Smartwatchನಲ್ಲಿರುವ ಬ್ಲಡ್ ಶುಗರ್ ಅಳೆಯುವ ವೈಶಿಷ್ಟ್ಯ ಬಲು ಅಪಾಯಕಾರಿಯಂತೆ : US ಹೆಲ್ತ್ ಅಥಾರಿಟಿ ನೀಡಿದೆ ಎಚ್ಚರಿಕೆ !

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಳೆಯಲು ಬಳಸುವ ಗ್ಯಾಜೆಟ್ ಬೇರೆಯದ್ದೇ ರೀತಿಯದ್ದಾಗಿರುತ್ತವೆ. ಇದಕ್ಕಾಗಿ ಚರ್ಮಕ್ಕೆ ಸೂಜಿಯನ್ನು ಚುಚ್ಚುವ ಅಗತ್ಯವಿರುತ್ತದೆ.

Written by - Ranjitha R K | Last Updated : Feb 23, 2024, 10:30 AM IST
  • ಸ್ಮಾರ್ಟ್ ವಾಚ್‌ಗಳು ಮತ್ತು ಸ್ಮಾರ್ಟ್ ರಿಂಗ್‌ಗಳಲ್ಲಿ ಬ್ಲಡ್ ಶುಗರ್ ಅಲೆಯುವ ವೈಶಿಷ್ಟ್ಯ
  • ಈ ಫೀಚರ್ ಬಲು ಅಪಾಯಕಾರಿ ಎನ್ನುತ್ತಿದೆ FDA
  • ಸೂಜಿ ಚುಚ್ಚದೆ ಬ್ಲಡ್ ಶುಗರ್ ಅಲೆಯುವುದು ಸಾಧ್ಯವಿಲ್ಲ
Smartwatchನಲ್ಲಿರುವ ಬ್ಲಡ್ ಶುಗರ್ ಅಳೆಯುವ ವೈಶಿಷ್ಟ್ಯ ಬಲು ಅಪಾಯಕಾರಿಯಂತೆ : US ಹೆಲ್ತ್ ಅಥಾರಿಟಿ ನೀಡಿದೆ ಎಚ್ಚರಿಕೆ ! title=

ಬೆಂಗಳೂರು : ಕೆಲವು ಸ್ಮಾರ್ಟ್ ವಾಚ್‌ಗಳು ಮತ್ತು ಸ್ಮಾರ್ಟ್ ರಿಂಗ್‌ಗಳು ಸೂಜಿಯನ್ನು  ಬಳಸದೆಯೇ ರಕ್ತದಲ್ಲಿನ ಸಕ್ಕರೆಯನ್ನು ಅಳೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಅತ್ಯಂತ ಅಪಾಯಕಾರಿ ಎಂದು ಯುಎಸ್ ಆಹಾರ ಮತ್ತು ಔಷಧ ಇಲಾಖೆ (ಎಫ್‌ಡಿಎ) ಎಚ್ಚರಿಸಿದೆ. ಈ ಸುದ್ದಿ ಆಪಲ್, ಸ್ಯಾಮ್‌ಸಂಗ್‌ನಂತಹ ಕಂಪನಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಹೇಳಲಾಗುತ್ತಿದೆ. ಯಾಕೆಂದರೆ ಮೂಲಗಳ ಪ್ರಕಾರ ಈ ಕಂಪನಿಗಳು ಸಕ್ಕರೆ ಪ್ರಮಾಣ ಅಳೆಯುವ ವಾಚ್ ಅನ್ನು ತಯಾರಿಸುವ ಪ್ರಯತ್ನದಲ್ಲಿದೆ ಎಂದು ಹೇಳಲಾಗುತ್ತಿದೆ.

