ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪ್ಲೇ ಆಫ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಎಂಟು ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐಪಿಎಲ್ 2024 ಟೂರ್ನಿಯಲ್ಲಿ ಫೈನಲ್ ಹಂತವನ್ನು ತಲುಪಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡವು ತಂಡದ ಮೊತ್ತ 13 ರನ್ ಗಳಾಗುವಷ್ಟರಲ್ಲಿ ಟ್ರಾವೀಸ್ ಹೆಡ್ (0) ಹಾಗೂ ಅಭಿಷೇಕ್ ವರ್ಮಾ (3) ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರಿ ಆಘಾತವನ್ನು ಎದುರಿಸಿತು.
What a memorable 𝗞𝗻𝗶𝗴𝗵𝘁 for the men in purple 💜
Unbeaten half-centuries from Venkatesh Iyer 🤝 Shreyas Iyer
The celebrations continue for the final-bound @KKRiders 😎
Scorecard ▶️ https://t.co/U9jiBAlyXF#TATAIPL | #KKRvSRH | #Qualifier1 | #TheFinalCall pic.twitter.com/xBFp3Sskqq
— IndianPremierLeague (@IPL) May 21, 2024
ಸ್ಟಾರ್ಕ್ ನೀಡಿದ ಆರಂಭಿಕ ಆಘಾತದಿಂದ ತತ್ತರಿಸಿದ ಹೈದರಾಬಾದ್ ತಂಡವು ಮುಂದೆ ಚೇತರಿಕೆ ಕಾಣಲೇ ಇಲ್ಲ, ಸನ್ ರೈಸರ್ಸ್ ಪರವಾಗಿ ತ್ರಿಪಾಠಿ 35 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಗಳ ನೆರವಿನಿಂದ 55 ರನ್ ಗಳಿಸಿದರು.ಇವರನ್ನು ಹೊರತುಪಡಿಸಿ ಕ್ಲಾಸೆನ್ (32) ಕಮಿನ್ಸ್ (30) ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರ ಕೂಡ 30 ರ ಗಡಿ ದಾಟಲಿಲ್ಲ.ಅಂತಿಮವಾಗಿ ಹೈದರಾಬಾದ್ ತಂಡವು 19.3 ಓವರ್ ಗಳಲ್ಲಿ 159 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.
ಕೊಲ್ಕತ್ತಾ ತಂಡದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಸ್ಟಾರ್ಕ್ 4, ಚಕ್ರವರ್ತಿ 2 ವಿಕೆಟ್ ಗಳನ್ನು ಕಬಳಿಸುವ ಮೂಲಕ ಸನ್ ರೈಸರ್ಸ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.
For his top-notch bowling spell, Mitchell Starc bags the Player of the Match award 🏆@KKRiders win by 8 wickets with over 6 overs to spare 🤯
Scorecard ▶️ https://t.co/U9jiBAlyXF#TATAIPL | #KKRvSRH | #Qualifier1 | #TheFinalCall pic.twitter.com/ymdfodE0Rd
— IndianPremierLeague (@IPL) May 21, 2024
ಇನ್ನೊಂದೆಡೆಗೆ ಹೈದರಾಬಾದ್ ತಂಡವು ನೀಡಿದ 160 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 13.4 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 164 ರನ್ ಗಳಿಸುವ ಮೂಲಕ ಗೆಲುವಿನ ಕೇಕೆ ಹಾಕಿದ್ದಷ್ಟೇ ಅಲ್ಲದೆ ಐಪಿಎಲ್ ನಲ್ಲಿ ಫೈನಲ್ ಗೆ ತಲುಪಿತು.
ಕೋಲ್ಕತ್ತಾದಲ್ಲಿ ಶ್ರೆಯೇಸ್ ಅಯ್ಯರ (58),ವೆಂಕಟೇಶ್ ಅಯ್ಯರ (51) ರನ್ ಗಳಿಸುವ ಮೂಲಕ ತಂಡದ ಗೆಲುವಿನ ಮಹತ್ಬದ ಪಾಲು ವಹಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.