Amazon, Flipkart, ಗೂಗಲ್ ಮತ್ತು ಫೇಸ್ಬುಕ್ ಮೇಲೆ ಹೊಸ ನಿಯಮ ಜಾರಿ : ಗ್ರಾಹಕರಿಗೆ ಇದರಿಂದ ಆಗಲಿದೆ ಲಾಭ

Online Shopping review : ಭವಿಷ್ಯದಲ್ಲಿ ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸುವಾಗ ಹೆಚ್ಚು ವಿಶ್ವಾಸಾರ್ಹ ವಿಮರ್ಶೆಗಳನ್ನು ನೋಡಬಹುದು. 

Written by - Ranjitha R K | Last Updated : May 16, 2024, 10:59 AM IST
  • ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ, ಕೆಲವೊಮ್ಮೆ ನಕಲಿ ವಿಮರ್ಶೆಗಳಿಂದ ಸಮಸ್ಯೆ ಉಂಟಾಗುತ್ತದೆ.
  • ಕೇಳಿ ಬಂದಿತ್ತು ಸಾಕಷ್ಟು ದೂರುಗಳು
  • ದಿನೇ ದಿನೇ ದೂರಿನಲ್ಲಿ ಹೆಚ್ಚಳ
Amazon, Flipkart, ಗೂಗಲ್ ಮತ್ತು ಫೇಸ್ಬುಕ್ ಮೇಲೆ ಹೊಸ ನಿಯಮ ಜಾರಿ : ಗ್ರಾಹಕರಿಗೆ ಇದರಿಂದ ಆಗಲಿದೆ ಲಾಭ   title=

ಬೆಂಗಳೂರು : ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ, ಕೆಲವೊಮ್ಮೆ ನಕಲಿ ವಿಮರ್ಶೆಗಳಿಂದ ಸಮಸ್ಯೆ ಉಂಟಾಗುತ್ತದೆ.ಈ ಸಮಸ್ಯೆಯನ್ನು ನಿವಾರಿಸಲು, ಗ್ರಾಹಕ ವ್ಯವಹಾರಗಳ ಇಲಾಖೆಯು ಅಮೆಜಾನ್, ಫ್ಲಿಪ್‌ಕಾರ್ಟ್, ಗೂಗಲ್ ಮತ್ತು ಮೆಟಾದಂತಹ ದೊಡ್ಡ ಇ-ಕಾಮರ್ಸ್ ಕಂಪನಿಗಳೊಂದಿಗೆ ಸಭೆ ನಡೆಸಿತು. ಸಭೆಯಲ್ಲಿ,ಈ ಕಂಪನಿಗಳ ಪ್ರತಿನಿಧಿಗಳು ಸರ್ಕಾರ ಇವರ ಮುಂದಿಟ್ಟಿರುವ  ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದಾರೆ. ಇದರಲ್ಲಿ 'ಆನ್‌ಲೈನ್ ಗ್ರಾಹಕ ವಿಮರ್ಶೆಗಳಿಗೆ' IS 19000:2022 ಎಂಬ ವಿಶೇಷ ಮಾನದಂಡವನ್ನು ಅಳವಡಿಸಲಾಗುವುದು.ಇನ್ನೂ ಸರಳವಾಗಿ ಹೇಳುವುದಾದರೆ,ಭವಿಷ್ಯದಲ್ಲಿ ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸುವಾಗ ಹೆಚ್ಚು ವಿಶ್ವಾಸಾರ್ಹ ವಿಮರ್ಶೆಗಳನ್ನು ನೋಡಬಹುದು. 

ಕೇಳಿ ಬಂದಿತ್ತು ಸಾಕಷ್ಟು ದೂರುಗಳು :
ಇ-ಕಾಮರ್ಸ್‌ಗೆ ಸಂಬಂಧಿಸಿದ ದೂರುಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. 2018ರಲ್ಲಿ 95,270 ದೂರುಗಳು ದಾಖಲಾಗಿದ್ದು, 2023ರಲ್ಲಿ ದೂರಿನ ಸಂಖ್ಯೆ 4,44,034ಕ್ಕೆ ಏರಿಕೆಯಾಗಿದೆ. ಈ ರೀತಿ ದೂರಿನಲ್ಲಿ ಈರಿಕೆಯಾಗುತ್ತಿರುವುದು ಕಟ್ಟುನಿಟ್ಟಾದ ನಿಯಮಗಳ ಅಗತ್ಯವಿದೆ ಎಂಬುದನ್ನು ಸಾರಿ ಹೇಳುತ್ತದೆ. 

