ಈ ಮರ ಬಿಡುವುದು ಹೂವು ಹಣ್ಣುಗಳನ್ನಲ್ಲ ರಾಶಿ ರಾಶಿ ಹಾವುಗಳನ್ನು ! ಇಲ್ಲಿದೆ ವಿಡಿಯೋ

Snake garden Video:ಹಾವಿನ ಉದ್ಯಾನದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?  ಕೇಳುವುದಕ್ಕೆ ತಮಾಷೆಯಂತೆ ತೋರುತ್ತದೆಯಾದರೂ, ಹಾವುಗಳ ಉದ್ಯಾನವು ನಿಜವಾಗಿಯೂ ಇದೆ.

Written by - Ranjitha R K | Last Updated : Jul 18, 2023, 01:04 PM IST
  • ಮನೆಯ ಮುಂದೆ ಒಂದು ಉದ್ಯಾನವಿದ್ದರೆ ಎಷ್ಟು ಸೊಗಸು
  • ಆದರೆ ಉದ್ಯಾನ ತುಂಬಾ ಹಾವುಗಳಿದ್ದರೆ ?
  • snake ಗಾರ್ಡನ್ ವಿಡಿಯೋ ಇಲ್ಲಿದೆ
ಈ ಮರ ಬಿಡುವುದು ಹೂವು ಹಣ್ಣುಗಳನ್ನಲ್ಲ ರಾಶಿ ರಾಶಿ ಹಾವುಗಳನ್ನು ! ಇಲ್ಲಿದೆ ವಿಡಿಯೋ  title=

Snake garden Video : ಮನೆಯ ಮುಂದೆ ಒಂದು ಉದ್ಯಾನವಿದ್ದರೆ ಎಷ್ಟು ಸೊಗಸು. ಉದ್ಯಾನವನದ ಸಸಿಗಳು ಬಿಡುವ ಹೂವು ಹಣ್ಣುಗಳು ಕಣ್ಣಿಗೆ ಮುದ ನೀಡುತ್ತವೆ. ಹಳ್ಳಿಗಳಲ್ಲಿ, ಮಾವು, ಹಲಸು, ಪೇರಳೆ, ಮತ್ತು ಜಾಮೂನ್ ಹೀಗೆ ಅನೇಕ ಹಣ್ಣುಗಳ ತೋಟವಿರುತ್ತದೆ. ಹೀಗೆ ತಾವು ನೆಟ್ಟು ಬೆಳೆಸಿದ ತೋಟದಲ್ಲಿ ಬೆಳೆಯುವ ಹೂವು ಹಣ್ಣುಗಳನ್ನು ಕೀಳುವ ಸಂಭ್ರಮವೇ ಬೇರೆ. ಇತ್ತೀಚಿಗೆ ಮನೆಯ ಮುಂದೆ ಇರುವ ಸಣ್ಣ ಜಾಗದಲ್ಲಿಯೂ ಹೂವು ಹಣ್ಣಿನ ಗಿಡಗಳನ್ನು ನೆಡುವ ಪರಂಪರೆ ಬೆಳೆಯುತ್ತಿದೆ. 

ಆದರೆ ಹಾವಿನ ಉದ್ಯಾನದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಕೇಳುವುದಕ್ಕೆ ತಮಾಷೆಯಂತೆ ತೋರುತ್ತದೆಯಾದರೂ, ಹಾವುಗಳ ಉದ್ಯಾನವು ನಿಜವಾಗಿಯೂ ಇದೆ. ವಿಯೆಟ್ನಾಂನಲ್ಲಿ ವಿಶಿಷ್ಟವಾದ ಹಾವಿನ ಉದ್ಯಾನವಿದೆ. ಇದನ್ನು ಟ್ರೈ ರಾನ್ ಡಾಂಗ್ ಟಾಮ್ ಎಂದು ಕರೆಯಲಾಗುತ್ತದೆ. ಈ ಫಾರ್ಮ್ 12 ಹೆಕ್ಟೇರ್‌ಗಳಷ್ಟು ವಿಸ್ತಾರವಾಗಿದ್ದು, ಈ ಉದ್ಯಾನದ ಗಿಡಗಳ ತುಂಬಾ ಹಾವುಗಳೇ ಇರುವುದು. 

