ಎಲ್ಲಾ ಮೊಬೈಲ್ ನೆಟ್ವರ್ಕ್ ಗೂ ಶಾಕ್ !ಕೇವಲ 152 ರೂಪಾಯಿಗೆ 28 ದಿನ ಅನ್ಲಿಮಿಟೆಡ್ ಕಾಲ್ ಜೊತೆಗೆ ಫ್ರೀ ಡೇಟಾ ! Jio ತಂದಿದೆ ಅಗ್ಗದ ರಿಚಾರ್ಜ್ ಪ್ಲಾನ್ !

ಜಿಯೋ 152 ರೂಪಾಯಿಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಇದು ೨೮ ದಿನಗಳ ವ್ಯಾಲಿಡಿಟಿ ನೀಡಲಿದೆ. 

Written by - Ranjitha R K | Last Updated : Sep 13, 2024, 06:09 PM IST
  • ರಿಲಯನ್ಸ್ ಜಿಯೋ ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಯಾಗಿದೆ.
  • ಜಿಯೋ ದೇಶದಲ್ಲಿ ಇಂಟರ್ನೆಟ್ ಬಳಕೆ ಕ್ಷೇತ್ರದಲ್ಲಿ ಕ್ರಾಂತಿಯನ್ನು ತಂದಿದೆ.
  • ಅನೇಕ ಪ್ರಯೋಜನಗಳನ್ನು ನೀಡುವ ಜಿಯೋದ ಹೊಸ ಪ್ಲಾನ್ ಇಲ್ಲಿದೆ
ಎಲ್ಲಾ ಮೊಬೈಲ್ ನೆಟ್ವರ್ಕ್ ಗೂ ಶಾಕ್ !ಕೇವಲ 152 ರೂಪಾಯಿಗೆ 28 ದಿನ ಅನ್ಲಿಮಿಟೆಡ್ ಕಾಲ್ ಜೊತೆಗೆ  ಫ್ರೀ ಡೇಟಾ ! Jio ತಂದಿದೆ ಅಗ್ಗದ ರಿಚಾರ್ಜ್ ಪ್ಲಾನ್ ! title=

ಬೆಂಗಳೂರು : ರಿಲಯನ್ಸ್ ಜಿಯೋ ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಯಾಗಿದೆ. ಮುಖೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಜಿಯೋ ಕಂಪನಿ ಸಾರಥ್ಯವನ್ನು ವಹಿಸಿದ್ದಾರೆ.ಜಿಯೋ ದೇಶದಲ್ಲಿ ಇಂಟರ್ನೆಟ್ ಬಳಕೆ ಕ್ಷೇತ್ರದಲ್ಲಿ ಕ್ರಾಂತಿಯನ್ನು ತಂದಿದೆ.ಕಡಿಮೆ ಬೆಲೆಯಲ್ಲಿ ಬಳಕೆದಾರರಿಗೆ ಅನೇಕ ಪ್ರಯೋಜನಗಳನ್ನು ನೀಡುವ ಜಿಯೋದ ಹೊಸ ಪ್ಲಾನ್ ಇಲ್ಲಿದೆ. 

ರೀಚಾರ್ಜ್ ಯೋಜನೆ :
ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ವಿವಿಧ ಬೆಲೆ ಶ್ರೇಣಿಗಳಲ್ಲಿ ಅನೇಕ ರೀಚಾರ್ಜ್ ಯೋಜನೆಗಳನ್ನು ನೀಡುತ್ತದೆ.ಅದು ವಿಭಿನ್ನ ಪ್ರಯೋಜನಗಳೊಂದಿಗೆ ಬರುತ್ತದೆ.ಡೇಟಾ ಮತ್ತು ವ್ಯಾಲಿಡಿಟಿಯನ್ನು ಅವಲಂಬಿಸಿ ಈ ಪ್ರಯೋಜನಗಳು ಬದಲಾಗುತ್ತವೆ. 

ಇದನ್ನೂ ಓದಿ : ಏರ್‌ಟೆಲ್ ಕೈಗೆಟುಕುವ ಬೆಲೆಯ ಪ್ಲಾನ್, 6 ತಿಂಗಳು ರಿಚಾರ್ಜ್ ಮಾಡೋದೆ ಬೇಡ!

ಅತ್ಯುತ್ತಮ ಯೋಜನೆ : 
ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಉತ್ತಮ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.ಜಿಯೋದ ಪೋರ್ಟ್‌ಫೋಲಿಯೊವನ್ನು ಸರಿಯಾಗಿ ಗಮನಿಸಿದರೆ 152 ರೂ.ಯಲ್ಲಿ 28 ದಿನಗಳ ವ್ಯಾಲಿಡಿಟಿ ನೀಡುವ ಪ್ಲಾನ್ ಅನ್ನು ಕಾಣಬಹುದು.ಈ ಪ್ಲಾನ್ ಅಡಿಯಲ್ಲಿ 28 ದಿನಗಳವರೆಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತವಾಗಿ ಕರೆ ಮಾಡಬಹುದು. 

ಇತರ ಪ್ರಯೋಜನಗಳು : 
ಈ ಯೋಜನೆಯಲ್ಲಿ ಬಳಕೆದಾರರು ಅನೇಕ ಇತರ ಪ್ರಯೋಜನಗಳನ್ನು ಕೂಡಾ ಪಡೆಯಬಹುದು. ಯೋಜನೆಯಲ್ಲಿ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಇದನ್ನೂ ಓದಿ : ಮಳೆಗಾಲದಲ್ಲಿ ಹೀಗೆ ಮಾಡಿದರೆ ವಿದ್ಯುತ್ ಬಿಲ್ ಅನ್ನು 50 %ದಷ್ಟು ಕಡಿಮೆ ಮಾಡಬಹುದು !

ಜಿಯೋದ 152 ರೂ.ಯೋಜನೆಯಲ್ಲಿ,ಬಳಕೆದಾರರು ಪ್ರತಿದಿನ 500 MB ಹೈ ಸ್ಪೀಡ್ ಡೇಟಾವನ್ನು ಪಡೆಯುತ್ತಾರೆ.ಆದರೆ,ಈ ಯೋಜನೆಯು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಎನ್ನುವುದು ನೆನಪಿರಲಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News