ಇದನ್ನೂ ಓದಿ : WhatsApp ಹೊಸ ವೈಶಿಷ್ಟ್ಯ ಬಿಡುಗಡೆ !ಇನ್ನು ಪ್ರೈವೇಟ್ ಆಗಿರಲಿದೆ ಪ್ರೊಫೈಲ್ ಪಿಕ್ಚರ್

ಸರ್ಕಾರವು "ಗುಣಮಟ್ಟ ನಿಯಂತ್ರಣ ಆದೇಶ" ಎಂಬ ಹೊಸ ಕಾನೂನನ್ನು ತರುತ್ತಿದೆ. ಈ ಕಾನೂನು ಈಗಾಗಲೇ ಅಸ್ತಿತ್ವದಲ್ಲಿರುವ IS 19000:2022 ಮಾನದಂಡವನ್ನು ಕಾರ್ಯಗತಗೊಳಿಸುತ್ತದೆ.ಈ ಮಾನದಂಡವು ವಿಮರ್ಶಕರು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ. 

1. ವಿಮರ್ಶಕರ ಗುರುತನ್ನು ಕಂಡುಹಿಡಿಯುವುದು ಮೊದಲನೆಯದು . ವಿಮರ್ಶೆಗಳನ್ನು ಅನಾಮಧೇಯವಾಗಿ ಬರೆಯಲಾಗುವುದಿಲ್ಲ. 
2. ಎರಡನೆಯ ವಿಷಯವೆಂದರೆ ವಿಮರ್ಶೆಗಳನ್ನು ಬದಲಾಯಿಸುವಂತಿಲ್ಲ.  ಒಮ್ಮೆ ವಿಮರ್ಶೆಯನ್ನು ಬರೆದ ನಂತರ, ಅದನ್ನು ಬದಲಾಯಿಸುವುದು ಸಾಧ್ಯವಾಗುವುದಿಲ್ಲ. ವಿಮರ್ಶೆಗಳಲ್ಲಿರುವ ಮಾಹಿತಿ ಸತ್ಯ ಎನ್ನುವುದನ್ನು ಇದು  ಖಚಿತಪಡಿಸುತ್ತದೆ.
3. ಮೂರನೆಯ ವಿಷಯವೆಂದರೆ ಎಲ್ಲಾ ವಿಮರ್ಶೆಗಳನ್ನು ತೋರಿಸುವುದು. ಇ-ಕಾಮರ್ಸ್ ಕಂಪನಿಗಳು ಇನ್ನು ಮುಂದೆ ಉತ್ತಮ ವಿಮರ್ಶೆಗಳನ್ನು ಮಾತ್ರ ತೋರಿಸಲು ಸಾಧ್ಯವಾಗುವುದಿಲ್ಲ. ಎಲ್ಲರಿಗೂ ಒಳ್ಳೆಯ ಮತ್ತು ಕೆಟ್ಟ ವಿಮರ್ಶೆಗಳನ್ನು ತೋರಿಸಬೇಕಾಗುತ್ತದೆ. ಇದರೊಂದಿಗೆ ಗ್ರಾಹಕರು ನೈಜ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : ಆನ್‌ಲೈನ್ ಬ್ಲ್ಯಾಕ್‌ಮೇಲಿಂಗ್‌ 1,000ಕ್ಕೂ ಹೆಚ್ಚು ಸ್ಕೈಪ್ ಖಾತೆಗಳ ನಿರ್ಬಂಧ : ಇಂಡಿಯನ್ ಸೈಬರ್ ಕ್ರೈಮ್

ಈ ಸಭೆಯಲ್ಲಿ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖರೆ ಈ ಹೊಸ ಮಾನದಂಡಗಳ ಮಹತ್ವವನ್ನು ವಿವರಿಸಿದರು.ಆನ್‌ಲೈನ್ ಶಾಪರ್‌ಗಳು ವಿಮರ್ಶೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.ನಕಲಿ ವಿಮರ್ಶೆಗಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ನಂಬಿಕೆಯನ್ನು ಕಡಿಮೆ ಮಾಡುತ್ತದೆ.  ಇದರಿಂದ ಜನರು ತಪ್ಪು ವಸ್ತುಗಳನ್ನು ಖರೀದಿಸುವಂತಾಗುತ್ತದೆ ಎಂದು  ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News