ದಲಿತ ಯುವಕರಿನಿಗೆ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿದ ಪಾಪಿಗಳು..!

Dalit Youth News: ಇತ್ತಿಚೀನ ದಿನಗಳಲ್ಲಿ ಸಂವಿಧಾನ ಕಾನೂನು ಎಷ್ಟೆ ಮುಂದುವರಿದರೂ ದಲಿತರ ಮೇಲಿನ ಶೋಷಣೆ ನಿಲ್ಲುತ್ತಿಲ್ಲ. ಇದೀಗ ದಲಿತ ಯುವಕರಿಬ್ಬರಿಗೆ ಬಲವಂತವಾಗಿ ಮಲ ತಿನ್ನಿಸಿ, ಚಪ್ಪಲಿಹಾರ ಹಾಕಿ ಕೃತ್ಯ ಮೆರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

Written by - Zee Kannada News Desk | Last Updated : Jul 8, 2023, 03:53 PM IST
  • ದಲಿತ ಯುವಕರಿನಿಗೆ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿದ ಪಾಪಿಗಳು
  • ಸಂವಿಧಾನ ಕಾನೂನು ಎಷ್ಟೆ ಮುಂದುವರಿದರೂ ದಲಿತರ ಮೇಲಿನ ಶೋಷಣೆ ನಿಲ್ಲುತ್ತಿಲ್ಲ
  • ಸಮುದಾಯದ 7 ಜನರ ವಿರುದ್ಧ ಪ್ರಕರಣ ದಾಖಲು
ದಲಿತ ಯುವಕರಿನಿಗೆ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿದ ಪಾಪಿಗಳು..! title=

ಮಧ್ಯಪ್ರದೇಶ: ಇತ್ತಿಚೀನ ದಿನಗಳಲ್ಲಿ ಸಂವಿಧಾನ ಕಾನೂನು ಎಷ್ಟೆ ಮುಂದುವರಿದರೂ ದಲಿತರ ಮೇಲಿನ ಶೋಷಣೆ ನಿಲ್ಲುತ್ತಿಲ್ಲ. ದಿನ ಬೆಳಾಗದರೇ ದಲಿತ ಸಮುದಾಯದ ಜನ ಶೋಷಣೆಗೆ ಒಳಗಾಗುವುದನ್ನು ನೋಡಬಹುದು. ಇದೀಗ ಯುವಕರಿಬ್ಬರಿಗೆ ಬಲವಂತವಾಗಿ ಮಾನವರ ಮಲ ತಿನ್ನಿಸಿ, ಚಪ್ಪಲಿಹಾರ ಹಾಕಿ ಕೃತ್ಯ ಮೆರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. 

 ಘಟನೆ ಹಿನ್ನಲೆ

ಈ  ಅಮಾನವೀಯ ಘಟನೆ ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ. 24 ವರ್ಷದ ಇಬ್ಬರು ಯುವಕರು, ಅದೇ ವಯಸ್ಸಿನ ಯುವತಿಯೊಬ್ಬಳ ಹತ್ತಿರ ಫೋನ್‌ ನಲ್ಲಿ ಮಾತಾನಾಡುತ್ತಿದ್ದರೆಂದು ಆ ಯುವತಿ ಕುಟುಂಬದವರು ಯುವಕರನ್ನು ಮನೆಗೆ ಕರೆಸಿ ಥಳಿಸಿ, ಮಲ ತಿನ್ನಿಸಿ, ಚಪ್ಪಲಿಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ.

ಇದನ್ನೂ ಓದಿ: ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋ; ತಕ್ಕ ಪಾಠ ಕಲಿಸಿದ 17 ವರ್ಷದ ಬಾಲಕಿ... ವಿಡಿಯೋ ವೈರಲ್‌

ಬಳಿಕ ಅದನ್ನು ಗಮನಿಸಿದ ಸ್ಥಳೀಯರೊಬ್ಬರು ಪೊಲೀಸ್‌ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳ ತನಿಖೆ ವೇಳೆ, ದಲಿತ ಯುವಕರು ಮಹಿಳೆಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಥಳಿಸಿದ್ದೇವೆ’ ಎಂದು ಹೇಳಿಕೆ ನೀಡಿದ್ದಾರೆ.

ಬಳಿಕ ಪೊಲೀಸರು ತೀವ್ರ ತನಿಖೆ ನಡೆಸಿದಾಗ ನಿಜಾಂಶ ಬಯಲಾಗಿದೆ ಎಂದು ಎಸ್‌ಪಿ ರಘುವಂಶ್ ಸಿಂಗ್ ಭಡೋರಿಯಾ ಮಾಹಿತಿ ನೀಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಆರೋಪಿಗಳಾದ ಅಜ್ಮತ್ ಖಾನ್, ವಕೀಲ್ ಖಾನ್, ಆರಿಫ್ ಖಾನ್, ಶಾಹಿದ್ ಖಾನ್, ಇಸ್ಲಾಂ ಖಾನ್, ರಹೀಶಾ ಬಾನೋ ಮತ್ತು ಸೈನಾ ಬಾನೊ ಎಂಬ ಕಿರಾತಕರನ್ನು ಬಂಧಿಸಿ, ಅಪರಾಧಿಗಳ ವಿರುದ್ಧ ಸೆಕ್ಷನ್ 323, 294, 506, 328, 342, 147, 355, 270 ಮತ್ತು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News