Wedding Video: ಅಂಥ ಅರ್ಜೆಂಟ್ ಏನಿತ್ತು? ಸಪ್ತಪದಿ ತುಳಿಯುವ ಮುನ್ನ ಈ ಜೋಡಿ ಮಾಡಿದ ಕೆಲಸ ನೋಡಿ !

Wedding Video: ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ವಧು- ವರರು ಮಾಡಿರುವ ಕೆಲಸಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಇದು ಯಾವ ರೀತಿಯ ನಶೆ ಎಂದು ಪ್ರಶ್ನೆ ಮಾಡಿದ್ದಾರೆ. 

Written by - Ranjitha R K | Last Updated : Jan 30, 2023, 04:01 PM IST
  • ಇದೀಗ ಮದುವೆಯ ಸೀಸನ್ ಶುರುವಾಗಿದೆ.
  • ಸಾಮಾಜಿಕ ಮಾಧ್ಯಮದಲ್ಲಿ ಮಾಡುವೆ ವಿಡಿಯೋ ಕಾಣಿಸುತ್ತಿದೆ.
  • ಎಲ್ಲರೂ ಹುಬ್ಬೇರುವಂತೆ ಮಾಡುವ ವಿಡಿಯೋ
Wedding Video: ಅಂಥ ಅರ್ಜೆಂಟ್ ಏನಿತ್ತು? ಸಪ್ತಪದಿ ತುಳಿಯುವ ಮುನ್ನ ಈ ಜೋಡಿ ಮಾಡಿದ ಕೆಲಸ ನೋಡಿ !  title=

Wedding Video : ಇದೀಗ ಮದುವೆಯ ಸೀಸನ್ ಶುರುವಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೂಡಾ ಮದುವೆಗೆ ಸಂಬಂಧಪಟ್ಟ ಹೊಸ ಹೊಸ ವಿಡಿಯೋಗಳು ಕಾಣಿಸಿಕೊಳ್ಳುತ್ತಿವೆ. ಸಾಮಾನ್ಯವಾಗಿ ಮದುವೆ ಅಂದ ಕೂಡಲೇ ಅಲ್ಲಿ ವಧು- ವರನ ಬಟ್ಟೆ, ಮೇಕ್ ಅಪ್, ವೇದಿಕೆಗೆ ಅವರ ಎಂಟ್ರಿ, ಡಾನ್ಸ್ ಗಮನ ಸೆಳೆಯುತ್ತವೆ. ಇನ್ನು ವಧು- ವರನ ಗೆಳೆಯರ ಮೋಜು ಮಸ್ತಿ ಕೀಟಲೆಗಳು ಸುದ್ದಿ ಮಾಡುತ್ತವೆ. ಇನ್ನು ಒಂದು ಹೆಜ್ಜೆ ಮುಂದೆ ಹೋದರೆ ಫೋಟೋ ಶೂಟ್ ನಲ್ಲಿ ಕೆಲವೊಮ್ಮೆ ಫೋಟೋ ಗ್ರಾಫರ್ ಅತಿರೇಕಕ್ಕೆ ಹೋಗಿ ಕೊಡಿಸುವ ಫೋಸ್ ಗಳು ಕೂಡಾ ವೈರಲ್ ಆಗುತ್ತವೆ. ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಇಲ್ಲಿ ವಧು- ವರರು ಮಾಡಿರುವ ಕೆಲಸಕ್ಕೆ ಎಲ್ಲರೂ ಬೆರಗಾಗಿದ್ದಾರೆ. ಇದು ಯಾವ ರೀತಿಯ ನಶೆ ಎಂದು ಪ್ರಶ್ನೆ ಮಾಡಿದ್ದಾರೆ. 

ಇಲ್ಲಿ  ಮದುವೆಯ ಆರತಕ್ಷತೆ ಮುಗಿದಿದೆ. ಇದಾದ ನಂತರ ವಧು ಮತ್ತು ವರ ಇಬ್ಬರೂ ಊಟಕ್ಕೆ ಕುಳಿತಿದ್ದಾರೆ. ಜೊತೆಯಲ್ಲಿ ಕುಳಿತು ಊಟ ಕೂಡಾ ಮಾಡುತ್ತಿದ್ದಾರೆ. ಆದರೆ ಊಟದ ಮಧ್ಯೆ ಎದುರಿಗಿತ್ತಿರುವ ಮೊಬೈಲ್ ನಲ್ಲಿ ಬಿಗ್ ಬಾಸ್ ನೋಡುತ್ತಿದ್ದಾರೆ. ತಾವಿಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ.    ತಮ್ಮಿಬ್ಬರ ಜೀವನದಲ್ಲಿಯೂ ಇದು ಬಹಳ ದೊಡ್ಡ ದಿನ ಎನ್ನುವುದು ಇಬ್ಬರ ಮನಸ್ಸಿನಲ್ಲಿಯೂ ಇದ್ದಂತೆ ಕಾಣುವುದಿಲ್ಲ. 

ಇದನ್ನೂ ಓದಿ : Viral Video: ರೊಟ್ಟಿ ಮಾಡುತ್ತಾ ಹೀಗೊಂದು ಹಾಡು ಹಾಡಿದ ಮಹಿಳೆ, ಬಿಗ್ ಆಫರ್ ಕೊಟ್ಟ ನಟ ಸೋನು ಸೂದ್!

ಇಬ್ಬರೂ ಎಷ್ಟು ಗಾಢವಾಗಿ ಬಿಗ್ ಬಾಸ್ ಶೋ ನೋಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದರೆ ತಮ್ಮನ್ನು ಇಲ್ಲಿ ನೆರೆದಿರುವವರು ನೋಡುತ್ತಿದ್ದಾರೆ ಎನ್ನುವ ಅಳಕು ಕೂಡಾ ಅವರಿಗಿಲ್ಲ. ಇಬ್ಬರೂ ಶೋ ಬಗ್ಗೆ ಮಾತುಕತೆ ನಡೆಸುತ್ತಿರುವುದು ತಮ್ಮ ನೆಚ್ಚ್ಬಿನ ಸ್ಪರ್ಧಿಯನ್ನು ಬೆಂಬಲಿಸುತ್ತಿರುವುದನ್ನು ಕಾಣಬಹುದು.  ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. 

 

 
 
 
 

 
 
 
 
 
 
 
 
 
 
 

A post shared by Payal Raut (@_payalraut_)

ಇದನ್ನೂ ಓದಿ : Viral Video: ಸೆಲ್ಪಿ ತೆಗೆಸಿಕೊಳ್ಳಲು ಬಂದ ಅಭಿಮಾನಿಯ ಪೋನ್ ಕಿತ್ತೆಸೆದ ರಣಬೀರ್ ಕಪೂರ್!

ಈ ವೀಡಿಯೊವನ್ನು _payalraut_ ಎಂಬ ಹೆಸರಿನ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಹಂಚಿಕೊಳ್ಳುವಾಗ, "ಟ್ಯಾಗ್ ಕರೋ ಬಿಗ್ ಬಾಸ್ ಫ್ಯಾನ್ ಕೋ" ಎಂಬ ಶೀರ್ಷಿಕೆಯನ್ನು ಕೂಡಾ ಹಾಕಿದ್ದಾರೆ. ವೀಡಿಯೋ ನೋಡಿ ಹಲವು ಮಂದಿ ಹಲವು ರೀತಿ ಪ್ರತಿಕ್ರಿಯಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News