Viral Video : ರಸ್ತೆ ಮೇಲೆ ಬಂದ ಹಿಂಡು ಹಿಂಡು ಹಾವುಗಳು ! ಹಾವುಗಳೊಂದಿಗೆ ಈ ವ್ಯಕ್ತಿಯ ಆಟ

Viral Video : ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಹಾವಿನ ವಿಡಿಯೋಗಳು ಬಹಳ ಸುಲಭವಾಗಿ ವೈರಲ್ ಆಗುತ್ತವೆ. ಹಾವುಗಳ ವಿಡಿಯೋಗಳನ್ನು ಇಷ್ಟ ಪಡುವ ಬಹು ದೊಡ್ಡ ಗುಂಪೇ ಇದೆ.

Written by - Ranjitha R K | Last Updated : Mar 17, 2023, 02:58 PM IST
  • ಆನ್‌ಲೈನ್ ಜಗತ್ತಿನಲ್ಲಿ ಪ್ರತಿದಿನ ಪ್ರತಿ ಕ್ಷಣ ವಿಡಿಯೋಗಳು ಅಪ್ ಲೋಡ್ ಆಗುತ್ತಿರುತ್ತವೆ
  • ಕೆಲವು ವಿಡಿಯೋಗಳು ನೋಡುಗರನ್ನು ಬೆಚ್ಚಿ ಬೀಳಿಸುತ್ತವೆ.
  • ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತವೆ.
Viral Video : ರಸ್ತೆ ಮೇಲೆ ಬಂದ ಹಿಂಡು ಹಿಂಡು ಹಾವುಗಳು ! ಹಾವುಗಳೊಂದಿಗೆ ಈ ವ್ಯಕ್ತಿಯ ಆಟ  title=

Viral Video : ಆನ್‌ಲೈನ್ ಜಗತ್ತಿನಲ್ಲಿ ಪ್ರತಿದಿನ ಪ್ರತಿ ಕ್ಷಣ ವಿಡಿಯೋಗಳು ಅಪ್ ಲೋಡ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು ನೋಡುಗರನ್ನು ಬೆಚ್ಚಿ ಬೀಳಿಸುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಹಾವಿನ ವಿಡಿಯೋಗಳು ಬಹಳ ಸುಲಭವಾಗಿ ವೈರಲ್ ಆಗುತ್ತವೆ. ಹಾವುಗಳ ವಿಡಿಯೋಗಳನ್ನು ಇಷ್ಟಪಡುವ ಬಹು ದೊಡ್ಡ ಗುಂಪೇ ಇದೆ. ಹಾಗಾಗಿ ಹಾವಿನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತವೆ. 

ಕಣ್ಣ ಮುಂದೆ ಒಂದು ಸಣ್ಣ ಹಾವು ಬಂದು ನಿಂತರೂ ಹೌಹಾರಿ ಬಿಡುತ್ತೇವೆ. ಅಂಥದರಲ್ಲಿ ಈ ವ್ಯಕ್ತಿ  ಹಿಂಡು ಹಿಂಡು ಹಾವುಗಳ ಮಧ್ಯೆ ನಿಂತಿದ್ದಾನೆ. ಹಾವುಗಳ ಮಧ್ಯೆ ನಿಂತಿರುವುದು ಮಾತ್ರವಲ್ಲ, ಅವುಗಳನ್ನು ಕೈಯ್ಯಲ್ಲಿ ಮುಟ್ಟುತ್ತಿದ್ದಾನೆ ಬೇರೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ, ಒಂದೆರಡಲ್ಲ ಹಾವಿನ ಸೈನ್ಯವೇ ಇದೆ. ಆದರೆ, ಅಷ್ಟು ಹಾವುಗಳಿದ್ದರೂ ಈ ವ್ಯಕ್ತಿಗೆ ಯಾವುದೇ ರೀತಿಯ ಭಯ ಕಾಡುವುದೇ ಇಲ್ಲ. ಈ ವ್ಯಕ್ತಿ ಬಹಳ ಸಲೀಸಾಗಿ ಹಾವುಗಳನ್ನು ಬೆಟ್ಟದ ಕೆಳಗೆ ಎಸೆಯಲು ಪ್ರಾರಂಭಿಸುತ್ತಾನೆ.  

ಇದನ್ನೂ ಓದಿ : Viral Video: ನಿಂಗಿದು ಬೇಕಿತ್ತಾ…! ಬೆಟ್ ಕಟ್ಟಿ ಮೊಸಳೆ ಟಚ್ ಮಾಡಲು ಹೋದ ತಾತನಿಗೆ… ವಿಡಿಯೋ ನೋಡಿ

 

ಇದನ್ನೂ ಓದಿ : Viral Video: ಸಿಂಹಗಳ ಹಿಂಡಿಗೆ ತೊಡೆತಟ್ಟಿದ ಕಾಡುಕೋಣ, ಒಂದೇ ಗುದ್ದಿಗೆ ಚಿತಪಟ್ಟಾದ ಕಾಡಿನ ರಾಜ

ಹಾವನ್ನು ಎತ್ತಿ ಬಿಸಾಡುತ್ತಿರುವ ರೀತಿ ನಿಜಕ್ಕೂ ಮೈ ಜುಮ್ಮೆನ್ನಿಸುವಂತಿದೆ. ಈ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾವುಗಳಿಗೆ ಸಂಬಂಧಿಸಿದ ಈ ವೀಡಿಯೋವನ್ನು  animalsinthenaturetoday ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ಇದನ್ನು ನೋಡಿದ ನಂತರ ವೀಕ್ಷಕರು ಕೂಡಾ ಅದ್ಭುತವಾದ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News