ಸಾಮಾನ್ಯ ಹಕ್ಕಿಗಳಂತೆ ಹಾರುವ ಕೋಳಿಯಿದು ! ಮೈಲಿದೂರ ಹಾರಬಲ್ಲ ಕೋಳಿಯ ವಿಡಿಯೋ

Hen Flying Video : ಒಂದು ಅಂದಾಜು ಲೆಕ್ಕದಲ್ಲಿ ಹೇಳುವುದಾದರೂ ಕೋಳಿ ಕೆಲವು ಅಡಿಗಳಷ್ಟು ಮಾತ್ರ  ಹಾರಬಲ್ಲವು ಎನ್ನುವುದು ಸಾಮಾನ್ಯ ಉತ್ತರ. ಆದರೆ ಪ್ರಕೃತಿ ವೈಚಿತ್ರ್ಯ ಎನ್ನುವಂತೆ ಇಲ್ಲೊಂದು ಕೋಳಿ ಬಲು ದೊಡ್ಡದಾದ ನದಿಯನ್ನೇ ಹಾರಿ ದಾಟಿದೆ. 

Written by - Ranjitha R K | Last Updated : Jul 28, 2023, 12:25 PM IST
  • ಕೋಳಿಗಳ ಬಗ್ಗೆ ಈ ಒಂದು ಪ್ರಶ್ನೆ ಸದಾ ಕಾಡುತ್ತಿರುತ್ತದೆ
  • ಕೋಳಿಗಳು ಹಾರಲು ಸಾಧ್ಯವಾಗದಿರುವ ಹಕ್ಕಿ.
  • ಆದರೆ ಕೋಳಿ ಮೈಲಿ ದೂರ ಹಾರುವ ವಿಡಿಯೋ ಇಲ್ಲಿದೆ
ಸಾಮಾನ್ಯ ಹಕ್ಕಿಗಳಂತೆ ಹಾರುವ ಕೋಳಿಯಿದು ! ಮೈಲಿದೂರ ಹಾರಬಲ್ಲ ಕೋಳಿಯ ವಿಡಿಯೋ  title=

Hen Flying Video : ಕೋಳಿಗಳ ಬಗ್ಗೆ ಈ ಒಂದು ಪ್ರಶ್ನೆ ಸದಾ ಕಾಡುತ್ತಿರುತ್ತದೆ. ಕೋಳಿ ಮೊದಲಾ ಮೊಟ್ಟೆ ಮೊದಲಾ ಎನ್ನುವ  ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಇನ್ನು ಕೋಳಿಗಳು ಹಾರಲು ಸಾಧ್ಯವಾಗದಿರುವ ಹಕ್ಕಿ. ಕೋಳಿಗಳು ಯಾಕೆ ಹಾರಲು ಸಾಧ್ಯವಾಗುವುದಿಲ್ಲ ಎನ್ನುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಅದೆಂದರೆ ಅವುಗಳ ಮೂಳೆ ರಚನೆ ಮತ್ತು ತೂಕ. ಕೋಳಿಗಳು  ಭಾರವಾದ ಮೂಳೆಗಳು ಮತ್ತು ದೇಹ ತೂಕವನ್ನು ಹೊಂದಿರುತ್ತವೆ. ಕೋಳಿಯ ದೇಹವು ತುಂಬಾ ದೊಡ್ಡದಾಗಿದ್ದು, ಅವುಗಳ ಸಣ್ಣ ರೆಕ್ಕೆ ಈ ಭಾರವಾದ ದೇಹವನ್ನು ಎತ್ತಿಕೊಂಡು ಹಾರುವುದು ಕಷ್ಟವಾಗುತ್ತವೆ. ಹಾಗಾಗಿ ಕೋಳಿ ಸ್ವಲ್ಪ ದೂರ ಮಾತ್ರ ಹಾರಬಲ್ಲದು.  

