Viral Video: ಬಾಯಿ ಚಪ್ಪರಿಸಿ ಹಾವು ತಿಂದ ಜಿಂಕೆ!, ಹೌಹಾರುವ ವಿಡಿಯೋ ಇಲ್ಲಿದೆ ನೋಡಿ

ಕಾಡಿನಲ್ಲಿ ಹೋಗುವಾಗ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ವಾಹನದಲ್ಲಿ ಹೋಗುತ್ತಿರುವವರು ಈ ಜಿಂಕೆಯನ್ನು ಗಮಿಸಿ ಸ್ಲೋ ಮಾಡುತ್ತಾರೆ. ರಸ್ತೆ ಬದಿ ಜಿಂಕೆ ಏನೋ ತಿನ್ನುತ್ತಿದೆ ಅಂದುಕೊಂಡವರಿಗೆ ಆಶ್ಚರ್ಯ ಉಂಟಾಗಿದೆ. ಜಿಂಕೆ ಬಾಯಿ ಚಪ್ಪರಿಸಿಕೊಂಡು ಹಾವನ್ನು ತಿನ್ನುತ್ತಿದೆ.

Written by - Puttaraj K Alur | Last Updated : Jul 14, 2023, 01:42 PM IST
  • ಬಾಯಿ ಚಪ್ಪರಿಸಿ ಹಾವು ತಿನ್ನುತ್ತಿರುವ ಜಿಂಕೆ, ಹೌಹಾರಿದ ನೆಟ್ಟಿಗರು
  • ಜಿಂಕೆ ಸಸ್ಯಾಹಾರಿಯೇ ಅಥವಾ ಮಾಂಸಹಾರಿಯೇ ಅನ್ನೋದೇ ಪ್ರಶ್ನೆ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಬಾಯಿ ಚಪ್ಪರಿಸಿ ಹಾವು ತಿಂದ ಜಿಂಕೆ!, ಹೌಹಾರುವ ವಿಡಿಯೋ ಇಲ್ಲಿದೆ ನೋಡಿ  title=
ಬಾಯಿ ಚಪ್ಪರಿಸಿ ಹಾವು ತಿಂದ ಜಿಂಕೆ!

ನವದೆಹಲಿ: ಜಿಂಕೆ ಮಾಂಸಹಾರಿಯೇ..? ಜಿಂಕೆ ಕೇವಲ ಹುಲ್ಲು ತಿಂದು ಬದುಕುತ್ತದೆ ಅಲ್ಲವೇ? ಆದರೆ ಈ ವಿಡಿಯೋ ನೋಡಿದ್ರೆ ನೀವು ಹೌಹಾರುತ್ತೀರಿ. ಏಕೆಂದರೆ ಇಲ್ಲಿ ಜಿಂಕೆಯೊಂದು ಬಾಯಿ ಚಪ್ಪರಿಸಿ ಹಾವೊಂದನ್ನು ತಿನ್ನುತ್ತಿದೆ. ಹೌದು, ಇದು ಆಶ್ಚರ್ಯವಾದರೂ ನಿಜ.

ಜಿಂಕೆ ಹಾವು ತಿನ್ನುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟಿಜನ್‍ಗಳು ಹೌಹಾರಿದ್ದಾರೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಡಾ.ಸಾಮ್ರಾಟ್ ಗೌಡ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘Yummy crunchy snack’ ಅಂತಾ ವಿಡಿಯೋಗೆ ಕ್ಯಾಪ್ಶನ್ ಸಹ ಬರೆದಿದ್ದಾರೆ.

ಇದನ್ನೂ ಓದಿ: Vyapam Scam 2.0 : ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ

ಕಾಡಿನಲ್ಲಿ ಹೋಗುವಾಗ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ವಾಹನದಲ್ಲಿ ಹೋಗುತ್ತಿರುವವರು ಈ ಜಿಂಕೆಯನ್ನು ಗಮಿಸಿ ಸ್ಲೋ ಮಾಡುತ್ತಾರೆ. ರಸ್ತೆ ಬದಿ ಜಿಂಕೆ ಏನೋ ತಿನ್ನುತ್ತಿದೆ ಅಂದುಕೊಂಡವರಿಗೆ ಆಶ್ಚರ್ಯ ಉಂಟಾಗಿದೆ. ಜಿಂಕೆ ಬಾಯಿ ಚಪ್ಪರಿಸಿಕೊಂಡು ಹಾವನ್ನು ತಿನ್ನುತ್ತಿದೆ. ಹುಲ್ಲು ತಿನ್ನುವ ಬದಲು ಜಿಂಕೆ ಯಾಕೆ ಹಾವನ್ನು ತಿನ್ನುತ್ತಿದೆ ಅನ್ನೋದೆ ಕೆಲವರಿಗೆ ಗೊಂದಲ ಮೂಡಿಸಿದೆ.

21 ನಿಮಿಷಗಳ ಈ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದಾರೆ. ಜಿಂಕೆ ಯಾಕೆ ಹಾವು ತಿನ್ನುತ್ತಿದೆ? ಜಿಂಕೆ ಸಸ್ಯಾಹಾರಿಯೇ ಅಥವಾ ಮಾಂಸಹಾರಿಯೇ? ಅಂತಾ ಅನೇಕರು ಪ್ರಶ್ನಿಸಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಯಶಸ್ಸಿನ ಹಿಂದಿದೆ 54 ನಾರಿಯರ ಶಕ್ತಿ: ದೇಶದ ಕನಸು ನನಸಾಗಿದ ಮಹಿಳೆಯರು ಇವರೇ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News