ಚಲಿಸುವ ರೈಲಿನಲ್ಲಿ ಕಳ್ಳತನ ಮಾಡಿ ಜಿಗಿದು ಪಾರಾದ ಕಳ್ಳ..! ವಿಡಿಯೋ ವೈರಲ್‌

Theft in running train : ಪೊಲೀಸರು ಎಷ್ಟೇ ಜಾಗೃತ ವಹಿಸಿದರೂ ಸಹ ಕಳ್ಳರು ತಮ್ಮ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ. ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ದೋಚಲು ಖದೀಮರು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇಂತಹ ಕೆಲವೊಂದಿಷ್ಟು ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿವೆ.. ಈ ಪೈಕಿ ಇಲ್ಲೊಂದು ವಿಡಿಯೋ ಇದೆ ನೋಡಿ..

Written by - Krishna N K | Last Updated : Mar 28, 2024, 07:29 PM IST
    • ಎಷ್ಟೇ ಜಾಗೃತ ವಹಿಸಿದರೂ ಸಹ ಕಳ್ಳರು ತಮ್ಮ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ.
    • ಕಳ್ಳರು ದೋಚಲು ಖದೀಮರು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ.
    • ಅವುಗಳ ಪೈಕಿ ಇಲ್ಲೊಂದು ಭಯಾನಕ ವಿಡಿಯೋ ಇದೆ ನೋಡಿ..
ಚಲಿಸುವ ರೈಲಿನಲ್ಲಿ ಕಳ್ಳತನ ಮಾಡಿ ಜಿಗಿದು ಪಾರಾದ ಕಳ್ಳ..! ವಿಡಿಯೋ ವೈರಲ್‌ title=

Viral video : ಕಳ್ಳನೊಬ್ಬ ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯ ಬಂಗಾರದ ಸರ ಕದ್ದು, ಜಿಗಿದು ಪರಾರಿಯಾಗಿರುವ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ನೋಡಿದ ನೆಟ್ಟಿಗರು ಗಾಬರಿಯಾಗಿದ್ದಾರೆ.. ಅಲ್ಲದೆ, ರೈಲು ಪ್ರಯಾಣಿಕರಿಗೆ ಎಚ್ಚರವಾಗಿರುವಂತೆ ಸಲಹೆ ನೀಡಿದ್ದಾರೆ.

ಭಾರತದಲ್ಲಿ ರೈಲು ಕಳ್ಳತನ ಗಣನೀಯವಾಗಿ ಏರಿಕೆಯಾಗುತ್ತಿವೆ. ಪೊಲೀಸರು ಎಷ್ಟೇ ಜಾಗೃತ ವಹಿಸಿದರೂ ಸಹ ಕಳ್ಳ ತಮ್ಮ ಜಾಣ್ಮೆ ಮೆರೆಯುತ್ತಿದ್ದಾರೆ. ಪ್ರಯಾಣಿಕರ ಬೆಲೆಬಾಳುವ ವಸ್ತುಗಳನ್ನು ದೋಚಲು ವಿವಿಧ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇಂತಹ ಕೆಲವೊಂದಿಷ್ಟು ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿವೆ.. ಅವುಗಳ ಪೈಕಿ ಇಲ್ಲೊಂದು ಭಯಾನಕ ವಿಡಿಯೋ ಇದೆ ನೋಡಿ..

ಇದನ್ನೂ ಓದಿ:ʼಬಡೆ ಮಿಯಾನ್ ಚೋಟೆ ಮಿಯಾನ್ ಟ್ರೇಲರ್ ಔಟ್‌..! ಇದು ಅಕ್ಕಿ-ಟೈಗರ್‌ ಪವರ್ ಪ್ಯಾಕ್ಡ್ ಶೋ

ಹೌದು.. ರೈಲಿನಲ್ಲಿ ಪ್ರಯಾಣಿಸುವಾಗ, ಜಾಗರೂಕರಾಗಿರಿ ಎಂಬ ಎಚ್ಚರಿಕೆಯ ಸಂದೇಶದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ನೆಟ್ಟಿಗರನ್ನು ದಂಗು ಬಡಿಸುತ್ತಿದೆ. ವಿಡಿಯೋದಲ್ಲಿ ಚಲಿಸುತ್ತಿರುವ ರೈಲಿನ ಬಾಗಿಲ ಬಳಿ ನಿಂತು ಹೊಂಚು ಹಾಕುವ ಕಳ್ಳ, ಮಹಿಳೆಯ ಸರ ಕಸಿದುಕೊಂಡು ರೈಲಿನಿಂದ ಜಿಗಿಯುತ್ತಾನೆ..

ಚಲಿಸುವ ರೈಲಿನಿಂದ ಜಿಗಿದ ಕಳ್ಳ ಭೀಕರವಾಗಿ ನೆಲಕ್ಕೆ ಬೀಳುತ್ತಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಣದ ಆಸೆಗೆ ಸರ ಕದಿಯಲು ಬಂದ ಕಳ್ಳ ಪ್ರಾಣವನ್ನು ಲೆಕ್ಕಿಸದೆ ಟ್ರೈನ್‌ನಿಂದ ಜಿಗಿದದ್ದು ಮಾತ್ರ ವಿಪರ್ಯಾಸ. ಸಧ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News