ಮನೆಯಲ್ಲಿ ಸಾಕಿರುವ ಕೋಳಿಗಳು ಕೂಡಾ ಕೆಲವೊಮೆ ಸ್ವಲ್ಪ ದೂರವರೆಗೆ ರೆಕ್ಕೆ ಬಡಿಯುತ್ತದೆ. ನಂತರ ಮತ್ತೆ ಅಲ್ಲೇ ಇಳಿದು ಬಿಡುತ್ತದೆ. ಇನ್ನು ಕಾಗೆ ಹದ್ದುಗಳು ತಮ್ಮ ಮರಿಗಳನ್ನು ಬೇಟೆಯಾಡಲು ಬಂದಾಗ ಅವುಗಳನ್ನು ಅಟ್ಟಿಸಿಕೊಂಡು ಹೋಗುವಾಗಲೂ ಸ್ವಲ್ಪ ಎತ್ತರಕ್ಕೆ ಹಾರುತ್ತವೆ.  ಒಂದು ಅಂದಾಜು ಲೆಕ್ಕದಲ್ಲಿ ಹೇಳುವುದಾದರೂ ಕೋಳಿ ಕೆಲವು ಅಡಿಗಳಷ್ಟು ಮಾತ್ರ  ಹಾರಬಲ್ಲವು ಎನ್ನುವುದು ಸಾಮಾನ್ಯ ಉತ್ತರ. ಆದರೆ ಪ್ರಕೃತಿ ವೈಚಿತ್ರ್ಯ ಎನ್ನುವಂತೆ ಇಲ್ಲೊಂದು ಕೋಳಿ ಬಲು ದೊಡ್ಡದಾದ ನದಿಯನ್ನೇ ಹಾರಿ ದಾಟಿದೆ. 

ಇದನ್ನೂ ಓದಿ : Viral Video: ಅಪ್ಪಿತಪ್ಪಿಯೂ ಈ ಚೇಳಿನ ಸಾಮ್ರಾಜ್ಯದ ಹತ್ತಿರ ಸುಳಿಯಬೇಡಿ...!

ಕೋಳಿ ಹಾರುವ ಮೂಲಕ ನದಿ ದಾಟುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನದಿಯ ದಡದಲ್ಲಿ ಸುಮಾರು ಕೋಳಿಗಳು ತಮ್ಮ ಪಾಡಿಗೆ ಆಹಾರವನ್ನು ಹೆಕ್ಕಿ ತಿನ್ನುತ್ತಿರುವುದನ್ನು ಕಾಣಬಹುದು. ಆದರೆ ಅದರಲ್ಲಿ ಒಂದು ಹೆಂಟೆ ಮಾತ್ರ ಇದ್ದಕ್ಕಿದ್ದಂತೆ ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ಹಾರಿ ಬಿಡುತ್ತದೆ. ಅಷ್ಟುದ್ದದ ನದಿಯನ್ನು ದಾಟುವ ಧೈರ್ಯ ಆ ಕೋಳಿ ಯಾಕೆ ಮಾಡಿತು ಎನ್ನುವುದು ಆ ಕೋಳಿಗೆನೇ ಗೊತ್ತು. 

ಹಾಗಂತ ಈ ಕೋಳಿ ಗಾತ್ರದಲ್ಲಿ ಸಣ್ಣದಿತ್ತು ಎಂದೆನಲ್ಲ.  ದಷ್ಟ ಪುಷ್ಟವಾಗಿಯೇ ಇರುವ ಕೋಳಿ ಈ ಎತ್ತರಕ್ಕೆ ಹಾರುವುದು ಎಂದರೆ ನಿಜಕ್ಕೂ ಸೋಜಿಗ.  ಕೋಳಿ ನದಿ ದಾಟುವ ವೈರಲ್ ವಿಡಿಯೋ ಇಲ್ಲಿದೆ. 

 

ಇದನ್ನೂ ಓದಿ :ಸಾಗುತ್ತಲೇ ಇದೆ ಜಿಂಕೆಗಳ ಸಾಲು ! ವಾಕಿಂಗ್ ಹೊರಟವರ ಕಣ್ಣಿಗೆ ಹಬ್ಬ

ಈ ವಿಡಿಯೋವನ್ನು Amazing Nature ಎನ್ನುವ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ನೆಟ್ಟಿಗರು ಕೂಡಾ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News