ಸ್ಟ್ರೀಟ್ ಫುಡ್ ಪಾತ್ರೆಯಲ್ಲಿ ಮೈ ತುರಿಸಿಕೊಂಡ…ಮತ್ತೆ ಅದನ್ನೇ ಅಡುಗೆಗೆ ಬಳಸಿದ: ಈ ಕೊಳಕನ ವಿಡಿಯೋ ನೋಡಿ

ಹೌದು ಸಾಮಾನ್ಯವಾಗಿ ಜನರಿಗೆ ಹೊರಗಿನ ಸ್ಟ್ರೀಟ್ ಫುಡ್ ಗಳು ಬಹಳ ಇಷ್ಟವಾಗುತ್ತವೆ. ಆದರೆ ಅವುಗಳು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಎಷ್ಟೇ ಹೇಳಿದರೂ ಸಹ ಜನರು ತಮ್ಮ ನೆಚ್ಚಿನ ಫುಡ್ ಗಳನ್ನು ಹೊರಗಡೆಯೇ ಸೇವಿಸುತ್ತಾರೆ.

Written by - Bhavishya Shetty | Last Updated : Oct 3, 2022, 07:56 PM IST
    • ಸಾಮಾನ್ಯವಾಗಿ ಜನರಿಗೆ ಹೊರಗಿನ ಸ್ಟ್ರೀಟ್ ಫುಡ್ ಗಳು ಬಹಳ ಇಷ್ಟವಾಗುತ್ತವೆ
    • ಆದರೆ ಇದನ್ನು ತಯಾರು ಮಾಡುವ ಬಗೆ ನೋಡಿದ್ರೆ ವಾಕರಿಕೆ ಬರೋದು ಖಂಡಿತ
    • ಕೆಲವರಂತೂ ಗಲೀಜು ಮಾಡಿಕೊಂಡು ಕೊಳಕು ರೀತಿಯಲ್ಲಿ ಅಡುಗೆ ತಯಾರಿಸುತ್ತಾರೆ
ಸ್ಟ್ರೀಟ್ ಫುಡ್ ಪಾತ್ರೆಯಲ್ಲಿ ಮೈ ತುರಿಸಿಕೊಂಡ…ಮತ್ತೆ ಅದನ್ನೇ ಅಡುಗೆಗೆ ಬಳಸಿದ: ಈ ಕೊಳಕನ ವಿಡಿಯೋ ನೋಡಿ title=
street food dirty video

ಅಂತರ್ಜಾಲದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಸ್ಟ್ರೀಟ್ ಫುಡ್ ಮಾಡುವ ವ್ಯಕ್ತಿ ಏನು ಮಾಡುತ್ತಿದ್ದಾನೆ ಎಂಬುದನ್ನು ನೀವು ನೋಡಬಹುದು. ಈ ವಿಡಿಯೋ ನೋಡಿದ ನಂತರ ನೀವು ಹೊರಗಿನ ಆಹಾರವನ್ನು ತಿನ್ನಬಹುದೇ? ಖಂಡಿತವಾಗಿಯೂ ಹಿಂಜರಿಯುತ್ತೀರಿ.

ಇದನ್ನೂ ಓದಿ: ಬೆಚ್ಚಗೆ ಮಲಗಿದ್ದ ಹೆಬ್ಬಾವಿನ ಮೇಲೆ ಮೊಸಳೆಯ ಟೆರರ್ ಅಟ್ಯಾಕ್: ಮೈ ಜುಂ ಎನಿಸುವ ಭಯಾನಕ ವಿಡಿಯೋ ನೋಡಿ

ಹೌದು ಸಾಮಾನ್ಯವಾಗಿ ಜನರಿಗೆ ಹೊರಗಿನ ಸ್ಟ್ರೀಟ್ ಫುಡ್ ಗಳು ಬಹಳ ಇಷ್ಟವಾಗುತ್ತವೆ. ಆದರೆ ಅವುಗಳು ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗುತ್ತದೆ. ಎಷ್ಟೇ ಹೇಳಿದರೂ ಸಹ ಜನರು ತಮ್ಮ ನೆಚ್ಚಿನ ಫುಡ್ ಗಳನ್ನು ಹೊರಗಡೆಯೇ ಸೇವಿಸುತ್ತಾರೆ. ಆದರೆ ಇದನ್ನು ತಯಾರು ಮಾಡುವ ಬಗೆ ನೋಡಿದ್ರೆ ವಾಕರಿಕೆ ಬರೋದು ಖಂಡಿತ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ: 

https://zeenews.india.com/hindi/india/up-uttarakhand/video/most-shocking-and-disgusting-viral-video-of-street-food-vendor-itching-with-the-utensil-makes-food-in-upns/1370616

ಕೆಲವರಂತೂ ಗಲೀಜು ಮಾಡಿಕೊಂಡು ಕೊಳಕು ರೀತಿಯಲ್ಲಿ ಅಡುಗೆ ತಯಾರಿಸುತ್ತಾರೆ. ಇದಕ್ಕೆ ಪೂರಕ ಎಂಬಂತೆ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಇದೀಗ ಅಂತಹದ್ದೇ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ಇತರರ ಜೊತೆ ಮಾತನಾಡುತ್ತಾ, ಸೌಟಿನಲ್ಲಿ ಬೆನ್ನು ತುರಿಸುತ್ತಿದ್ದಾನೆ. ಅದೇ ಸೌಟನ್ನು ಮತ್ತೆ ಅಡುಗೆಗೆ ಬಳಸುತ್ತಾನೆ. ಈ ದೃಶ್ಯವನ್ನು ರಹಸ್ಯವಾಗಿ ಸೆರೆಹಿಡಿಯಲಾಗಿದೆ. ಸದ್ಯ ಪೋಸ್ಟ್ ಮಾಡಿದ ತಕ್ಷಣ ವೈರಲ್ ಆದ ಈ ವಿಡಿಯೋಗೆ ನೆಟ್ಟಿಗರು ಗರಂ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: PM Modi-Sonia Gandhi : ಪಿಎಂ ಮೋದಿ - ಸೋನಿಯಾ ಗಾಂಧಿ ಮುಖಾಮುಖಿ : ಹೀಗಿತ್ತು ಉಭಯ ನಾಯಕರ ಪ್ರತಿಕ್ರಿಯೆ

ಈ ಘಟನೆ ಉತ್ತರ  ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಇತ್ತೀಚಿಗೆಯಷ್ಟೇ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಪಾನೀಪೂರಿ ಮಾರುತ್ತಿದ್ದ ವ್ಯಕ್ತಿ ಮೂತ್ರವನ್ನು ಆಹಾರಕ್ಕೆ ಬೆರೆಸುತ್ತಿದ್ದ ವಿಡಿಯೋ ಕಂಡುಬಂದಿತ್ತು. ಅಷ್ಟೇ ಅಲ್ಲದೆ, ಕೊಳೆತ ಆಲೂಗಡ್ಡೆಯನ್ನು ಮಸಾಲೆಗೆ ಮಿಶ್ರಣ ಮಾಡುತ್ತಿದ್ದ ಘಟನೆಯ ವಿಡಿಯೋವೂ ವೈರಲ್ ಆಗಿತ್ತು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News