ಚಲಿಸುತ್ತಿರುವ ಬೈಕ್ ನಲ್ಲಿಯೇ ರೋಮ್ಯಾನ್ಸ್ ! ಸಾರ್ವಜನಿಕವಾಗಿಯೇ ಹುಚ್ಚಾಟಕ್ಕೆ ಇಳಿದ ಜೋಡಿಯ ವಿಡಿಯೋ

Couple viral video : ನಾವು ಅದೆಷ್ಟೇ ಮುಂದುವರೆದಿದ್ದೇವೆ. ಮಾಡರ್ನ್ ಆಗಿದ್ದೇವೆ ಅಂದುಕೊಳ್ಳಬಹುದು. ಆದರೆ ಕೆಲವೊಂದು ವಿಷಯದಲ್ಲಿ ನಮ್ಮ ಸಂಸ್ಕೃತಿ ನಮ್ಮ ಸಭ್ಯತೆ ಮೀರಿ ನಡೆದುಕೊಳ್ಳುವುದು ಸರಿಯಲ್ಲ. 

Written by - Ranjitha R K | Last Updated : Jul 19, 2023, 11:04 AM IST
  • ಪ್ರೀತಿ ಒಂದು ಅದ್ಭುತ ಅನುಭವ.
  • ಪ್ರೀತಿ ವ್ಯಕ್ತಪಡಿಸುವುದು ಮುಖ್ಯ
  • ವೈರಲ್ ಆಗುತ್ತಿದೆ ಜೋಡಿಯ ವಿಡಿಯೋ
ಚಲಿಸುತ್ತಿರುವ ಬೈಕ್ ನಲ್ಲಿಯೇ ರೋಮ್ಯಾನ್ಸ್ ! ಸಾರ್ವಜನಿಕವಾಗಿಯೇ ಹುಚ್ಚಾಟಕ್ಕೆ ಇಳಿದ ಜೋಡಿಯ ವಿಡಿಯೋ  title=

Couple viral video : ಪ್ರೀತಿ ಒಂದು ಅದ್ಭುತ ಅನುಭವ. ತಮ್ಮ ಜೀವನದಲ್ಲಿ ಪ್ರೀತಿ ಇರಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇನ್ನು ಸಂಗಾತಿ ಹೊಂದಿರುವವರು ತನ್ನ ಸಂಗಾತಿ ಆಗಾಗ ಪ್ರೀತಿಯನ್ನು ವ್ಯಕ್ತಪಡಿಸಬೇಕು ಎಂದು ಬಯಸುವುದು ಕೂಡಾ ಸಹಜ. ಪ್ರೀತಿಯನ್ನು ವ್ಯಕ್ತಪಡಿಸಿದರೆ ಸಂಬಂಧ ಗಟ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.  ಆದರೆ ಪ್ರೀತಿ ವ್ಯಕ್ತಪಡಿಸುವುದಕ್ಕೂ ಒಂದು ರೀತಿ ನೀತಿ ಅನ್ನುವುದು ಇರುತ್ತದೆ. ಸಮಯ ಸಂದರ್ಭ ಕೂಡಾ ಮುಖ್ಯವಾಗಿರುತ್ತದೆ. ನಾವು ಪ್ರೀತಿಸುತ್ತೇವೆ, ನಾವು ಮದುವೆಯಾಗಿದ್ದೇವೆ ಎನ್ನುವ ಕಾರಣಕ್ಕೆ ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ.  

ಸಭ್ಯತೆ ಮೀರಿ ವರ್ತನೆ : 
ನಾವು ಅದೆಷ್ಟೇ ಮುಂದುವರೆದಿದ್ದೇವೆ. ಮಾಡರ್ನ್ ಆಗಿದ್ದೇವೆ, ಅಂದುಕೊಳ್ಳಬಹುದು. ಆದರೆ ಕೆಲವೊಂದು ವಿಷಯದಲ್ಲಿ ನಮ್ಮ ಸಂಸ್ಕೃತಿ ನಮ್ಮ ಸಭ್ಯತೆ ಮೀರಿ ನಡೆದುಕೊಳ್ಳುವುದು ಸರಿಯಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಗೆ ನಾವು ದಿನೇ ದಿನೇ ಹತ್ತಿರವಾಗುತ್ತಾ ಇರಲೂ ಬಹುದು. ಆದರೆ ನಾವು ಅದೇ ಸಂಸ್ಕೃತಿಯಂತೆ ನಡೆದುಕೊಳ್ಳುತ್ತೇವೆ ಎನ್ನುವುದು ಸಾಧ್ಯವಿಲ್ಲ. ಆದರೆ ರಾಷ್ಟ್ರ ರಾಜಧಾನಿಯಲ್ಲಿ ಜೋಡಿಯೊಂದು ಎಲ್ಲೇ ಮೀರಿ ನಡೆದುಕೊಂಡಿದೆ. ಜೊತೆಗೆ ಸಂಚಾರಿ ನಿಯಮ ಕೂಡಾ ಉಲ್ಲಂಘಿಸಿದೆ. 

