Salt making video : ಆಹಾರದಲ್ಲಿ ಉಪ್ಪಿಗೆ ವಿಶೇಷ ಪ್ರಾಮುಖ್ಯತೆ ಇದೆ. ಅದ್ಯಾವ ಅಡುಗೆಯೇ ಆಗಿರಲಿ ಉಪ್ಪು ಇಲ್ಲ ಎಂದಾದರೆ ಅದಕ್ಕೆ ರುಚಿ ಇಲ್ಲ. ಅದಕ್ಕೆ ಹೇಳುವುದು ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು. ಉಪ್ಪು ಇಲ್ಲದ ಆಹಾರವು ರುಚಿಸಲು ಸಾಧ್ಯವೇ ಇಲ್ಲ. ಆಹಾರಕ್ಕೆ ಎಷ್ಟೇ ಮಸಾಲೆ ಹಾಕಿದರೂ, ಎಣ್ಣೆ ಬೆಣ್ಣೆ ತುಪ್ಪ ಬೆರೆಸಿದರೂ ಉಪ್ಪಿಲ್ಲದೆ ಅದು ನಾಲಗೆಗೆ ಹಿಡಿಸುವುದಿಲ್ಲ. ಹಾಗಾಗಿ ನಮ್ಮ ಪ್ರತಿ ಅಡುಗೆಯಲ್ಲಿಯೂ ಉಪ್ಪು ಬಳಕೆಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರೂ ಸಲಾಡ್, ಹಣ್ಣು, ಜ್ಯೂಸ್ ಇವುಗಳನ್ನು ತಯಾರಿಸುವಾಗ ಅದಕ್ಕೆ ಬ್ಲಾಕ್ ಸಾಲ್ಟ್ ಬಳಸುತ್ತಾರೆ. ಬ್ಲಾಕ್ ಸಾಲ್ಟ್ ಬಳಸುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬ್ಲಾಕ್ ಸಾಲ್ಟ್ ಬಳಸುವುದೇನೋ ಸರಿ. ಆದರೆ ಈ ಬ್ಲಾಕ್ ಸಾಲ್ಟ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎನ್ನುವ ಅರಿವು ನಿಮಗಿದೆಯೇ?
ಇದನ್ನೂ ಓದಿ : Viral Video: ಮಕ್ಕಳ ಎದುರೇ ಇಸ್ರೇಲಿ ಮಹಿಳೆಯನ್ನು ಗುಂಡಿಕ್ಕಿ ಕೊಂದ ಹಮಾಸ್ ಉಗ್ರರು..!
ಈಗ ಮಾರುಕಟ್ಟೆಯಲ್ಲಿ ಹಲವು ಬಗೆಯ ಉಪ್ಪು ಲಭ್ಯವಿದೆ. ಬಿಳಿ ಉಪ್ಪಿನಿಂದ ಪಿಂಕ್ ಉಪ್ಪಿನವರೆಗೆ ಲಭ್ಯವಿದೆ. ಅದರಲ್ಲೂ ಹಲವು ವರ್ಷಗಳಿಂದ ನಾವು ಸಲಾಡ್ ಅಥವಾ ಹಣ್ಣುಗಳಿಗೆ ಬ್ಲಾಕ್ ಸಾಲ್ಟ್ ಬಳಸುತ್ತೇವೆ. ಇದು ರುಚಿಯಲ್ಲಿ ಅದ್ಭುತವಾಗಿದೆ. ಆದರೆ, ಅದನ್ನು ತಯಾರಿಸುವ ಪ್ರಕ್ರಿಯೆಯು ಬಹಳ ದೊಡ್ಡದು. 24 ಗಂಟೆಗಳ ಶ್ರಮದ ನಂತರ ಈ ಬ್ಲಾಕ್ ಸಾಲ್ಟ್ ತಯಾರಾಗುತ್ತದೆ.
ವೈರಲ್ ಆಗಿರುವ ವಿಡಿಯೋ :
ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಸಾಲ್ಟ್ ತಯಾರಿಸುವ ವಿಡಿಯೋವೊಂದು ಹರಿದಾಡುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬ್ಲಾಕ್ ಸಾಲ್ಟ್ ತಯಾರಿಸುವ ಪ್ರಕ್ರಿಯೆಯನ್ನು ತೋರಿಸಲಾಗಿದೆ.
ಕಾರ್ಖಾನೆಯಲ್ಲಿ ಬ್ಲಾಕ್ ಸಾಲ್ಟ್ ತಯಾರಿಸುವ ವೈರಲ್ ವೀಡಿಯೊವನ್ನು ಇಲ್ಲಿ ವೀಕ್ಷಿಸಿ:
ಇದನ್ನೂ ಓದಿ : ನಾಯಿಯ ಹಲ್ಲು ಕಿತ್ತಲು ಹೊರಟ ಮಂಗಗಳ ಕಿತಾಪತಿ ನೋಡಿ..!
ಬ್ಲಾಕ್ ಸಾಲ್ಟ್ ತಯಾರಿಸುವ ವಿಧಾನ :
ಬ್ಲಾಕ್ ಸಾಲ್ಟ್ ತಯಾರಿಸುವ ವಿಧಾನ ಕಠಿಣವಾದದ್ದು ಮತ್ತು ಅತ್ಯಂತ ಅಪಾಯಕಾರಿಯಾದದ್ದು. ಇದನ್ನು ತಯಾರಿಸಲು ಕಾರ್ಖಾನೆಯಲ್ಲಿ ದಿನದ 24 ಗಂಟೆಯೂ ಟೈರ್ಗಳನ್ನು ಸುಡಲಾಗುತ್ತದೆ. ಅಲ್ಲದೆ, ತಯಾರಿಸುವ ಪ್ರಕ್ರಿಯೆ ಕೂಡಾ ಹೈಜೀನ್ ಆಗಿಲ್ಲ. ಹಾಗಾಗಿ ಈ ವಿಡಿಯೋ ವೀಕ್ಷಿಸಿದ ಜನ ಕೂಡಾ ಬ್ಲಾಕ್ ಸಾಲ್ಟ್ ತಿನ್ನಲು ಸುರಕ್ಷಿತವೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇನ್ನು ಮುಂದೆ ಈ ಉಪ್ಪನ್ನು ತಿನ್ನುವುದಿಲ್ಲ ಎಂದು ಕೂಡಾ ಬರೆದುಕೊಂಡಿದ್ದಾರೆ.
( ಸೂಚನೆ : ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.