ನಿಮ್ಮ PCಯನ್ನು ಸಂಪೂರ್ಣ ಆಧುನಿಕವಾಗಿಸಲಿದೆ Windows 11, ಏನಿರಲಿದೆ ವೈಶಿಷ್ಯ ತಿಳಿಯಿರಿ

ಮೈಕ್ರೋಸಾಫ್ಟ್  ಅಕ್ಟೋಬರ್ 5 ರಂದು ವಿಂಡೋಸ್ 11 ಅನ್ನು ಬಿಡುಗಡೆ ಮಾಡುತ್ತಿದೆ. ಕಂಪನಿಯು ಇದನ್ನು 4 ತಿಂಗಳ ಹಿಂದೆಯೇ ಘೋಷಿಸಿತ್ತು. 

Written by - Ranjitha R K | Last Updated : Sep 1, 2021, 05:25 PM IST
  • Windows 11 ಅಕ್ಟೋಬರ್ 5 ರಂದು ಬಿಡುಗಡೆಯಾಗಲಿದೆ.
  • ವಿಂಡೋಸ್ 11 ವಿಂಡೋಸ್ 10 ಬಳಕೆದಾರರಿಗೆ ಉಚಿತ ಅಪ್ಗ್ರೇಡ್ ಆಗಿ ಬರುತ್ತದೆ.
  • ವಿಂಡೋಸ್ 11 ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಿದ ವಿನ್ಯಾಸವನ್ನು ಹೊಂದಿದೆ.
ನಿಮ್ಮ PCಯನ್ನು ಸಂಪೂರ್ಣ ಆಧುನಿಕವಾಗಿಸಲಿದೆ  Windows 11, ಏನಿರಲಿದೆ ವೈಶಿಷ್ಯ ತಿಳಿಯಿರಿ title=
Windows 11 ಅಕ್ಟೋಬರ್ 5 ರಂದು ಬಿಡುಗಡೆಯಾಗಲಿದೆ. (file photo)

ನವದೆಹಲಿ : ಮೈಕ್ರೋಸಾಫ್ಟ್  (Microsoft) ಅಕ್ಟೋಬರ್ 5 ರಂದು ವಿಂಡೋಸ್ 11 ಅನ್ನು ಬಿಡುಗಡೆ ಮಾಡುತ್ತಿದೆ. ಕಂಪನಿಯು ಇದನ್ನು 4 ತಿಂಗಳ ಹಿಂದೆಯೇ ಘೋಷಿಸಿತ್ತು. ವಿಂಡೋಸ್ 10 ಬಳಕೆದಾರರಿಗೆ ಉಚಿತ ಅಪ್ಗ್ರೇಡ್ ಆಗಿ ವಿಂಡೋಸ್ 11 ಬರಲಿದೆ.  ವಿಂಡೋಸ್ 11 ರೋಲ್‌ಔಟ್ ಫೆಲ್ಜ್ ಮ್ಯಾನರ್‌ನಲ್ಲಿ ಇರಲಿದೆ ಎಂದು, ಮೈಕ್ರೋಸಾಫ್ಟ್ ಹೊಸ ಬ್ಲಾಗ್‌ನಲ್ಲಿ ಹೇಳಿದೆ. ಏಕೆಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಡಿವೈಸ್ ಗೆ ಅಪ್‌ಡೇಟ್ ಸಿಕ್ಕಿದ ನಂತರ, ಹಳೆಯ ಸಿಸ್ಟಮ್ ಗಳು ಅದನ್ನು ಪಡೆಯಲಿವೆ. ಮುಂದಿನ ವರ್ಷದ ಮಧ್ಯದಲ್ಲಿ ಎಲ್ಲಾ ಅರ್ಹ ಡಿವೈಸ್ ಗಳಿಗೆ ವಿಂಡೋಸ್ 11 ಅಪ್‌ಗ್ರೇಡ್ ಪೂರ್ಣಗೊಳ್ಳಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. 