ಇದನ್ನೂ ಓದಿ : Video: ನದಿಗೆ ಹಾರಿ ಪ್ರಾಣಬಿಟ್ಟ ಮಾಲೀಕ, ಚಪ್ಪಲಿ ಬಳಿ ಕಾದು ಕುಳಿತ ನಾಯಿ.. ನಿಯತ್ತು ಅಂದ್ರೆ ಇದಲ್ಲವೇ! ಕಣ್ಣೀರು ತರಿಸುತ್ತೆ ಶ್ವಾನದ ರೋಧನೆ

ಓಡಾಡುವ ಬೈಕ್ ಮೇಲೆ ರೋಮ್ಯಾನ್ಸ್ : 
ವೈರಲ್ ವೀಡಿಯೋದಲ್ಲಿ, ದೆಹಲಿಯ ಬೀದಿಗಳಲ್ಲಿ ವ್ಯಕ್ತಿಯೊಬ್ಬ ಹುಡುಗಿಯನ್ನು ಮುಂದೆ ಕೂರಿಸಿಕೊಂಡು ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು. ಬೈಕ್ ಮುಂದೆ ಕುಳಿತಿದ್ದ ಹುಡುಗಿ ಹುಡುಗನ್ನು ಗಟ್ಟಿಯಾಗಿ ತಬ್ಬಿಕೊಂಡಿರುವುದನ್ನು ಗಮನಿಸಬಹುದು. ರಸ್ತೆಯುದ್ದಕ್ಕೂ ಈ ಜೋಡಿ ಹೀಗೆಯೇ ಸಾಗಿದೆ. ಈ ವಿಡಿಯೋವನ್ನು 𝖀𝖗𝖇𝖆𝖓 𝖀𝖙𝖘𝖆𝖛  ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. "ಈಡಿಯಟ್ಸ್ ಆಫ್ ದೆಹಲಿ, ಸಮಯ- 7:15 PM, ದಿನ- ಭಾನುವಾರ, 16-ಜುಲೈ, ಔಟರ್ ರಿಂಗ್ ರೋಡ್ ಫ್ಲೈಓವರ್ ಹತ್ತಿರ, ಮಂಗೋಲ್ಪುರಿ" ಎಂಬ ಶೀರ್ಷಿಕೆಯೊಂದಿಗೆ ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. 

 

ವೀಡಿಯೊಗೆ ಸಾರ್ವಜನಿಕರ ಪ್ರತಿಕ್ರಿಯೆ : 
ಈ ವಿಡಿಯೋವನ್ನು ದೆಹಲಿ ಟ್ರಾಫಿಕ್ ಪೊಲೀಸರಿಗೆ ಟ್ಯಾಗ್  ಮಾಡಲಾಗಿದೆ. ಈ ವಿಡಿಯೋಗೆ ಪ್ರತಿಕ್ರಿಯಿಸಿದ ದೆಹಲಿ ಟ್ರಾಫಿಕ್ ಪೋಲೀಸ್ ಸೆಂಟಿನೆಲ್ ಅಪ್ಲಿಕೇಶನ್‌ನಲ್ಲಿಇಂಥಹ ಟ್ರಾಫಿಕ್ ಉಲ್ಲಂಘನೆಗಳ ಬಗ್ಗೆ ರಿಪೋರ್ಟ್ ಮಾಡುವಂತೆ ಹೇಳಿದೆ. ಮತ್ತೊಬ್ಬರು ಬಳಕೆದಾರರು ಇಬ್ಬರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. 

ಇದನ್ನೂ ಓದಿ : ಈ ಮರ ಬಿಡುವುದು ಹೂವು ಹಣ್ಣುಗಳನ್ನಲ್ಲ ರಾಶಿ ರಾಶಿ ಹಾವುಗಳನ್ನು ! ಇಲ್ಲಿದೆ ವಿಡಿಯೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News