FDA ಎಚ್ಚರಿಕೆ ನೀಡಿದೆ :
ಅನೇಕ ಸ್ಮಾರ್ಟ್ ವಾಚ್‌ಗಳು ಮತ್ತು ಸ್ಮಾರ್ಟ್ ರಿಂಗ್‌ಗಳು ರಕ್ತದಲ್ಲಿನ ಸಕ್ಕರೆಯನ್ನು ತಾವಾಗಿಯೇ ತಿಳಿಸುತ್ತದೆ ಎಂದು ಹೇಳಿಕೊಳ್ಳುತ್ತವೆ ಎಂದು ಅಮೇರಿಕನ್ ಹೆಲ್ತ್ ಏಜೆನ್ಸಿ (ಎಫ್‌ಡಿಎ) ಹೇಳಿದೆ. ಆದರೆ ಇದು ನಿಜವಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಳೆಯಲು ಬಳಸುವ ಗ್ಯಾಜೆಟ್ ಬೇರೆಯದ್ದೇ ರೀತಿಯದ್ದಾಗಿರುತ್ತವೆ. ಇದಕ್ಕಾಗಿ ಚರ್ಮಕ್ಕೆ ಸೂಜಿಯನ್ನು ಚುಚ್ಚುವ ಅಗತ್ಯವಿರುತ್ತದೆ. ಆದರೆ ಇಲ್ಲಿಯವರೆಗೆ, ಯಾವುದೇ ಸ್ಮಾರ್ಟ್ ವಾಚ್ ಅಥವಾ ಸ್ಮಾರ್ಟ್ ರಿಂಗ್ ರಕ್ತದಲ್ಲಿನ ಸಕ್ಕರೆಯನ್ನು ಸ್ವಂತವಾಗಿ ಅಳೆಯಲು ಅನುಮತಿಸಲಾಗಿಲ್ಲ ಎಂದು FDA ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ : Good News! ಇನ್ಮುಂದೆ ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಗೂಗಲ್ ಪಿಕ್ಸಲ್ ಫೋನ್ ಗಳು!

ಸಾಕಷ್ಟು ಅಪಾಯಕಾರಿಯಾಗಬಹುದು :
ಮಧುಮೇಹ ರೋಗಿಗಳ ರಕ್ತದಲ್ಲಿನ ಸಕ್ಕರೆಯನ್ನು ತಪ್ಪಾಗಿ ಅಳೆಯುವುದರಿಂದ ಮಧುಮೇಹವನ್ನು ಸರಿಯಾಗಿ ನಿರ್ವಹಿಸುವುದು ಕಷ್ಟವಾಗುತ್ತದೆ.ಅಮೇರಿಕನ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಪ್ರಕಾರ, ತಪ್ಪಾದ  ರೀಡಿಂಗ್ ಕಾರಣದಿಂದಾಗಿ 'ಇನ್ಸುಲಿನ್, ಸಲ್ಫೋನಿಲ್ಯೂರಿಯಾ ಅಥವಾ ಇತರ ಔಷಧಿಗಳನ್ನು ತಪ್ಪಾದ ಪ್ರಮಾಣದಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಏರುಪೇರಾಗಲು ಕಾರಣವಾಗಬಹುದು. 

ಅನೇಕ ಸ್ಮಾರ್ಟ್ ವಾಚ್‌ಗಳು ಮತ್ತು ಸ್ಮಾರ್ಟ್ ರಿಂಗ್‌ಗಳು ಸೂಜಿಯನ್ನು ಚುಚ್ಚದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಳೆಯಬಹುದು ಎಂದು ಹೇಳಿಕೊಳುತ್ತಿವೆ. ಈ ಸಾಧನಗಳು "ಸೂಜಿ-ಮುಕ್ತ" ತಂತ್ರಜ್ಞಾನವನ್ನು ಹೊಂದಿವೆ ಎಂದು ಹೇಳಿಕೊಳ್ಳುತ್ತವೆ. ಆದರೆ ನೆನಪಿಡಿ, ಈ ಸ್ಮಾರ್ಟ್ ವಾಚ್‌ಗಳು ಮತ್ತು ಸ್ಮಾರ್ಟ್ ರಿಂಗ್‌ಗಳು ರಕ್ತದ ಸಕ್ಕರೆಯನ್ನು ನೇರವಾಗಿ ಅಳೆಯುವುದಿಲ್ಲ.ಅನೇಕ ಕಂಪನಿಗಳು ಇಂಥ ಸ್ಮಾರ್ಟ್ ವಾಚ್ ಗಳನ್ನು ತಯಾರಿಸಿ ಬೇರೆ ಬೇರೆ ಹೆಸರಿನಲ್ಲಿ ಮಾರಾಟ ಮಾಡುತ್ತವೆ. ಯಾವುದೇ ಕಂಪನಿಯು ಸುಳ್ಳು ಹೇಳಿಕೊಂಡು ಕಾನೂನುಬಾಹಿರವಾಗಿ ಹೀಗೆ ಸ್ಮಾರ್ಟ್ ವಾಚ್ ಗಳನ್ನು ಮಾರಾಟ ಮಾಡದಂತೆ  ಸರ್ಕಾರಿ ಸಂಸ್ಥೆಗಳು  ನಿಗಾ ಇಟ್ಟಿವೆ. 

ಇದನ್ನೂ ಓದಿ : Xiaomi 14 ಸ್ಮಾರ್ಟ್‌ಫೋನ್ ಬಿಡುಗಡೆಗೆ ದಿನಾಂಕ ಫಿಕ್ಸ್: ಈ ಕುರಿತು ಮಾಹಿತಿ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News