ವಿಂಡೋಸ್ 11 ನಲ್ಲಿ ಈ ಬದಲಾವಣೆಗಳು ಇರಲಿವೆ : 
ಸ್ಟಾರ್ಟ್ ಮೆನುವಿನ ಪೋಸಿಶನ್,  ಹೊಸ ಐಕಾನ್‌ಗಳು, ಥೀಮ್‌ಗಳು ಬದಲಾಗಿರುವುದರಿಂದ Windows 11 ಸಂಪೂರ್ಣವಾಗಿ ಹೊಸ ವಿನ್ಯಾಸವನ್ನು ಹೊಂದಿದೆ. ಇದು ಹಿಂದಿನದ್ದಕ್ಕಿಂತ ಹೆಚ್ಚು ಸಾಫ್ಟ್ ಆಗಿ ಇರಲಿದೆ. ಮೈಕ್ರೋಸಾಫ್ಟ್ (Microsoft) ಪ್ರಕಾರ, ಬ್ಯಾಕ್ ಗ್ರೌಂಡ್ ನಲ್ಲಿ ಶೇ. 40 ರಷ್ಟು ಸಣ್ಣ ಅಪ್‌ಡೇಟ್‌ಗಳು ಆಗುತ್ತಿದ್ದು, ವಿಂಡೋಸ್ 10ಗೆ ಹೋಲಿಸಿದರೆ ವಿಂಡೋಸ್ 11 ಹಲವು ಕಾರ್ಯಕ್ಷಮತೆ ಸುಧಾರಣೆಗಳನ್ನು ಹೊಂದಿದೆ. ಹೊಸ ಅಪ್‌ಡೇಟ್ ನಲ್ಲಿ ಪವರ್ ಎಫಿಶಿಯನ್ಸಿ ಹೆಚ್ಚಾಗಿರಲಿದೆ.  ವಿಂಡೋಸ್ 11 ರ ಹೈಲೈಟ್ ಎಂದರೆ ವಿಂಡೋಸ್ ಓಎಸ್ ಆಂಡ್ರಾಯ್ಡ್ ಆಪ್ ಗಳನ್ನು (Android app) ಹೊಂದಿರುತ್ತದೆ. 

ಇದನ್ನೂ ಓದಿ : BSNL NEW PLAN: ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ BSNLನ ಹೊಸ ಯೋಜನೆ

 ಸಿಸ್ಟಮ್‌ಗಾಗಿ ವಿಂಡೋಸ್ 11 ಎಲಿಜಿಬಿಲಿಟಿಯನ್ನು ಪರಿಶೀಲಿಸುವುದು ಹೇಗೆ ? 
ವಿಂಡೋಸ್ ಅಪ್‌ಡೇಟ್ (Windows update) ನೋಟಿಫಿಕೇಶನ್ ಅನ್ನು ಅರ್ಹವಾದ Windows 10 ಪಿಸಿಗಳಿಗೆ ಅಪ್‌ಡೇಟ್ ಲಭ್ಯವಿರುವಾಗ ಕಳುಹಿಸಲಾಗುವುದು ಎಂದು ಮೈಕ್ರೋಸಾಫ್ಟ್ ಹೇಳಿದೆ. ಸೆಟ್ಟಿಂಗ್ಸ್ > ವಿಂಡೋಸ್ ಅಪ್‌ಡೇಟ್‌ ಚೆಕ್ ಫಾರ್ ಅಪ್ದೆಶನ್  ಆಯ್ಕೆ ಮಾಡುವ ಮೂಲಕ ಕೂಡಾ ಬಳಕೆದಾರರು ಅಪ್‌ಡೇಟ್‌ಗಳನ್ನು ಪರಿಶೀಲಿಸಬಹುದು.

ಪಿಸಿ ವಿಂಡೋಸ್ 11 ಗೆ ಅರ್ಹತೆ ಹೊಂದಿಲ್ಲದಿದ್ದರೆ, ಮೈಕ್ರೋಸಾಫ್ಟ್ ಅಕ್ಟೋಬರ್ 14, 2025 ರವರೆಗೆ ವಿಂಡೋಸ್ 10 ಅನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.

ಇದನ್ನೂ ಓದಿ : Jio ಈ 'ಸ್ಮಾಲ್' ರೀಚಾರ್ಜ್ ಮಾಡಿ ಪಡೆಯಿರಿ ಉಚಿತವಾಗಿ Disney+ Hotstar ಚಂದಾದಾರಿಕೆ! ಇಲ್ಲಿದೆ ಫುಲ್ ಡಿಟೈಲ್ಸ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News