ಯತೆಯಿದೆ. ಮಾರುತಿಯ ಈ ಕಾರು ಮಹೀಂದ್ರ ಥಾರ್‌ಗೆ ತೀವ್ರ ಪೈಪೋಟಿ ನೀಡಲಿದೆ. 

ಲುಕ್ ಮತ್ತು ಡಿಸೈನ್ :
4X4 ನೊಂದಿಗೆ ಬರುವ ಇದು ಮಾರುತಿಯ ಮೊದಲ ಕಾರು ಇದಾಗಿರಲಿದೆ. 5 ಜನರು ಕುಳಿತುಕೊಳ್ಳಬೇಕಾದ  ವ್ಯವಸ್ಥೆ ಈ ಕಾರಿನಲ್ಲಿದೆ. ಇದು 3,985mm ಉದ್ದ, 1,645mm ಅಗಲ ಮತ್ತು 1,720mm ಎತ್ತರವನ್ನು  ಹೊಂದಿದೆ. ಇದರ ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ ಆಗಿದೆ. ಜಿಮ್ನಿಯ ಅಪ್ರೋಚ್ ಆಂಗಲ್  36 ಡಿಗ್ರಿ, ರಾಂಪ್ ಬ್ರೇಕ್-ಓವರ್  ಆಂಗಲ್ 24 ಡಿಗ್ರಿ ಮತ್ತು  ಡಿಪಾರ್ಚರ್ ಆಂಗಲ್  50 ಡಿಗ್ರಿ ಇರಲಿದೆ. ಮಾರುತಿ ಸುಜುಕಿ  ಈ ಕಾರನ್ನು 7 ಬಣ್ಣಗಳಲ್ಲಿ ಹೊರ ತರುತ್ತಿದೆ.  ಈ ಪೈಕಿ 5 ಮೊನೊಟೋನ್ ಮತ್ತು 2 ಡ್ಯುಯಲ್ ಟೋನ್ ಶೇಡ್ ಆಗಿರಲಿದೆ. 

ಇದನ್ನೂ ಓದಿ : ನಿಮಗೆ ಗೊತ್ತಿಲ್ಲದಂತೆಯೇ ನಿಮ್ಮ ಫೋನ್ ರೆಕಾರ್ಡ್ ಆಗುತ್ತಿದೆಯೇ ? ಸುಲಭವಾಗಿ ಪತ್ತೆ ಹಚ್ಚಿ

ಕ್ಯಾಬಿನ್ ಮತ್ತು ಇಂಟೀರಿಯರ್ :
5 ಡೋರ್ ಜಿಮ್ನಿಯ ಕ್ಯಾಬಿನ್ ತ್ರೀ ಡೋರ್ ವರ್ಸನ್ ಅನ್ನು ಹೋಲುತ್ತದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯಂತಹ  9.0-ಇಂಚಿನ ಸ್ಮಾರ್ಟ್ ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆರ್ಕಮಿಸ್ ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಹೊಂದಿರಲಿದೆ. ವಾಹನದ ಲೋಕೇಶನ್ ಮತ್ತು ಇತರ ಪ್ರಮುಖ ಅಪ್ಡೇಟ್ ಗಳನ್ನು ತೋರಿಸುವ ರಿಮೋಟ್ ಆಯ್ಕೆಗಳನ್ನು ಕೂಡಾ ನೀಡಲಾಗಿದೆ.  ಜಿಮ್ನಿಯಲ್ಲಿ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಲಾಗಿದೆ. ಇದು 6 ಏರ್‌ಬ್ಯಾಗ್‌ಗಳು, ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್ (LSD), ESP ಜೊತೆಗೆ ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ್‌ವ್ಯೂ ಕ್ಯಾಮೆರಾ ಮತ್ತು EBD ಜೊತೆಗೆ ABS ಅನ್ನು ಸಹ ಪಡೆಯುತ್ತದೆ. 

 

ಎಂಜಿನ್ ಮತ್ತು ಪವರ್ :
ಮಾರುತಿ ಸುಜುಕಿ ಜಿಮ್ನಿ 1.5-ಲೀಟರ್ ನಾಲ್ಕು ಸಿಲಿಂಡರ್ K15C ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ ಎರ್ಟಿಗಾ, XL6 ಮತ್ತು ಬ್ರೆಝಾದಲ್ಲಿ ಕಂಡುಬರುತ್ತದೆ.  ಮೈಲ್ಡ್ -ಹೈಬ್ರಿಡ್  ಸಿಸ್ಟಮ್ ನೊಂದಿಗೆ ಈ ಎಂಜಿನ್ 104.8 PS ಪವರ್ ಮತ್ತು 134.2 Nm ಟಾರ್ಕ್ ಅನ್ನು  ಜನರೆಟ್ ಮಾಡುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ 4-ಸ್ಪೀಡ್ ಟಾರ್ಕ್  ಕನ್ವರ್ಟರ್ ನೊಂದಿಗೆ ಬರುತ್ತದೆ. 

ಇದನ್ನೂ ಓದಿ : ಈ ದಿನ ಆರಂಭವಾಗಲಿದೆ BSNL 4G ಸೇವೆ.! ಕಂಪನಿ ನೀಡಿದ ಸ್ಪಷ್ಟ ಮಾಹಿತಿ ಇಲ್ಲಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News