ಬೆಂಗಳೂರು : Lions Fight Video: ಸಿಂಹವನ್ನು ಸುಮ್ಮನೆ ಕಾಡಿನ ರಾಜ ಎಂದು ಕರೆಯುವುದಿಲ್ಲ. ಅದರ ಗತ್ತು, ಖದರ್ ರಾಜನ ಹಾಗೆಯೇ ಇದೆ. ಕಾಡಿನ ಯಾವ ಪ್ರಾಣಿಯೂ ಕೂಡಾ ಸಿಂಹದ ಮುಂದೆ ನಿಲ್ಲುವುದಿಲ್ಲ. ಇನ್ನು ಬೇಟೆಯ ಮೇಲೆ ಕಣ್ಣಿಟ್ಟರಂತೂ ಕ್ಷಣ ಮಾತ್ರದಲ್ಲಿ ಅದರ ಕತೆ ಮುಗಿದು ಬಿಡುತ್ತದೆ. ಹೀಗೆ ಆಹಾರಕ್ಕಾಗಿ ಸಿಂಹ ಬೇರೊಂದು ಪ್ರಾಣಿಯ ಬೆನ್ನ ಹಿಂದೆ ಬಿದ್ದು ಕಾದಾಡುವುದನ್ನು ನೀವು ಕೂಡಾ ಅನೇಕ ವಿಡಿಯೋಗಳಲ್ಲಿ ನೋಡಿರಬಹುದು. ಆದರೆ ಇಲ್ಲಿ ಎರಡು ಸಿಂಹಗಳು ಪರಸ್ಪರ ಜಿದ್ದಿಗೆ ಬಿದ್ದು ಕಾದಾದುತ್ತಿವೆ. ಅದು ಕೂಡಾ ಸಿಂಹಿಣಿಗಾಗಿ.
ಸಿಂಹಿಣಿಗಾಗಿ ಎರಡು ಸಿಂಹಗಳ ಕಾದಾಟ :
ಹೆಣ್ಣು ಮಾಯೆ ಎನ್ನುತ್ತಾರೆ. ಹೆಣ್ಣಿಗಾಗಿ ರಾಮಾಯಣ, ಮಹಾಭಾರತಗಳೇ ನಡೆದು ಹೋಗಿದೆ. ಇಂದು ಕೂಡಾ ದಿನ ಬೆಳಗಾದರೆ ಹೆಣ್ಣಿನ ಕಾರಣಕ್ಕೆ ಆಗುವ ಅದೆಷ್ಟೋ ಜಗಳ, ಕದನಗಳ ಬಗ್ಗೆ ಓದುತ್ತಿರುತ್ತೇವೆ, ನೋಡುತ್ತೇವೆ. ಈ ಮಾಯೆ ಪ್ರಾಣಿಗಳನ್ನು ಕೂಡಾ ಬಿಟ್ಟಿಲ್ಲ. ಹೌದು ಗಾಂಭೀರ್ಯಕ್ಕೆ ಮತ್ತೊಂದು ಹೆಸರಾಗಿರುವ ಕಾಡಿನ ರಾಜ ಸಿಂಹ ಕೂಡಾ ಸಿಂಹಿಣಿಯ ಮಾಯೆಗೆ ಬಿದ್ದಿದೆ. ಸಿಂಹಿಣಿಗಾಗಿ ಇಲ್ಲಿ ಎರಡು ಸಿಂಹಗಳ ಮಧ್ಯೆ ಕಾದಾಟವೇ ನಡೆದಿದೆ.
ಇದನ್ನೂ ಓದಿ : Viral Video: ಸಾವಿನ ದವಡೆಯಲ್ಲಿ ಸಿಲುಕಿದ್ದ ಶ್ವಾನಕ್ಕೆ ಪುನರ್ಜನ್ಮ ನೀಡಿದ ವ್ಯಕ್ತಿ..!
ಸಿಂಹಗಳ ಕಾದಾಟದ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಿಂಹ ಮತ್ತು ಸಿಂಹಿಣಿ ಜೊತೆಯಾಗಿ ಬರುವುದನ್ನು ನೋಡಬಹುದು. ಆಗ ಇದ್ದಕ್ಕಿದ್ದಂತೆಯೇ ಎದುರಿನಿಂದ ಮತ್ತೊಂದು ಸಿಂಹ ಪ್ರತ್ಯಕ್ಷವಾಗಿ ಬಿಡುತ್ತದೆ. ಈ ಎರಡನೇ ಸಿಂಹಕ್ಕೆ ವನ್ನು ಮೊದಲ ಸಿಂಹ ಸಿಂಹಿಣಿ ಜೊತೆ ಬರುತ್ತಿರುವುದನ್ನು ನೋಡಿ ಸಹಿಸುವುದು ಸಾಧ್ಯವಾಗಿವುದಿಲ್ಲ. ಮತ್ತೆ ಇನ್ನೇನು, ಸ್ಥಳದಲ್ಲಿ ಎರಡು ಸಿಂಹಗಳ ನಡುವೆ ನಡೆದೇ ಬಿಡುತ್ತದೆ ಕಾಳಗ. ಎರಡು ಸಿಂಹಗಳ ನಡುವಿನ ಕಾದಾಟವು ದೀರ್ಘಕಾಲದವರೆಗೆ ನಡೆಯುತ್ತದೆ. ಸಿಂಹಿಣಿ ಮಾತ್ರ ಯಾರು ಗೆಲ್ಲುತ್ತಾರೆ ಎಂಬಂತೆ ದೂರದಲ್ಲಿ ನಿಂತು ಎಲ್ಲವನ್ನೂ ಗಮನಿಸುತ್ತಿರುತ್ತದೆ.
ಸಿಂಹಗಳ ಕಾದಾಟದ ವಿಡಿಯೋ :
ಈ ಹೋರಾಟದಲ್ಲಿ ಎರಡನೇ ಸಿಂಹ ಮೇಲು ಗೈ ಸಾಧಿಸುವುದನ್ನು ನೋಡಬಹುದು. . ವೈಲ್ಡ್ ಅನಿಮಲ್ ಫೈಟ್‌ಗೆ ಸಂಬಂಧಿಸಿದ ಈ ವೀಡಿಯೊವನ್ನು theglobalanimalsworld ಹೆಸರಿನ Instagram ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಜನರಿಂದ ಸಾಕಷ್ಟು ಲೈಕ್ ಪಡೆಯುತ್ತಿದೆ.
ಇದನ್ನೂ ಓದಿ : Viral Video : ತನ್ನ ಪಾಡಿಗೆ ತಾನಿದ್ದ ನಾಯಿಯ ಮುಂದೆ ಮಂಗನ ದಾದಾಗಿರಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.