ನವದೆಹಲಿ : ನೀವು ಮೊಬೈಲ್ ಫೋನ್, ಲ್ಯಾಪ್ಟಾಪ್ ಅಥವಾ ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು ಖರೀದಿಸುವ ಯೋಚನೆಯಲ್ಲಿದ್ದಾರೆ ನಿಮಗಾಗಿ ಬಂದಿದೆ ಭರ್ಜರಿ ಆಫರ್. Xiaomi ಈ ವಾರದಿಂದ Mi Fan Festival 2021 ಸೇಲ್ ಆರಂಭಿಸುತ್ತಿದೆ. ಈ ಸೇಲ್ ನಲ್ಲಿ ಕೇವಲ ಒಂದು ರೂಪಾಯಿಗೆ ದುಬಾರಿ ಉತ್ಪನ್ನಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕಾಗಿ ಕಂಪನಿಯು ಮೈಕ್ರೋ ಪೇಜ್ ಅನ್ನು ಕೂಡಾ ಸಿದ್ಧಪಡಿಸಿದೆ.
ಏಪ್ರಿಲ್ 8 ರಿಂದ ಆರಂಭವಾಗಲಿದೆ ಸೇಲ್ :
Xiaomi ಅಧಿಕೃತ ವೆಬ್ಸೈಟ್ ಪ್ರಕಾರ, Mi Fan Festival 2021ಸೇಲ್ ಏಪ್ರಿಲ್ 8 ರಿಂದ ಪ್ರಾರಂಭವಾಗುತ್ತಿದೆ. ಏಪ್ರಿಲ್ 8 ರಿಂದ 13 ರವರೆಗೆ ಸೇಲ್ ನಡೆಯಲಿದೆ. ಈ ಸೇಲ್ ನಲ್ಲಿ ಕಂಪನಿಯ ಎಲ್ಲಾ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ಸಿಗಲಿದೆ. ಕಂಪನಿಯು ತನ್ನ ಮೊಬೈಲ್ ಫೋನ್ (Mobile) , ಟಿವಿ, ಲ್ಯಾಪ್ಟಾಪ್ ಮತ್ತು ಸ್ಮಾರ್ಟ್ ಹೋಮ್ ಉತ್ಪನ್ನಗಳನ್ನು ಈ ಸೇಲ್ ನಲ್ಲಿ ಮಾರಾಟ ಮಾಡಲಿದೆ.
ಇದನ್ನೂ ಓದಿ : Google Pay, Paytm, PhonePeಗೆ ಟಕ್ಕರ್ ನೀಡಲು ಬರುತ್ತಿದೆ ಹೊಸ OnePlus Payment App
ಒಂದು ರೂಪಾಯಿಗೆ ಉತ್ಪನ್ನವನ್ನು ಪಡೆಯುವುದು ಹೇಗೆ ?
ಪ್ರತಿದಿನ ಸಂಜೆ 4 ಗಂಟೆಗೆ ಗ್ರಾಹಕರಿಗೆ 1 ರೂಪಾಯಿಯ ಫ್ಲ್ಯಾಷ್ ಮಾರಾಟ ಪ್ರಾರಂಭವಾಗಲಿದೆ. ಇದರಲ್ಲಿ 1 ರೂಪಾಯಿಯ ಎಕ್ಸ್ಕ್ಲೂಸಿವ್ ಡೀಲ್ ಶುರುವಾಗಲಿದೆ. ಇದಲ್ಲದೆ, ರಾತ್ರಿ 8 ರಿಂದ 12 ರವರೆಗೆ ಸಿಗುವ ಪಿಕ್ ಅಂಡ್ ಚೂಸ್ ಆಫರ್ ನಲ್ಲಿ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು.
Crazy Deals ಕೂಡಾ ಇರಲಿದೆ :
ಕ್ರೇಜಿ ಡೀಲ್ಗಳಲ್ಲಿ (Crazy Deals) ಗ್ರಾಹಕರು ಪ್ರತಿದಿನ ಬೆಳಿಗ್ಗೆ 10 ಗಂಟೆಗೂ ಮೊದಲು ಭಾರೀ ರಿಯಾಯಿತಿ ದರದಲ್ಲಿ ಉತ್ಪನ್ನಗಳನ್ನು ಖರೀದಿ ಮಾಡಬಹುದು. ಇಷ್ಟು ಅಗ್ಗದ ದರದಲ್ಲಿ ಬೇರೆಲ್ಲೂ ಖರೀದಿ ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ : Deadly Mobile Number: ಈ ನಿಗೂಢ ಮೊಬೈಲ್ ಸಂಖ್ಯೆಯ ಕಥೆ ನಿಮಗೆ ಗೊತ್ತಾ?
ಈ ಸೇಲ್ ನಲ್ಲಿ ಬ್ಯಾಂಕ್ ಕಾರ್ಡ್ಗಳಲ್ಲಿ ಉತ್ತಮ ಡೀಲ್ ಸಿಗಲಿದೆ. ಎಚ್ಡಿಎಫ್ಸಿ ಬ್ಯಾಂಕ್ (HDFC) ಕಾರ್ಡ್ ಹೊಂದಿರುವವರು Mi 10i ಮತ್ತು Mi10T ಸರಣಿ ಫೋನ್ಗಳಲ್ಲಿ ವಿಶೇಷ ರಿಯಾಯಿತಿಯನ್ನು ಪಡೆಯಲಿದ್ದಾರೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ Redmi 10 ಸರಣಿ ಫೋನ್ಗಳಲ್ಲಿ ರಿಯಾಯಿತಿ ಸಿಗುತ್ತದೆ. ಇದಲ್ಲದೆ, ನೀವು ಆಕ್ಸಿಸ್ ಬ್ಯಾಂಕ್ ಕಾರ್ಡ್ ಹೊಂದಿರುವವರು ಕೂಡಾ ಅನೇಕ ಉತ್ಪನ್ನಗಳ ಮೇಲೆ ರಿಯಾಯಿತಿ ಪಡೆಯಬಹುದು.
ಸೆಲ್ನಲ್ಲಿ Bonanza Deals ನೀಡುವ ಬಗ್ಗೆಯೂ ಮಾತು ಕೂಡ ಕೇಳಿ ಬರುತ್ತಿದೆ. ಇದರ ಅಡಿಯಲ್ಲಿ Mi Beard ಟ್ರಿಮ್ಮರ್, ರೆಡ್ಮಿ 20000 mAh ಪವರ್ ಬ್ಯಾಂಕ್, Mi ಸ್ಮಾರ್ಟ್ ಬ್ಯಾಂಡ್ 4, ರೆಡ್ಮಿ ಇಯರ್ಬಡ್ 2cಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಆದರೆ ಈ ಡೀಲ್ ನಲ್ಲಿ ಎಷ್ಟು ಬೆಲೆಗೆ ಉತ್ಪನ್ನಗಳು ಸಿಗಲಿವೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ. ಇದಲ್ಲದೆ, ಈ Bonanza Deals ನಲ್ಲಿ ಗ್ರಾಹಕ Mi Notebook ಮತ್ತು Mi Notebook 14 ಹಾರೋಜೋನ್ ಅನ್ನು ಸಹ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.