ಇದನ್ನೂ ಓದಿ : ಹುಡುಗಿಯರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ 'ಆಟಾ-ಸಾಟಾ' ವಿವಾಹದ ಬಗ್ಗೆ ನಿಮಗೆ ತಿಳಿದಿದೆಯಾ?

 ಮರದ ಮೇಲೆ ನೇತಾಡುತ್ತಿರುತ್ತವೆ ಅಪಾಯಕಾರಿ ಹಾವುಗಳು  : 
ಈ ಗಾರ್ಡನ್ ಬಹಲ್ ವಿಶೇಷವಾದದ್ದು. ಏಕೆಂದರೆ ಇಲ್ಲಿರುವ ಸಸಿಯ ರೆಂಬೆ ಕೊಂಬೆಗಳಲ್ಲಿ ಹಣ್ಣುಗಳ ಬದಲಿಗೆ ಹಾವುಗಳಿವೆ. ಕೊಂಬೆಗಳ ಮೇಲೆ ಹಾವು ನೇತಾಡುತ್ತದೆ. ಇದು ಇಲ್ಲಿಗೆ ಭೇಟಿ ನೀಡುವವರನ್ನು ಬೆಕ್ಕಸ ಬೆರಗಾಗಿಸುತ್ತದೆ.   400ಕ್ಕೂ ಹೆಚ್ಚು ಜಾತಿಯ ವಿಷಕಾರಿ ಹಾವುಗಳು ಈ ಜಮೀನಿನಲ್ಲಿ ವಾಸಿಸುತ್ತಿವೆ. ಈ ಹಾವುಗಳನ್ನು ಅವುಗಳ ವಿಷಕ್ಕಾಗಿಯೇ ಸಾಕಲಾಗುತ್ತದೆ. ಇದನ್ನು ಔಷಧಗಳು ಮತ್ತು ಆಂಟಿ ಡಾಟ್ಸ್  ಉತ್ಪಾದಿಸಲು ಬಳಸಲಾಗುತ್ತದೆ. ಜಮೀನಿನಲ್ಲಿ ಕಂಡುಬರುವ ಬಹುತೇಕ ಹಾವು ಪ್ರಭೇದಗಳಿಗೆ  ಆಂಟಿ ಡಾಟ್ಸ್ ಗಳನ್ನೂ ಯಶಸ್ವಿಯಾಗಿ ಸಿದ್ಧಪಡಿಸಲಾಗಿದೆ.

ಇಲ್ಲಿದೆ ಸ್ನೇಕ್ ಗಾರ್ಡನ್ ವೀಡಿಯೊ  : 

 

ಇದನ್ನೂ ಓದಿ : ನಡುರಸ್ತೆಯಲ್ಲಿ ಹಾವುಗಳ ಪ್ರಣಯ : ಮೈ ನವಿರೇಳಿಸುವ ವಿಡಿಯೋ

 ಇವುಗಳ ವಿಷದಿಂದಲೇ ಅನೇಕರಿಗೆ ಜೀವದಾನ : 
ಈ ಸ್ಥಳವು ಸಂಶೋಧನೆ ಆಧಾರಿತವಾಗಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಡಾಂಗ್ ಟಾಮ್ ಸ್ನೇಕ್ ಫಾರ್ಮ್‌ಗೆ ಭೇಟಿ ನೀಡುತ್ತಾರೆ. ಮರದ ಕೊಂಬೆಗಳಿಂದ ನೇತಾಡುವ ಹಾವುಗಳನ್ನು ಕಂಡು  ಮಂತ್ರಮುಗ್ಧರಾಗುತ್ತಾರೆ.  ಪ್ರತಿ ವರ್ಷ ಸುಮಾರು 1,500 ಜನರು ಹಾವಿನ ದಾಳಿಗೆ ಒಳಗಾದ ನಂತರ ಡಾಂಗ್ ಟಾಮ್ ಸ್ನೇಕ್ ಫಾರ್ಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ವಿಶೇಷ ಚಿಕಿತ್ಸೆಗಳ ಲಭ್ಯತೆ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯು ಹಾವು ಕಡಿತದ ಘಟನೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಕೊಡುಗೆ ನೀಡುತ್ತದೆ.  ಸಾಮಾಜಿಕ ಜಾಲತಾಣಗಳಲ್ಲಿ ಟ್ರಿನ್ ಡ್ಯಾಂಗ್ ಟಾಮ್ ಹಾವಿನ ಸಾಕಣೆಯ ವಿಡಿಯೋ ವೈರಲ್ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News